ಸಾರಾಂಶ
ಚಳ್ಳಕೆರೆ ತಾಲೂಕಿನ ತಿಪ್ಪಾರೆಡ್ಡಿಹಳ್ಳಿ ಗ್ರಾಮದಲ್ಲಿ ಜೈ ಭೀಮಾ ರಾಷ್ಟ್ರೀಯ ಪ್ರಜಾಪ್ರಭುತ್ವ ಸೇನೆ ಹಮ್ಮಿಕೊಂಡಿದ್ದ ಜಯಂತಿ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನ ದೇಶದ ಸುಲಲಿತ ಆಡಳಿತಕ್ಕೆ ನಾಂದಿಯಾಗಿದೆ ಎಂದು ತಳಕು-ನಾಯಕನಹಟ್ಟಿ ಬಿಜೆಪಿ ಮಂಡಲಾಧ್ಯಕ್ಷ ಚನ್ನಗಾನಹಳ್ಳಿ ಮಲ್ಲೇಶ್ ತಿಳಿಸಿದರು.ತಾಲೂಕಿನ ತಿಪ್ಪಾರೆಡ್ಡಿಹಳ್ಳಿ ಗ್ರಾಮದಲ್ಲಿ ಜೈ ಭೀಮಾ ರಾಷ್ಟ್ರೀಯ ಪ್ರಜಾಪ್ರಭುತ್ವ ಸೇನೆ ಹಮ್ಮಿಕೊಂಡಿದ್ದ ಅಂಬೇಡ್ಕರ್‌ರವರ 134ನೇ ಮತ್ತು ಬಾಬುಜಗಜೀವನರಾಮ್ 118ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಭಿವೃದ್ಧಿಪರ ಚಿಂತನೆಗಳಿಗೆ ವಿವಿಧ ಕಾರ್ಯಯೋಜನೆಗಳ ರೂಪುರೇಷೆಗಳನ್ನು ಸಿದ್ಧಪಡಿಸಲು ಅಂಬೇಡ್ಕರ್ ಸಂವಿಧಾನ ನಮಗೆ ಪ್ರೇರಣೆಯಾಗಿದೆ. ವಿಶೇಷ ಜ್ಞಾನವನ್ನು ಹೊಂದಿದ್ದ ಅಂಬೇಡ್ಕರ್ ಶೋಷಿತ ಸಮುದಾಯವೂ ಸೇರಿದಂತೆ ಅಲಕ್ಷಿತಕ್ಕೆ ಒಳವಾದ ಎಲ್ಲಾ ಸಮುದಾಯಗಳ ಪರವಾಗಿ ಹೋರಾಟ ನಡೆಸಿದ ಮಹಾನೀಯರು ಎಂದರು.ಸಮಾಜದಲ್ಲಿ ಆಳಾವಾಗಿ ಬೇರೂರಿದ್ದ ಜಾತೀಯತೆಯ ವಿಷಭಾವನೆಯನ್ನು ದೂರ ಮಾಡುವಲ್ಲಿ ಅಂಬೇಡ್ಕರ್ ಮತ್ತು ಜಗಜೀನರಾಮ್ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಚಿದಾನಂದ, ತಾಲೂಕು ಲ್ಯಾಬ್ ನೋಡಲ್ ಅಧಿಕಾರಿ ಎಚ್.ತಿಪ್ಪೇಸ್ವಾಮಿ, ಹೊನ್ನೂರುಮಾರಣ್ಣ, ಸಿದ್ದಾರ್ಥ, ಮಧು, ನಿಂಗಣ್ಣ, ವೀರಣ್ಣ, ಸುರೇಶ್, ಮಚ್ಚಪ್ಪ ಮುಂತಾದವರು ಉಪಸ್ಥಿತರಿದ್ದರು.