ಅಂಬೇಡ್ಕರ್ ದೇಶಕ್ಕೆ ಕೊಡುಗೆ ನೀಡಿದ್ದಾರೆ: ನ್ಯಾ.ವೈದ್ಯ ಶ್ರೀಕಾಂತ್

| Published : Apr 17 2025, 12:08 AM IST

ಅಂಬೇಡ್ಕರ್ ದೇಶಕ್ಕೆ ಕೊಡುಗೆ ನೀಡಿದ್ದಾರೆ: ನ್ಯಾ.ವೈದ್ಯ ಶ್ರೀಕಾಂತ್
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಸಂವಿಧಾನ ರಚಿಸಿ ನಮ್ಮ ದೇಶಕ್ಕೆ ಕೊಡುಗೆಯಾಗಿ ನೀಡಿದ ಡಾ. ಬಿ.ಆರ್.ಅಂಬೇಡ್ಕರ್ ನಮ್ಮ ದೇಶದ ಆಸ್ತಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ವೈದ್ಯ ಶ್ರೀಕಾಂತ್ ಹೇಳಿದ್ದಾರೆ.

ವಕೀಲರ ಸಂಘದ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ

ಕನ್ನಡಪ್ರಭ ವಾರ್ತೆ, ತರೀಕೆರೆ

ಸಂವಿಧಾನ ರಚಿಸಿ ನಮ್ಮ ದೇಶಕ್ಕೆ ಕೊಡುಗೆಯಾಗಿ ನೀಡಿದ ಡಾ. ಬಿ.ಆರ್.ಅಂಬೇಡ್ಕರ್ ನಮ್ಮ ದೇಶದ ಆಸ್ತಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ವೈದ್ಯ ಶ್ರೀಕಾಂತ್ ಹೇಳಿದ್ದಾರೆ.

ವಕೀಲರ ಸಂಘದಿಂದ ನಡೆದ ಡಾ. ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿ ಉದ್ಘಾಟಿಸಿ ಮಾತನಾಡಿ, ಈ ಕಾರ್ಯಕ್ರಮದಲ್ಲಿ ನಾವು ಭಾಗವಹಿಸುವುದು ನಮ್ಮ ಸೌಭಾಗ್ಯ ಪ್ರತಿವರ್ಷ ಅಂಬೇಡ್ಕರ್ ಜಯಂತಿಯನ್ನು ವಿಜೃಂಭಣೆ ಯಿಂದ ಆಚರಿಸಬೇಕು ಎಂದರು.

ಸಿವಿಲ್ ನ್ಯಾಯಾಧೀಶ ರಾಹುಲ್ ಶೆಟ್ಟಿಗಾರ್ ಮಾತನಾಡಿ ಪ್ರತಿಭಾವಂತರಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಭಾರತದ ಸಂವಿಧಾನ ರಚಿಸಿದ ಕೀರ್ತಿ ಸಲ್ಲುತ್ತದೆ ಎಂದು ಹೇಳಿದರು.ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಊರ್ಮಿಳಾ ಮಾತನಾಡಿ ಸಂವಿಧಾನ ಮಹಿಳೆಯರಿಗೆ ಸ್ಥಾನಮಾನ ಹೆಚ್ಚಿನ ಸ್ವಾತಂತ್ರ್ಯ ಕಲ್ಪಿಸಿಕೊಟ್ಟಿದೆ. ಜಗತ್ತಿನಲ್ಲಿ ಅತ್ಯಂತ ದೊಡ್ಡ ಸಂವಿಧಾನ ನಮ್ಮದು ಎಂದರು.

ವಕೀಲರ ಸಂಘದ ಅಧ್ಯಕ್ಷ ಬಿ.ಶೇಖರ್ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿರುವ ಸಂವಿಧಾನ ಭಾರತ ದೇಶದ ಪ್ರತಿಯೊಬ್ಬರಿಗೂ ಅನ್ವಯಿಸುತ್ತದೆ. ಸಂವಿಧಾನವನ್ನು ಗೌರವಿಸಬೇಕು ಹಾಗೂ ಸಂವಿಧಾನದ ಎಲ್ಲಾ ಅಂಶಗಳನ್ನು ಪರಿಪಾಲಿಸಬೇಕು ಎಂದರು.ಹಿರಿಯ ವಕೀಲರಾದ ಕೆ.ಲಿಂಗರಾಜು, ಜಿ.ಎನ್.ಚಂದ್ರಶೇಖರ್, ಅವಿನಾಶ್, ಜಿ.ಮಂಜುನಾಥ್, ವಿಕಾಸ್, ಬಸವರಾಜ್, ಮಂಜುನಾಥ್, ಎಸ್. ಸುರೇಶ್ ಚಂದ್ರ, ಜಿ.ಸಿ.ತಿಮ್ಮಯ್ಯ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

16ಕೆಟಿಆರ್.ಕೆ.2ಃ

ತರೀಕೆರೆಯಲ್ಲಿ ವಕೀಲರ ಸಂಘದಿಂದ ನಡೆದ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಹಿರಿಯ ಸಿವಿಲ್ ನ್ಯಾಯಾಧೀಶರಾದ ವೈದ್ಯ ಶ್ರೀಕಾಂತ್ ಉದ್ಘಾಟಿಸಿದರು. ವಕೀಲರ ಸಂಘದ ಅಧ್ಯಕ್ಷ ಬಿ.ಶೇಖರ್ ನಾಯ್ಕ ಮತ್ತಿತರರು ಇದ್ದರು.