ಸಾಮರಸ್ಯ ಜೀವನ ಸಾಗಿಸಲು ಅಂಬೇಡ್ಕರ್ ಸ್ಫೂರ್ತಿ: ಮುಖಂಡ ಪ್ರಕಾಶ್‌

| Published : Dec 08 2024, 01:17 AM IST

ಸಾಮರಸ್ಯ ಜೀವನ ಸಾಗಿಸಲು ಅಂಬೇಡ್ಕರ್ ಸ್ಫೂರ್ತಿ: ಮುಖಂಡ ಪ್ರಕಾಶ್‌
Share this Article
  • FB
  • TW
  • Linkdin
  • Email

ಸಾರಾಂಶ

ಲಿಖಿತ ಹಾಗೂ ಬೃಹತ್ ಸಂವಿಧಾನದ ಆಶಯಗಳು ಎಲ್ಲಾ ವರ್ಗದ, ಧರ್ಮದವರಲ್ಲಿ ಸಮನ್ವಯತೆ, ಸಹಭಾಗಿತ್ವ ಸಹಬಾಳ್ವೆ ಜಾತ್ಯತೀತ ಮನೋಭಾವ ಸಹೋದರತ್ವ ಸಮಾನತೆಯನ್ನು ಎತ್ತಿ ಹಿಡಿದಿದೆ. ನಮ್ಮ ಸಂವಿಧಾನ ವಿಶ್ವಕ್ಕೆ ಮಾದರಿ. ಹಾಗಾಗಿ ನಾವು ಅವರಿಗೆ ಗೌರವವನ್ನು ಸಲ್ಲಿಸಬೇಕು .

ಕನ್ನಡಪ್ರಭ ವಾರ್ತೆ ಮದ್ದೂರುಪಟ್ಟಣದ ಪುರಸಭೆ ಆವರಣದಲ್ಲಿ ವಿವಿಧ ಸಂಘ, ಸಂಸ್ಥೆಗಳ ವತಿಯಿಂದ ನಡೆದ ಡಾ.ಬಿ.ಆರ್.ಅಂಬೇಡ್ಕರ್ 68ನೇ ಪರಿನಿರ್ವಾಣ ದಿನ ಪ್ರಯುಕ್ತ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಸಿದ್ದರಾಜು ಚಾಲನೆ ನೀಡಿದರು.ರೈತ ಸಂಘದ ಮುಖಂಡ ಸೋ,ಶಿ, ಪ್ರಕಾಶ್ ಮಾತನಾಡಿ, ಅಂಬೇಡ್ಕರ್ ಈ ದೇಶದ ಎಲ್ಲಾ ಶೋಷಿತ ವರ್ಗದ ಜನರಿಗೂ ಸಂವಿಧಾನ ಬದ್ಧವಾದ ಕಾನೂನುಗಳನ್ನು ಜಾರಿಗೆ ತಂದಿದ್ದಾರೆ. ಇದರಿಂದ ಎಲ್ಲಾ ಜನರು ಸಾಮರಸ್ಯದಿಂದ ಜೀವನ ನಡೆಸಲು ಸಾಧ್ಯವಾಗಿದೆ. ಅಂಬೇಡ್ಕರ್ ಪರಿನಿರ್ವಾಣ ಹೊಂದಿರಬಹುದು. ಆದರೆ, ಅವರು ವಿಶ್ವ ಜ್ಞಾನಿ ಹಾಗಾಗಿ ಯಾವಾಗಲೂ ಅವರ ಅಲೋಚನೆ, ಸಿದ್ಧಾಂತ ಅಮರವಾಗಿ ಉಳಿದಿದೆ ಎಂದು ಹೇಳಿದರು.ನಿವೃತ್ತಿ ಶಿಕ್ಷಕ ಚನ್ನಪ್ಪ ಮಾತನಾಡಿ, ಲಿಖಿತ ಹಾಗೂ ಬೃಹತ್ ಸಂವಿಧಾನದ ಆಶಯಗಳು ಎಲ್ಲಾ ವರ್ಗದ, ಧರ್ಮದವರಲ್ಲಿ ಸಮನ್ವಯತೆ, ಸಹಭಾಗಿತ್ವ ಸಹಬಾಳ್ವೆ ಜಾತ್ಯತೀತ ಮನೋಭಾವ ಸಹೋದರತ್ವ ಸಮಾನತೆಯನ್ನು ಎತ್ತಿ ಹಿಡಿದಿದೆ. ನಮ್ಮ ಸಂವಿಧಾನ ವಿಶ್ವಕ್ಕೆ ಮಾದರಿ. ಹಾಗಾಗಿ ನಾವು ಅವರಿಗೆ ಗೌರವವನ್ನು ಸಲ್ಲಿಸಬೇಕು ಎಂದು ತಿಳಿಸಿದರು.ಕಸ್ತೂರಿ ಜನಪರ ವೇದಿಕೆ ಜಿಲ್ಲಾ ಅಧ್ಯಕ್ಷ ಉಮಾಶಂಕರ್, ಬುದ್ಧಿಸ್ಟ್ ತಾಲೂಕು ಅಧ್ಯಕ್ಷ ಹುಲಿಗೆರೆಪುರ ಚಂದ್ರಶೇಖರ್, ಗ್ರಾಪಂ ಮಾಜಿ ಉಪಾಧ್ಯಕ್ಷೆ ನಳಿನ , ವಿಶ್ವ ಕರ್ಮ ಜಿಲ್ಲಾ ಅಧ್ಯಕ್ಷ ಆನಂದ ಚಾರಿ, ಶಿಕ್ಷಕ ಬಿ.ವಿ.ಹಳ್ಳಿ ನಾರಾಯಣ್ ಮಾತನಾಡಿದರು, ಸಮಾರಂಭದಲ್ಲಿ ಮಾಜಿ ಪುರಸಭಾ ಅಧ್ಯಕ್ಷ ಸುರೇಶ್ ಕುಮಾರ್, ಪ್ರಗತಿ ಪರ ಚಿಂತಕ ಕೆ.ಟಿ.ಶಿವಕುಮಾರ್, ಅಹಿಂದ ಸಂರಕ್ಷಣಾ ವೇದಿಕೆ ಸಂಘಟನಾ ಕಾರ್ಯದರ್ಶಿ ಶಶಿಕುಮಾರ್, ದಾಕ್ಷಾಯಿಣಿ, ಜಯರಾಮಣ್ಣ, ಮರಳಿಗ ಶಿವರಾಜ್, ದಸಂಸ ಜಿಲ್ಲಾ ಅಧ್ಯಕ್ಷ ಆನಂದ, ಮುಖ್ಯ ಶಿಕ್ಷಕ ಚೌಡಯ್ಯ, ಶಿಕ್ಷಕರಾದ, ಕೆ.ಜೆ,ಗೋವಿಂದ ರಾಜು, ಮಹೇಶ್, ಶಿವಲಿಂಗಯ್ಯ, ಮರಿಸ್ವಾಮಿ, ಚಂದ್ರು, ಮುರುಳಿ, ನಾಗರಾಜ್, ಮುಖಂಡರಾದ ಮೋಹನ್, ಮರಿದೇವರು, ಧನಂಜಯ, ಶ್ರೀಕ ಶ್ರೀನಿವಾಸ್, ಮಹದೇವಯ್ಯ,ಎಚ್,ಸಿ. ಶಿವಕುಮಾರ್, ಅಪ್ಪು ರಮೇಶ್,,ಶಂಕರ್, ವೀರಭದ್ರ, ನಾಗಲಿಂಗ, ಲಿಂಗರಾಜ್, ಹಾಗೂ ಇತರರು ಇದ್ದರು.