ಅಸ್ಪೃಶ್ಯತೆಯ ಆಧಾರದ ಮೇಲೆ ಸಮಾಜದಿಂದ ದೂರ ಉಳಿದಿದ್ದ ಆರ್ಥಿಕವಾಗಿ ಹಿಂದುಳಿದ್ದಿದ್ದವರನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರಿಗೆ ಸಮಾಜದಲ್ಲಿ ಸಮಾನತೆ ತಂದುಕೊಡುವ ನಿಟ್ಟಿನಲ್ಲಿ ಪ್ರವೃತ್ತರಾಗಿದ್ದರು. ನಾವುಗಳು ಅವರ ಆದರ್ಶ, ತತ್ವಗಳನ್ನು ಮೈಗೂಡಿಸಿಕೊಂಡು ಅವರ ಮಾರ್ಗದರ್ಶನದಲ್ಲಿ ಸಂವಿಧಾನವನ್ನು ತಿಳಿದು ನಡೆಯಬೇಕು.

ಹಲಗೂರು:

ಊಟ, ನಿದ್ದೆ ತ್ಯಜಿಸಿ ಸುಮಾರು ಮೂರು ವರ್ಷಗಳ ಕಾಲ ಶ್ರಮವಹಿಸಿ ದೇಶವೇ ಮೆಚ್ಚುವಂತಹ ಸಂವಿಧಾನ ರಚಿಸಿದ ಮಹಾನ್ ವ್ಯಕ್ತಿ ಅಂಬೇಡ್ಕರ್ ಎಂದು ಅರಣ್ಯ ಇಲಾಖೆಯ ಪ್ರಮೋದ್ ಕುಮಾರ್ ದೇವ್ ತಿಳಿಸಿದರು.

ಇಲ್ಲಿನ ಅಂಬೇಡ್ಕರ್ ಭವನ ನಿರ್ವಹಣಾ ಸಮಿತಿ ನೂತನ ಕಟ್ಟಡದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ 135ನೇ ಜನ್ಮದಿನದಲ್ಲಿ ಮಾತನಾಡಿ, ಅಂಬೇಡ್ಕರ್ ಬಾಲ್ಯದಿಂದಲೇ ಅಸ್ಪೃಶ್ಯತೆ, ಕೇಳಿರಿಮೆ, ಬಡತನವನ್ನು ಅನುಭವಿಸಿದ್ದರು. ಆದರೆ, ಅವರು ತಾವು ಪಡೆದ ಶಿಕ್ಷಣದ ಮೂಲಕ ಇಡೀ ದೇಶವೇ ಮೆಚ್ಚುವಂತಹ ಸಂವಿಧಾನ ರಚಿಸಿ ಮಹಾನ್ ವ್ಯಕ್ತಿಯಾದರು ಎಂದರು.

ಅಸ್ಪೃಶ್ಯತೆಯ ಆಧಾರದ ಮೇಲೆ ಸಮಾಜದಿಂದ ದೂರ ಉಳಿದಿದ್ದ ಆರ್ಥಿಕವಾಗಿ ಹಿಂದುಳಿದ್ದಿದ್ದವರನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರಿಗೆ ಸಮಾಜದಲ್ಲಿ ಸಮಾನತೆ ತಂದುಕೊಡುವ ನಿಟ್ಟಿನಲ್ಲಿ ಪ್ರವೃತ್ತರಾಗಿದ್ದರು. ನಾವುಗಳು ಅವರ ಆದರ್ಶ, ತತ್ವಗಳನ್ನು ಮೈಗೂಡಿಸಿಕೊಂಡು ಅವರ ಮಾರ್ಗದರ್ಶನದಲ್ಲಿ ಸಂವಿಧಾನವನ್ನು ತಿಳಿದು ನಡೆಯಬೇಕು ಎಂದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಆಲಂಗೂರ್ ಮಂಜುನಾಥ್, ಹಲಗೂರು ಅಂಬೇಡ್ಕರ್ ಸಂಘದ ಕಾರ್ಯದರ್ಶಿ ಟಿ.ಎಚ್.ಸ್ವಾಮಿ ಮಾತನಾಡಿ, ಅಂಬೇಡ್ಕರ್ ಕುರಿತು ಮಾತನಾಡಿದರು. ಇದೇ ವೇಳೆ ಸಂಘದಿಂದ ವಿವಿಧ ಗ್ರಾಮಗಳಲ್ಲಿ ಇರುವ 15 ಜನ ಹಿರಿಯ ನಾಗರಿಕರು ಹಾಗೂ ನೂರು ವರ್ಷ ತುಂಬಿರುವ ಐದು ಜನ ಶತಾಯುಶಷಿಗಳಾದ ಮಾದಯ್ಯ, ಮಾದಮ್ಮ, ಜಯಮ್ಮ, ಚಿಕ್ಕಹೊನ್ನಯ್ಯ, ಪುಟ್ಟ ಮಾದಯ್ಯ ಸೇರಿದಂತೆ 20 ಜನರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ನಾಗಸಿದ್ಧಯ್ಯ, ಗೌರವಾಧ್ಯಕ್ಷ ಸಿದ್ದರಾಮಯ್ಯ, ಉಪಾಧ್ಯಕ್ಷ ಕಟಕಯ್ಯ, ಸಾಗ್ಯ ಕೆಂಪಯ್ಯ, ಹಾಗೂ ನಾಡಕಚೇರಿಯ ಉಪತಹಸೀಲ್ದಾರ್ ಕೆ. ನಟರಾಜು, ಎಎಸ್ ಐ ಶಿವಣ್ಣ ಸೇರಿದಂತೆ ಇತರರು ಇದ್ದರು.