ಅಂಬೇಡ್ಕರ್ ದಲಿತ ಸಮುದಾಯಕ್ಕೆ ಸೀಮಿತವಲ್ಲ

| Published : Feb 08 2024, 01:33 AM IST

ಸಾರಾಂಶ

ಸೂಲಿಬೆಲೆ: ಮೌಢ್ಯದ ಆಚರಣೆಯ ವಿರುದ್ದವಾಗಿ ಧ್ವನಿ ಎತ್ತಿ ಶಿಕ್ಷಣವನ್ನು ಕಡ್ಡಾಯವಾಗಿ ಪಡೆಯಬೇಕು ಎಂಬ ದಿಸೆಯಲ್ಲಿ ಹೋರಾಟ ಮಾಡಿದವರು ಹಾಗೂ ಜಾತಿ ಪದ್ದತಿಯನ್ನು ತೀವ್ರವಾಗಿ ಖಂಡಿಸಿದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಕೇವಲ ದಲಿತ ಸಮುದಾಯಕ್ಕೆ ಸಮಿತ ಮಾಡುವ ವ್ಯಕ್ತಿಯಲ್ಲ ಅದೊಂದು ಶಕ್ತಿ ಎಂದು ಸೂಲಿಬೆಲೆ ಗ್ರಾಮಪಂಚಾಯತ್ ಅಧ್ಯಕ್ಷ ಜನಾರ್ಧನರೆಡ್ಡಿ ಹೇಳಿದರು.

ಸೂಲಿಬೆಲೆ: ಮೌಢ್ಯದ ಆಚರಣೆಯ ವಿರುದ್ದವಾಗಿ ಧ್ವನಿ ಎತ್ತಿ ಶಿಕ್ಷಣವನ್ನು ಕಡ್ಡಾಯವಾಗಿ ಪಡೆಯಬೇಕು ಎಂಬ ದಿಸೆಯಲ್ಲಿ ಹೋರಾಟ ಮಾಡಿದವರು ಹಾಗೂ ಜಾತಿ ಪದ್ದತಿಯನ್ನು ತೀವ್ರವಾಗಿ ಖಂಡಿಸಿದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಕೇವಲ ದಲಿತ ಸಮುದಾಯಕ್ಕೆ ಸಮಿತ ಮಾಡುವ ವ್ಯಕ್ತಿಯಲ್ಲ ಅದೊಂದು ಶಕ್ತಿ ಎಂದು ಸೂಲಿಬೆಲೆ ಗ್ರಾಮಪಂಚಾಯತ್ ಅಧ್ಯಕ್ಷ ಜನಾರ್ಧನರೆಡ್ಡಿ ಹೇಳಿದರು.

ಸೂಲಿಬೆಲೆ ಗ್ರಾಪಂಗೆ ಬುಧುವಾರ ಸಂಜೆ ಆಗಮಿಸಿದ ಸಂವಿಧಾನ ಜಾಗೃತಿ ರಥಕ್ಕೆ ಸ್ವಾಗತ ಕೋರಿ ಮಾತನಾಡಿದ ಅವರು, ಎಲ್ಲಾ ಸಮುದಾಯಗಳಿಗೆ ಸಿಗಬೇಕಾದ ಹಕ್ಕುಗಳನ್ನು ಸಂವಿಧಾನದ ಮೂಲಕ ದಯಪಾಲಿಸಿದ ಶಿಲ್ಪಿ ಹಾಗೂ ಸಂವಿಧಾನಕ್ಕೆ ಸಮಾನ ಗೌರವ ಸಿಗುವಂತಾಗಬೇಕು ಎಂದು ಹೇಳಿದರು.

ಸರ್ಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಸುಬ್ರಹ್ಮಣಿ ಮಾತನಾಡಿ, ನಮ್ಮ ಭಾರತ ದೇಶದ್ದು ಬೃಹತ್ ಪ್ರಜಾಸತ್ತಾತ್ಮಕ ರಾಷ್ಟ್ರ, ವೈವಿದ್ಯತೆಯ ದೇಶ ನಮ್ಮ ಹೆಮ್ಮೆಯ ಸಂವಿಧಾನ ವಿಶ್ವಕ್ಕೆ ಮಾದರಿ. ಇಂತಹ ಸಂವಿಧಾನ ನೀಡಿದ ಬಾಬಾ ಸಾಹೇಬರ ಪಡೆದ ನಾವು ಧನ್ಯರು. ಇಂತಹ ಬಾಬಾ ಸಾಹೇಬರು ಮತ್ತೆ ಮರಳಿ ಜನ್ಮವೆತ್ತಬೇಕು ಎಂದರು.

ಶೋಷಿತ ವರ್ಗಗಳು ಹಾಗೂ ದುರ್ಬಲರು ಅಭಿವೃದ್ಧಿ ಕಾಣಬೇಕಾದರೆ ಸಂವಿಧಾನದ ಎಲ್ಲಾ ಆಶಯಗಳು ಕಡ್ಡಾಯವಾಗಿ ಜಾರಿಯಾಗಬೇಕು. ಸರ್ವರಿಗೂ ಸಮಪಾಲು ಸಮಬಾಳು ಎಂಬ ಧ್ಯೇಯ ಅನುಷ್ಠಾನವಾಗಬೇಕು. ಕಾನೂನು ಎಂದಿಗೂ ದುರುಪಯೋಗವಾಗಬಾರದು ಎಂದರು.

ಸಾಮಾಜಿಕ ಕಾರ್ಯಕರ್ತ ಇಟ್ಟಸಂದ್ರ ವೆಂಕಟೇಶ್ ಮಾತನಾಡಿ, ಭಾರತ ಸಂವಿಧಾನವನ್ನು ತಿರುಚುವ ಹುನ್ನಾರ ನಡೆಯುತ್ತಿರುವುದು ಸರಿಯಲ್ಲ. ಇಂದು ಹೆಣ್ಣು ಮಕ್ಕಳಿಗೆ ಶಿಕ್ಷಣ ಹಾಗೂ ಮತದಾನದ ಹಕ್ಕು ದೊರೆತಿರುವುದು ಸಂವಿಧಾನದ ಮೂಲಕ ಇಂತಹ ಸಂವಿಧಾನವನ್ನು ಗೌರವಿಸೋಣ ಉಳಿಸೊಣ ಎಂದರು.

ಪಿಡಿಒ ಮಂಜುನಾಥ್‌ ಮಾತನಾಡಿ, ಸಾಂವಿಧಾನಿಕ ನಿಯಮಗಳು ಹಾಗೂ ಆಶಯಗಳನ್ನು ಸಾರ್ವಜನಿಕವಾಗಿ ಸಮಾಜದ ಕಟ್ಟಕಡೆಯ ಪ್ರಜೆಗಳಿಗೂ ತಲುಪಿಸುವ ಕೆಲಸವಾಗಬೇಕು, ಸಂವಿಧಾನಕ್ಕೆ ಎಲ್ಲರೂ ತಲೆ ಬಾಗಲೇಬೇಕು ಎಂದರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದರಾಜು, ತಾಪಂ ವ್ಯವಸ್ಥಾಪಕಿ ಶಶಿಕಲಾ, ನಾಡ ಕಚೇರಿ ಉಪ ತಹಸೀಲ್ದಾರ್ ಚೈತ್ರಾ, ರಾಜಸ್ವ ನೀರಿಕ್ಷ ನ್ಯಾನಮೂರ್ತಿ, ಸಮಾಜ ಕಲ್ಯಾಣ ಇಲಾಖೆ ಪುಟ್ಟಸ್ವಾಮಿ, ನಿವೃತ್ತ ಪ್ರಾಚಾರ್ಯ ನಾರಾಯಣಸ್ವಾಮಿ, ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಸುಬ್ರಮಣಿ, ಗ್ರಾಪಂ ಉಪಾಧ್ಯಕ್ಷೆ ಷಾಜಿಯಾಖಾನಂ, ಸದಸ್ಯರಾಧ ನರಸಿಂಹಮೂರ್ತಿ, ರಿಯಾಜ್, ಸೌಮ್ಯ, ಅಲ್ತಾಪ್, ತೋಟದಪ್ಪ, ಗ್ರಾಪಂ ಬಿಲ್ ಕಲೆಕ್ಟರ್ ನಾರಾಯಣಸ್ವಾಮಿ, ರಂಗಸ್ವಾಮಿ, ಚಂದ್ರಪ್ಪ, ಮಂಜುನಾಥ್, ನಾಗವೇಣಿ ಇತರರಿದ್ದರು.ಚಿತ್ರ; ೦೭ ಸೂಲಿಬೆಲೆ ೧ ಜೆಪಿಜೆ ನಲ್ಲಿದೆ