ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಶತ ಶತಮಾನಗಳಿಂದ ಇನ್ನೊಬ್ಬರ ಮನೆಯಲ್ಲಿ ಜೀತ ಮಾಡಿ, ಅವರ ಆಶ್ರಯದಲ್ಲಿಯೇ ಬದುಕಬೇಕಾಗಿದ್ದ ಶೋಷಿತ ಸಮುದಾಯಗಳು ಇಂದು ಸ್ವಾಭಿಮಾನದಿಂದ ಬದುಕು ಕಾಣುವಂತಾಗಿದ್ದರೆ, ಅದಕ್ಕೆ ಕಾರಣಕರ್ತರು ನಮ್ಮ ಬಾಬಾ ಸಾಹೇಬ್ ಅಂಬೇಡ್ಕರ್ ಎಂಬುದನ್ನು ಮರೆಯುವಂತಿಲ್ಲ ಎಂದು ಚನ್ನೇನಹಳ್ಳಿಯ ಛಲವಾದಿ ಜಗದ್ಗುರು ಪೀಠದ ಬಸವಲಿಂಗಮೂರ್ತಿ ಸ್ವಾಮೀಜಿ ತಿಳಿಸಿದ್ದಾರೆ.ನಗರದ ಶಿರಡಿ ಸಾಯಿಬಾಬಾ ನಗರದ ಛಲವಾದಿ ಸಾಂಸ್ಕೃತಿಕ ಭವನದಲ್ಲಿ ತುಮಕೂರು ಛಲವಾದಿ ಮಹಾಸಭಾ ವತಿಯಿಂದ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೩ನೇ ಜನ್ಮ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಇನ್ನೊಬ್ಬರ ಆಶಯದಲ್ಲಿಯೇ ಬದುಕುತ್ತಿದ್ದ ಸಮುದಾಯಗಳಿಗೆ ಸಾಂವಿಧಾನಿಕ ಹಕ್ಕುಗಳನ್ನು ಕೊಟ್ಟು ಇತರರಂತೆ ಬದುಕುವ ಅವಕಾಶವಿತ್ತರೂ, ಅಧಿಕಾರವಂತರ ನಿರ್ಲಕ್ಷದಿಂದ ಇಂದಿಗೂ ಶೋಷಣೆಗೆ ಒಳಗಾಗುತ್ತಿರುವುದು ನಿಜಕ್ಕೂ ವಿಷಾದದ ಸಂಗತಿಯಾಗಿದೆ ಎಂದರು.ಕಲಾಶ್ರೀ ಡಾ.ಲಕ್ಷ್ಮಣದಾಸ್ ಮಾತನಾಡಿ, ಅಸ್ಪೃಷ್ಯತೆಗೆ ಶಿಕ್ಷಣವೊಂದೇ ದಾರಿ ಎಂಬುದನ್ನು ಅರಿತಿದ್ದ ಡಾ.ಬಾಬಾಸಾಹೇಬ್ ಅಂಬೇಡ್ಕರ್, ಈ ದೇಶದಲ್ಲಿ ಚಾಲ್ತಿಯಲ್ಲಿರುವ ಎಲ್ಲಾ ವಿಷಯಗಳಲ್ಲಿಯೂ ಪದವಿ, ಸ್ನಾತಕೋತ್ತರ ಪದವಿಗಳನ್ನು ಪಡೆಯುವ ಮೂಲಕ ಚಾತುರ್ವಣ ವ್ಯವಸ್ಥೆಯಲ್ಲಿ ಶೋಷಣೆ ಒಳಗಾಗಿದ್ದ ಸಮುದಾಯಗಳಿಗೆ ಬದುಕಿನ ದಾರಿ ತೋರಿಸಿದರು ಎಂದರು.ತುಮಕೂರು ಛಲವಾದಿ ಮಹಾಸಭಾ ಅಧ್ಯಕ್ಷ ಡಾ.ಪಿ.ಚಂದ್ರಪ್ಪ, ನಿವೃತ್ತ ಇಇ ಆದಿನಾರಾಯಣ್, ಸರಕಾರಿ ಅಭಿಯೋಜಕ ರಾಜಣ್ಣ, ಸುವರ್ಣಪ್ರಗತಿ ಪತ್ರಿಕೆ ಸಂಪಾದಕ ಹೆಚ್.ಎಸ್.ಪರಮೇಶ್, ರಾಮಾಜೋಯಿಸ್ ನಗರ ಹಿತರಕ್ಷಣಾ ಸಮಿತಿ ಅಧ್ಯಕ್ಷ ವಸಂತಕುಮಾರ್, ಪುಟ್ಟಬೋರಯ್ಯ, ಚಂದ್ರಶೇಖರ್, ಟಿ.ಆರ್.ನಾಗೇಶ್,ಶ್ರೀನಿವಾಸ್,ಹುಚ್ಚವೀರಯ್ಯ,ಗಂಗಾಧರ್ ಮತ್ತಿತರರು ಉಪಸ್ಥಿತರಿದ್ದರು.