ಕಾರ್ಕಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.

ಕಾರ್ಕಳ: ಕಾರ್ಕಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ವಕ್ತಾರ ಬಿಪಿನ್ ಚಂದ್ರಪಾಲ್ ನಕ್ರೆ ಮಾತನಾಡಿ, ಅಂಬೇಡ್ಕರ್ ರಚಿತ ಸಂವಿಧಾನದಲ್ಲಿ ಎಲ್ಲರಿಗೂ ಸಮಾನವಾದ ಹಕ್ಕುಗಳಿವೆ. ಆದರೆ ಇಂದು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯು ಲೋಕಸಭೆಯಲ್ಲಿ 400 ಸೀಟು ಗೆದ್ದು ಕೊಂಡರೆ ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆ ಎನ್ನುವ ಮಾತಗಳನ್ನಾಡುತ್ತಿರುವುದು ಇದು ಸಂವಿಧಾನಕ್ಕೆ ಒಡ್ಡುತ್ತಿರುವ ಬೆದರಿಕೆಯಾಗಿದೆ, ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ಮೂಲಕ ಸಂವಿಧಾನದ ರಕ್ಷಣೆ ಮಾಡಬೇಕಾಗಿದೆ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಸಿದ್ಧ ವಕೀಲರು ಹಿರಿಯ ಕಾಂಗ್ರೆಸ್ ನಾಯಕರಾದ ಶೇಖರ ಮಡಿವಾಳ ಮಾತನಾಡಿ, ಸಂವಿಧಾನವೇ ಸವಾಲುಗಳನ್ನು ಎದುರಿಸುವ ಈ ದಿನಗಳಲ್ಲಿ ನಾವೆಲ್ಲರೂ ಸಂವಿಧಾನ ರಕ್ಷಣೆಗೆ ಕಟಿಬದ್ಧರಾಗಬೇಕಾಗಿದೆ ಎಂದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ್ ರಾವ್, ಅಂಬೇಡ್ಕರ್ ರವರು ಅನುಭವಿಸಿದ ನೋವಿನ ಪ್ರತಿಫಲವೇ ಇವತ್ತಿನ ಭಾರತದ ಸುಂದರವಾದ ಸಂವಿಧಾನವಾಗಿದೆ. ಜೀವನದಲ್ಲಿ ತಾವು ಅನುಭವಿಸಿದ ನೋವನ್ನೆಲ್ಲ ಅವುಡುಗಚ್ಚಿಕೊಂಡು ಸಹಿಸಿಕೊಂಡು ತಮ್ಮ ಶಿಕ್ಷಣದ ಶಕ್ತಿಯ ಮೂಲಕ ಕಾನೂನಾತ್ಮಕವಾಗಿ ಸಂವಿಧಾನವನ್ನು ಜಾರಿಗೊಳಿಸಿ ಇವತ್ತು ಎಲ್ಲಾ ವರ್ಗದ ರಕ್ಷಣೆಗೆ ಕಾರಣೀಕರ್ತರಾದವರು ಅಂಬೇಡ್ಕರ್ ರವರು, ಹಾಗಾಗಿ ನಮಗೆಲ್ಲರಿಗೂ ಅಂಬೇಡ್ಕರ್ ಅವರು ದೇವತಾ ಸಮಾನರಾಗಿದ್ದಾರೆ ಎಂದರು. ಅಂಬೇಡ್ಕರ್ ಭಾವಚಿತ್ರಕ್ಕೆ ದೀಪವನ್ನು ಬೆಳಗಿ ಉದ್ಘಾಟಿಸಿದ ಕಾರ್ಕಳ ಬ್ಲಾಕ್ ಪರಿಶಿಷ್ಟ ಪಂಗಡಗಳ ಅಧ್ಯಕ್ಷ ದೇವದಾಸ್.ಆರ್ ಅವರು ಅಂಬೇಡ್ಕರ್ ಜಯಂತಿಯ ಶುಭಾಶಯಗಳು ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಸುಧಾಕರ ಕೋಟ್ಯಾನ್, ಜಿಲ್ಲಾ ಎಸ್.ಟಿ ಘಟಕದ ಉಪಾಧ್ಯಕ್ಷ ಸೋಮನಾಥ ನಾಯಕ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಭಾನು ಭಾಸ್ಕರ ಪೂಜಾರಿ, ಮಾಜಿ ಜಿಲ್ಲಾ ಪಂಚಾಯತ್‌ ಸದಸ್ಯ ಸುಪ್ರಿತ್ ಶೆಟ್ಟಿ ಕೆದಿಂಜೆ, ಬ್ಲಾಕ್ ಉಪಾಧ್ಯಕ್ಷ ಜಾರ್ಜ್ ಕ್ಯಾಸ್ತಲಿನೊ, ವಿವೇಕಾನಂದ ಶೆಣೈ, ಹೇಮಂತ ಆಚಾರ್ಯ, ಸಂತೋಷ್ ದೇವಾಡಿಗ ಬೋಳ, ರಾಘವ ನಾಯಕ್ ಮುದ್ರಾಡಿ, ಮಲ್ಲಿಕ್ ಅತ್ತೂರು, ರಮೇಶ್ ಬಜಕಳ, ಸಿರಿಯಣ್ಣ ಶೆಟ್ಟಿ, ಶಶಿಧರ, ರೆಹಮತ್, ದಿನೇಶ್ ಹೆಬ್ರಿ, ಸುನೀಲ್ ಭಂಡಾರಿ, ಯೋಗೀಶ್ ಮೂಲ್ಯ ಬೋಳ, ಪ್ರತಿಮಾ ರಾಣೆ, ಕಾಂತಿ ಶೆಟ್ಟಿ, ಅನ್ನಪ್ಪ ನಕ್ರೆ, ನ್ಯಾಯವಾದಿ ರಾಘವ ಕಡ್ತಲ ಮೊದಲಾವರು ಉಪಸ್ಥಿತರಿದ್ದರು. ಬ್ಲಾಕ್ ವಕ್ತಾರ ಪ್ರದೀಪ್ ಬೇಲಾಡಿ ಕಾರ್ಯಕ್ರಮ ನಿರೂಪಿಸಿ ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶೇಖ್ ಶಭೀರ್ ಮಿಯ್ಯಾರು ವಂದಿಸಿದರು.