.ಅಂಬೇಡ್ಕರ್ ಜಯಂತಿ: ದಲಿತ ಸಂಘಟನೆಗಳಿಂದ ಪತ್ರಿಕಾಗೋಷ್ಠಿ

| Published : Apr 05 2025, 12:48 AM IST

ಸಾರಾಂಶ

ಪಟ್ಟಣದ ಹೃದಯಭಾಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿ ಹಾಗೂ ಉದ್ಯಾನವನ ನಿರ್ಮಾಣಕ್ಕೆ ಯೋಜನೆ ರೂಪಿಸುತ್ತಿದ್ದೇವೆ.

ದಾಬಸ್‍ಪೇಟೆ: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಂ ರವರ ಜಯಂತಿಯನ್ನು ಏ. 14ರಂದು ಅದ್ಧೂರಿಯಾಗಿ, ಅರ್ಥಪೂರ್ಣವಾಗಿ ಆಯೋಜಿಸಲಿದ್ದೇವೆ ಎಂದು ದಲಿತ ಸಂಘರ್ಷ ಸಮಿತಿಯ ಹೋಬಳಿ ಸಂಚಾಲಕ ಹನುಮಂತರಾಜು ಹೇಳಿದರು.

ಪಟ್ಟಣದ ನಂದಿ ಗ್ರಾಂಡ್ ಹೋಟೆಲ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಜಯಂತಿ ಆಚರಣೆಯ ಸಿದ್ಧತೆ ಬಗ್ಗೆ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಪಟ್ಟಣದ ಹೃದಯಭಾಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿ ಹಾಗೂ ಉದ್ಯಾನವನ ನಿರ್ಮಾಣಕ್ಕೆ ಯೋಜನೆ ರೂಪಿಸುತ್ತಿದ್ದೇವೆ. ಏ. 14ರಂದು ಈ ಅವಳಿ ಜಯಂತಿಯನ್ನು, ಬೆಳ್ಳಿರಥದಲ್ಲಿ ಅವಳಿ ನಾಯಕರ ಭಾವಚಿತ್ರಗೆ ವಿಶೇಷ ಪೂಜೆ ಸಲ್ಲಿಸಿ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಿದ್ದೇವೆ ಎಂದರು.ಅಂಬೇಡ್ಕರ್ ಸೇನೆಯ ಜಿಲ್ಲಾಧ್ಯಕ್ಷ ಟಗರು ಶಿವಸ್ವಾಮಿ ಮಾತನಾಡಿ, ಎಲ್ಲಾ ದಲಿತಪರ ಸಂಘಟನೆಗಳು ಒಂದಾಗಿ, ಈ ಮಹಾನ್ ನಾಯಕರ ಜಯಂತಿಯನ್ನು, ಸಾರ್ವಜನಿಕರಿಗೆ ಉಪಹಾರ ವಿತರಿಸಿ, ಪಾನಕ, ಮಜ್ಜಿಗೆ, ಹೆಸರು ಬೇಳೆ ವಿತರಿಸುತ್ತೇವೆ ಎಂದರು.

ಸಭೆಯಲ್ಲಿ ಸಂಘಟನೆಯ ಖಜಾಂಚಿ ಗೋವಿಂದರಾಜು, ಮಹಿಳಾ ಸಂಚಾಲಕಿ ಜಯಶೀಲಾ, ನಿಡವಂದ ಕಾಂತರಾಜು ಸಂಚಾಲಕ ಶಿವಾನಂದನಗರ ಹನುಮಂತರಾಯಪ್ಪ, ನಿವೃತ್ತ ಶಿಕ್ಷಕ ರಾಮಕೃಷ್ಣಯ್ಯ, ತ್ಯಾಮಗೊಂಡ್ಲು ಆಂಜನಮೂರ್ತಿ, ಭಾರತೀಪುರ ಲಕ್ಷ್ಮೀಕಾಂತ್, ನರಸಿಂಹರಾಜು, ಹೆಗ್ಗುಂದ ಮಂಜುನಾಥ್, ಕೃಷ್ಣಮೂರ್ತಿ, ಗಂಗಾಧರಯ್ಯ, ಗೊಟ್ಟಿಕೆರೆ ಹನುಮಂತರಾಜು, ಹೊನ್ನೇನಹಳ್ಳಿ ನರಸಿಂಹಮೂರ್ತಿ, ನರಸೀಪುರ ರವಿ, ಕಲಾವಿದ ವೆಂಕಟಸ್ವಾಮಿ, ಇನ್ನೀತರರಿದ್ದರು.

ಪೋಟೋ 2 : ದಾಬಸ್‍ಪೇಟೆ ಪಟ್ಟಣದ ನಂದಿ ಗ್ರಾಂಡ್ ಹೋಟೆಲ್ ನಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಆಚರಣೆಯ ಸಿದ್ದತೆ ಬಗ್ಗೆ ದಲಿತ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.