ಬೀರೂರು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹೊಂದಿದ್ದ ದೂರದೃಷ್ಠಿತ್ವ, ಚಿಂತನೆ, ವಿಚಾರಧಾರೆಗಳು ಸರ್ವಕಾಲಕ್ಕೂ ಪ್ರಸ್ತುತ ಎಂದು ಪುರಸಭೆ ಮುಖ್ಯಾಧಿಕಾರಿ ಜಿ.ಪ್ರಕಾಶ್ ಹೇಳಿದರು

ಪುರಸಭೆ ಕಚೇರಿಯಲ್ಲಿ 119ನೇ ಬಾಬು ಜಗಜೀನರಾಂ ಮತ್ತು 135ನೇ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ

ಕನ್ನಡಪ್ರಭವಾರ್ತೆ, ಬೀರೂರು

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹೊಂದಿದ್ದ ದೂರದೃಷ್ಠಿತ್ವ, ಚಿಂತನೆ, ವಿಚಾರಧಾರೆಗಳು ಸರ್ವಕಾಲಕ್ಕೂ ಪ್ರಸ್ತುತ ಎಂದು ಪುರಸಭೆ ಮುಖ್ಯಾಧಿಕಾರಿ ಜಿ.ಪ್ರಕಾಶ್ ಹೇಳಿದರುಪಟ್ಟಣದ ಪುರಸಭಾ ಕಚೇರಿಯಲ್ಲಿ ಮಂಗಳವಾರ 119ನೇ ಬಾಬು ಜಗಜೀನರಾಂ ಮತ್ತು 135ನೇ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.ಅಂಬೇಡ್ಕರ್ ಸಮಾಜಮುಖಿ ಚಿಂತನೆಗಳು ಸರ್ವಕಾಲಕ್ಕೂ ಪ್ರಸ್ತುತ. ಅವರ ಸಾಧನೆ, ಹೋರಾಟ, ಆದರ್ಶಗಳು ಸ್ಮರಣೀಯ ಹಾಗೂ ಅನುಕರಣೀಯ ಅಂಬೇಡ್ಕರ್ ಜೀವನ ಪ್ರತಿಯೊಬ್ಬರಿಗೂ ಪ್ರೇರಣೆಯಾಗುವ ಜೊತೆಗೆ ದಾರಿದೀಪವಾಗಲಿ, ಅಂಬೇಡ್ಕರ್ ಮಹಾನ್ ಪ್ರತಿಭಾಶಾಲಿ, ವಿಶ್ವಜ್ಞಾನಿಯಾಗಿದ್ದು ಅವರ ಬ ಗ್ಗೆ ಅರಿಯುವುದು ಬಹಳಷ್ಟಿದೆ ಎಂದರು.ಹಿಂದುಳಿದ ವರ್ಗಗಳ ಶೋಷಣೆಗೆ ಶೈಕ್ಷಣಿಕ ಕೊರತೆಯೇ ಕಾರಣ. ಶಿಕ್ಷಣದ ಮೂಲಕ ಸಮಾನತೆ ಹಕ್ಕನ್ನು ಸ್ಥಾಪಿಸಲು ಶೋಷಿತ ವರ್ಗಗಳು ಮುಂದಾಗಬೇಕು. ಶೋಷಣೆತಡೆಯಲು ಶಿಕ್ಷಣವೇ ಪ್ರಮುಖ ಅಸ್ತ್ರ ಎಂದರು. ಅಂಬೇಡ್ಕರ್ 35 ಪದವಿ ಪಡೆಯಲು ಕಾರಣ ಅವರು ಸಮಯಕ್ಕೆ ಹೆಚ್ಚು ಗೌರವ ಕೊಟ್ಟು ಅದನ್ನು ಪಾಲನೆ ಮಾಡುತ್ತಿದ್ದರು. ನಮ್ಮ ಕಚೇರಿ ಸಿಬ್ಬಂದಿ ಸಹ ಅವರಂತೆ ಕರ್ತವ್ಯಕ್ಕೆ ಹೆಚ್ಚು ಮಾನ್ಯತೆ ನೀಡಿ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.ಪುರಸಭೆ ಆಶ್ರಯ ಕಮಿಟಿ ಸದಸ್ಯ ಬಿ.ಜಿ.ಮೈಲಾರಪ್ಪ ಮಾತನಾಡಿ. ಬದುಕಿನಲ್ಲಿ ಅಪಮಾನ, ನೋವುಗಳನ್ನು ಅನುಭವಿಸಿದರೂ ಸಮಾಜಕ್ಕೆ ನೈತಿಕತೆ ಶಿಕ್ಷಣಕೊಟ್ಟು ಅಜರಾಮರೆನಿಸಿದವರು ಬಿ.ಆರ್.ಅಂಬೇಡ್ಕರ್ ಅಸ್ಪೃಶ್ಯತೆಯ ಕರಾಳ ಮುಖಗಳಿಗೆ ನಲುಗಿದರೂ ತನ್ನ ವಿದ್ಯಾರ್ಜನೆ ಮೂಲಕ ಉನ್ನತ ಮಟ್ಟಕೇರಿ ದಲಿತ ಸಮುದಾಯದ ಸೂರ್ಯನಾಗಿ ಕಂಗೊಳಿಸಿ ದವರು ಅಂಬೇಡ್ಕರ್ , ದಿನದಲಿತರ ದನಿಯಾಗಿ, ದಲಿತರ ಬಾಳಿನ ಬೆಳಕಾಗಿ ಅವತರಿಸಿದ್ದರೂ ಎಂದರೆ ತಪ್ಪಲ್ಲಾ, ಆದರೂ ಅವರ ಆಶಯಗಳಿಗೆ ವಿರುದ್ಧವಾಗಿ ದಲಿತರ ಶೋಷಣೆ ಇನ್ನೂ ತಪ್ಪಿಲ್ಲಾ ಎಂದು ವಿಷಾದಿಸಿದರು. ದಲಿತ ಸಮುದಾಯಗಳು ಕೂಡ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿ ತಮ್ಮ ಬದುಕನ್ನು ಗಟ್ಟಿಗೊಳಿಸಿಕೊಳ್ಳುವಂತೆ ಕರೇ ನೀಡಿದರು.

ಬಿ.ಟಿ.ಚಂದ್ರಶೇಖರ್ ಮಾತನಾಡಿ, ದೇಶದ ಮಹಾನ್‌ ಚೇತನ ಮತ್ತು ಚಿಂತನಾ ಶೀಲ ವ್ಯಕ್ತಿಯಾಗಿದ್ದ ಅಂಬೇಡ್ಕರ್ ಅವರಿಂದ ಭಾರತದಲ್ಲಿ ಪ್ರಜಾಪ್ರಭುತ್ವ ಹೆಮ್ಮರವಾಗಿ ಬೆಳೆಯಲು ಕಾರಣವಾಯಿತು. ಭಾರತದಲ್ಲಿ ಶೋಷಿತ ಸಮುದಾಯಗಳು ಮೇಲೆದ್ದು ಬರಲು ಮೀಸಲಾತಿ ಅತ್ಯಗತ್ಯ ಎಂದು ಪ್ರತಿಪಾದಿಸಿದ್ದ ಅಂಬೇಡ್ಕರ್ ಸಮಾನತೆಯಿಂದಲೇ ಪ್ರಸಕ್ತ ರಾಷ್ಟ್ರಕಟ್ಟಲು ಸಾಧ್ಯ ಎಂದು ಕನಸು ಕಂಡಿದ್ದರು. ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಜಗಜೀವನರಾಂ ಜನರಲ್ಲಿ ಸಮಾನತೆ, ಸೋದರತೆ , ಭ್ರಾತೃತ್ವ ಮೂಡಿಸುವ ಜತೆಗೆ ಮೌಢ್ಯತೊಲಗಿಸಲು ಪ್ರಯತ್ನಿಸಿದ್ದರು ಎಂದರು.ಪುರಸಭೆ ಅಶ್ರಯ ಕಮಿಟಿ ಸದಸ್ಯ ಎನ್.ಮುಬಾರಕ್ ಮಾತನಾಡಿ, ಹಿಂದೂಳಿದ ವರ್ಗಗಳ ಏಳಿಗೆಗೆ ಶ್ರಮಿಸಿದವರು ಅಂಬೇಡ್ಕರ್. ಜೀವನದಲ್ಲಿ ಶಾಂತಿ ಕಾಣುವ ಉದ್ದೇಶದಿಂದ ಬೌದ್ದಧರ್ಮ ಸ್ವೀಕರಿಸಿದರು. ಅವರ ವಿಚಾರಧಾರೆ ಅವರನ್ನು ಯಶಸ್ವಿ ನಾಯಕರನ್ನಾಗಿಸಿತು. ಪ್ರಜೆಗಳ ಸಾರ್ವಭೌಮತೆ ಅಂಬೇಡ್ಕರ್ ಅವರ ಚಿಂತನೆ ಫಲ, ಎಲ್ಲರೂ ಪ್ರಜಾಪ್ರಭುತ್ವ ಯಶಸ್ಸಿಗೆ ದುಡಿಯ ಬೇಕೆಂಬುದಾಗಿತ್ತು ಎಂದರು.ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗದ ಡಾ.ಬಿ.ಆರ್.ಅಂಬೇಡ್ಕರ್ ಪುತ್ತಳಿಗೆ ಪುರಸಭೆ ಅಧಿಕಾರಿ ವರ್ಗದವರು ಮಾಲಾರ್ಪಣೆ ಮಾಡಿದರು.

ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ವೈ.ಎಂ.ಲಕ್ಷ್ಮಣ್, ಆಶ್ರಯ ಕಮಿಟಿ ಸದಸ್ಯ, ಪೌರಸೇವಾ ನೌಕರರ ಸಂಘದ ಅಧ್ಯಕ್ಷೆ ಜಯಮ್ಮ, ಲಕ್ಷ್ಮಿದೇವಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪುರಸಭೆ ಇಂಜಿನಿಯರ್ ವೀಣಾ, ಶಿಲ್ಪ, ಪ್ರದೀಪ್ ,ಗಿರಿರಾಜ್, ಪುಟ್ಟಣ್ಣ, ಮೇಸ್ತ್ರೀ ಸುಬ್ಬಣ್ಣ, ನಟರಾಜ್, ಪ್ರಸಾದ್ ಇದ್ದರು.

14 ಬೀರೂರು 1135ನೇ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ ಜಯಂತಿ ಅಂಗವಾಗಿ ಬೀರೂರು ಪಟ್ಟಣದಲ್ಲಿ ಮಂಗಳವಾರ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗದ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮುಖ್ಯಾಧಿಕಾರಿ ಜಿ.ಪ್ರಕಾಶ್ ಮಾಲಾರ್ಪಣೆ ಮಾಡಿದರು.