ಸಾರಾಂಶ
ಅಂಬೇಡ್ಕರ್ ತತ್ವ, ಆದರ್ಶಗಳು ಸುಂದರ ಸಮಾಜವನ್ನು ನಿರ್ಮಿಸುತ್ತವೆ ಎಂದು ಪಿಡಿಒ ರಂಗರಾಜು ಹೇಳಿದರು.
ಗುಬ್ಬಿ: ಅಂಬೇಡ್ಕರ್ ತತ್ವ, ಆದರ್ಶಗಳು ಸುಂದರ ಸಮಾಜವನ್ನು ನಿರ್ಮಿಸುತ್ತವೆ ಎಂದು ಪಿಡಿಒ ರಂಗರಾಜು ಹೇಳಿದರು. ತಾಲೂಕಿನ ದೊಡ್ಡಗುಣಿ ಗ್ರಾಮ ಪಂಚಾಯಿತಿಯಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಅಂಬೇಡ್ಕರ್ ಭಾರತ ಕಂಡ ಶ್ರೇಷ್ಠ ನಾಯಕರಾಗಿದ್ದಾರೆ. ಅವರ ವಿಚಾರಧಾರೆಗಳು ಇತರರಿಗೆ ಮಾದರಿಯಾಗಿವೆ. ಸಂವಿಧಾನ ರಚಿಸಲು ಅಂಬೇಡ್ಕರ್ ಶ್ರಮಿಸಿದ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಧಾ , ಪಿಡಿಒ ರಂಗರಾಜು, ಸದಸ್ಯರಾದ ನರಸಿಂಹಮೂರ್ತಿ, ರಾಜಣ್ಣ, ರಾಜಶೇಖರ್, ದಾಸೇಗೌಡ, ಸಿಬ್ಬಂದಿಗಳು ಹಾಜರಿದ್ದರು.