ಮುಸ್ಲಿಂ, ಕ್ರೈಸ್ತರು ನನ್ನ ಜನ ಎಂದು ಅಂಬೇಡ್ಕರ್‌ ಹೇಳಿದ್ದಾರೆ

| Published : Feb 02 2024, 01:00 AM IST

ಮುಸ್ಲಿಂ, ಕ್ರೈಸ್ತರು ನನ್ನ ಜನ ಎಂದು ಅಂಬೇಡ್ಕರ್‌ ಹೇಳಿದ್ದಾರೆ
Share this Article
  • FB
  • TW
  • Linkdin
  • Email

ಸಾರಾಂಶ

ಮುಸಲ್ಮಾನರು, ಕ್ರೈಸ್ತರು ತಮ್ಮ ತಮ್ಮ ಅನಿವಾರ್ಯ ಕಾರಣಗಳಿಗಾಗಿ ಇತರೆ ಧರ್ಮ ಅಪ್ಪಿಕೊಂಡಿದ್ದಾರೆ, ಹಾಗಾಗಿ ಅವರು ನನ್ನ ಜನ ಎಂದು ಬಾಬಾ ಸಾಹೇಬರು ತಮ್ಮ ಪುಸ್ತಕವೊಂದರದಲ್ಲಿ ಸಾರಿ ಸಾರಿ ಹೇಳಿದ್ದಾರೆ. ಹಾಗಾಗಿ ಅವರ ಆಶಯದಡಿ ನಾವೆಲ್ಲರೂ ಸಾಗೋಣ. ಸಂವಿಧಾನದ ಆಶಯ ಎತ್ತಿ ಹಿಡಿಯೋಣ ಎಂದು ಮುಸ್ಲಿಂ ಧರ್ಮಗುರು ಅಂಜಾದ್ ಖಾನ್ ಹೇಳಿದರು

ಅಂಜಾದ್ ಖಾನ್ ಹೇಳಿಕೆ । ಮುಸಲ್ಮಾನ ಸಮಾಜ ಅಯೋಜಿಸಿದ್ದ ಸಂವಿಧಾನ ಜಾಗೃತಿ ಸಮಾವೇಶಕ್ಕೆ ಚಾಲನೆ

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲಮುಸಲ್ಮಾನರು, ಕ್ರೈಸ್ತರು ತಮ್ಮ ತಮ್ಮ ಅನಿವಾರ್ಯ ಕಾರಣಗಳಿಗಾಗಿ ಇತರೆ ಧರ್ಮ ಅಪ್ಪಿಕೊಂಡಿದ್ದಾರೆ, ಹಾಗಾಗಿ ಅವರು ನನ್ನ ಜನ ಎಂದು ಬಾಬಾ ಸಾಹೇಬರು ತಮ್ಮ ಪುಸ್ತಕವೊಂದರದಲ್ಲಿ ಸಾರಿ ಸಾರಿ ಹೇಳಿದ್ದಾರೆ. ಹಾಗಾಗಿ ಅವರ ಆಶಯದಡಿ ನಾವೆಲ್ಲರೂ ಸಾಗೋಣ. ಸಂವಿಧಾನದ ಆಶಯ ಎತ್ತಿ ಹಿಡಿಯೋಣ ಎಂದು ಮುಸ್ಲಿಂ ಧರ್ಮಗುರು ಅಂಜಾದ್ ಖಾನ್ ಹೇಳಿದರು. ತಾಲೂಕು ಮುಸ್ಲಿಂ ಸಮುದಾಯದ ನ್ಯಾಷನಲ್ ಶಾಲಾ ಆವರಣದಲ್ಲಿ ಅಯೋಜಿಸಿದ್ದ 75ನೇ ಸಂವಿಧಾನ ಜನಜಾಗೃತಿ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂವಿಧಾನ ಶ್ರೇಷ್ಠ ಗ್ರಂಥ, ಅಂತಹ ಸಂವಿಧಾನದ ಆಶಯಗಳನ್ನು ನಾವೆಲ್ಲರೂ ಈಡೇರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗೋಣ ಎಂದರು. ಬಿಸಿಯೂಟ ಸಹಾಯಕ ನಿದೇರ್ಶಕರಾದ ರಂಗಸ್ವಾಮಿ ಮಾತನಾಡಿ, ಸಂವಿಧಾನ ಎಂಬುದು ಅತ್ಯಂತ ಪವಿತ್ರವಾದ ಗ್ರಂಥ, ಅದನ್ನ ಅನುಸರಿಸುವಲ್ಲಿ ನಾವು ಎಡವುತ್ತಿದ್ದೆವೆ ಎಂದರು. 190 ರಾಷ್ಚ್ರಗಳ ಪೈಕಿ ಭಾರತದ ಸಂವಿಧಾನವೇ ಶ್ರೇಷ್ಠವಾಗಿದೆ. ಪ್ರಸ್ತುತ ನಮ್ಮ ಹಿನ್ನಡೆಗೆ ಸಂವಿಧಾನ ಅರ್ಥೈಸಿಕೊಳ್ಳದಿರುವುದೇ ಪ್ರಮುಖ ಕಾರಣ. ಸಂವಿಧಾನವನ್ನು ಸಮರ್ಪಕವಾಗಿ ಅವಲೋಕಿಸಿ ನೋಡಿದರೆ ಎಲ್ಲಾ ಸಮಸ್ಯೆಗೂ ಪರಿಹಾರವಿದೆ. ಈದೇಶದ ಸಂವಿಧಾನದ ಆಶಯಗಳನ್ನು ನಾವು ಅರ್ಥೈಸಿ ಕೊಳ್ಳುವಲ್ಲಿ ವಿಫಲವಾಗಿರುವುದೇ ದೇಶ ಸಮಗ್ರ ಅಭಿವೃದ್ಧಿಗೆ ಹಿನ್ನಡೆಯಾಗಿದ್ದು ಇನ್ನಾದರೂ ಈನಿಟ್ಟಿನಲ್ಲಿ ನಾವೆಲ್ಲರೂ ಚಿಂತಿಸೋಣ ಎಂದರು.ಈವೇಳೆ ದಲಿತ ಮತ್ತು ಮೈನಾರಿಟಿ ರಾಜ್ಯ ಮುಸ್ಲಿಂ ಧರ್ಮಗುರುಗಳು ತವಾಬ್ ಹಜರತ್ ಪ್ರಾರ್ಥನೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂಧರ್ಭದಲ್ಲಿ ಅಂಬೇಡ್ಕರ್ ವಾದಿ ಮಹದೇವ್ ಕುಮಾರ್, ಮೈಸೂರಿನ ಐಐಟಿ ಕಾಲೇಜು ಪ್ರಾಂಶುಪಾಲ ಕಲೀಂ ಅಹಮದ್ ಮತ್ತಿತರರಿದ್ದರು.