ಅಂಬೇಡ್ಕರ್ ಸಮುದಾಯ ಭವನ ಅನೈತಿಕ ಚಟುವಟಿಕೆ ತಾಣ: ಆಕ್ಷೇಪ

| Published : Jul 01 2024, 01:46 AM IST

ಅಂಬೇಡ್ಕರ್ ಸಮುದಾಯ ಭವನ ಅನೈತಿಕ ಚಟುವಟಿಕೆ ತಾಣ: ಆಕ್ಷೇಪ
Share this Article
  • FB
  • TW
  • Linkdin
  • Email

ಸಾರಾಂಶ

complaint about ambedakar samudayabhavan

ಹೊಸದುರ್ಗ: ಆದಿಜಾಂಬವ ಹಾಸ್ಟೇಲ್ ಹಾಗೂ ಡಾ. ಆರ್.ಅಂಬೇಡ್ಕರ್ ಅವರ ಹೆಸರಿನಲ್ಲಿರುವ ಸಮುದಾಯ ಭವನ ಉದ್ಘಾಟನೆ ಆದ ಬಳಿಕ ವಿದ್ಯುತ್ ,ಕುಡಿಯೋ ನೀರು, ಗ್ರಂಥಾಲಯ, ಶೌಚಾಲಯ, ಮೂಲ ಸೌಕಯ೯ಗಳಿಲ್ಲದೆ ನಿತ್ಯ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಪುರಸಭೆಯವರಾಗಲಿ, ಶಾಸಕರಾಗಲಿ ಇತ್ತ ಗಮನಹರಿಸದಿರುವುದು ಶೋಚನೀಯ. ಇದು ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನ ಎಂದು ಅಂಬೇಡ್ಕರ್ ಫೆಲೋಶೀಫ್ ಪ್ರಶಸ್ತಿ ಪುರಸ್ಕೃತ ಕೈನಡು ಚಂದ್ರಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸುದ್ಧಿಗಾರರೊಂದಿಗೆ ಮಾತನಾಡಿ, ತಾಲೂಕಿನಲ್ಲಿ 27 ರಿಂದ 30 ಸಾವಿರ ಮತದಾರರಿರುವ ಆದಿ ಜಾಂಬವ (ಮಾದಿಗ) ಸಮಾಜ ನಮ್ಮದು. ಇನ್ನೊಂದು ದೊಡ್ಡ ಸಮಾಜ ಜೊತೆಗೂಡಿದರೆ ಶಾಸಕರಾಗಬಹುದು. ಆದರೆ, ಒಗ್ಗಟ್ಟಿನ ಕೊರತೆಯಿಂದ ಸಮಾಜ ಹಾಳಾಗುತ್ತಿದೆ ಎಂದ ಅವರು ಹಿಂದಿನ ತಲೆಮಾರಿನ ಹಿರಿಯರು ಶ್ರಮದಿಂದ ಸಮಾಜದ ಶೈಕ್ಷಣಿಕ ಅಭಿವೃದ್ಧಿಗೆ ಕಟ್ಟಲಾದ ಆದಿ ಜಾಂಬವ ಹಾಸ್ಟೇಲ್ ಹಾಳಾಗಿದೆ. ಟಿ.ಬಿ.ಸಕ೯ಲ್ ನಲ್ಲಿ ಅಂಬೇಡ್ಕರ್ ಪುತ್ಥಳಿ ನಿಮಾ೯ಣ 25 ವಷ೯ಗಳಿಂದ ದಲಿತರ ಕನಸು ನೆನೆಗುದಿಗೆ ಬಿದ್ಧಿದೆ. ಮಾದಿಗರನ್ನು ಬಿಟ್ಟು ಬೇರೆ ಎಲ್ಲಾ ಸಮಾಜಗಳು ಅಭಿವೃದ್ದಿಯಾಗುತ್ತಿವೆ. ಮಾದಿಗರಿಗೆ ಯಾಕೆ ಹೀಗೆ? ಭರವಸೆಗಳು ಚುನಾವಣೆ ಸಂದರ್ಭಕ್ಕಷ್ಠೆ ಸೀಮಿತವೇ? ಸಮಾಜದ ನಾಯಕರು, ಶಾಸಕರು ಇತ್ತ ಗಮನಹರಿಸಬೇಕೆಂದು ಕೈನಡು ಚಂದ್ರಪ್ಪ ಮನವಿ ಮಾಡಿದ್ದಾರೆ.

------ಫೋಟೋ 30hsd2: ಕೈನಡು ಚಂದ್ರಪ್ಪ