ನಗರದ ಕೊಟಗೇರಾವಾಡಿ ಮತ್ತು ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದಲ್ಲಿ ಪ್ರತಿಪ್ಠಾಪಿಸಲು ಉದ್ದೇಶಿಸಿ ಈಗಾಗಲೇ ಕೂಡಿಸಿರುವ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರ ಮೂರ್ತಿಗಳನ್ನು ನ.13ರಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಲೋಕಾರ್ಪಣೆ ಮಾಡಲಿದ್ದಾರೆಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ ತಿಳಿಸಿದರು.
ಕನ್ನಡಪ್ರಭ ವಾರ್ತೆ ಯಾದಗಿರಿ
ನಗರದ ಕೊಟಗೇರಾವಾಡಿ ಮತ್ತು ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದಲ್ಲಿ ಪ್ರತಿಪ್ಠಾಪಿಸಲು ಉದ್ದೇಶಿಸಿ ಈಗಾಗಲೇ ಕೂಡಿಸಿರುವ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರ ಮೂರ್ತಿಗಳನ್ನು ನ.13ರಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಲೋಕಾರ್ಪಣೆ ಮಾಡಲಿದ್ದಾರೆಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ ತಿಳಿಸಿದರು.ಗುರುವಾರ ಮಧ್ಯಾಹ್ನ ತಮ್ಮ ಜನಸಂಪರ್ಕ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಶುಕ್ರವಾರ ಬೆಳಗ್ಗೆ ಹೈದ್ರಾಬಾದ್ ಮೂಲಕ ಗುರುಮಠಕಲ್ ಗೆ ಬಂದು ಅಲ್ಲಿಂದ ಬೆಳಗ್ಗೆ 11ಕ್ಕೆ ನಗರಕ್ಕೆ ಆಗಮಿಸಿ ಮೊದಲು ಕೊಟಗೇರಾವಾಡಿ ಏರಿಯಾದಲ್ಲಿ ಡಾ.ಅಂಬೇಡ್ಕರ್ ಅವರ ಮೂರ್ತಿ ಅನಾವರಣ ಮಾಡಿ ಸೇರಿದ ಜನರನ್ನು ಉದ್ದೇಶಿಸಿ ಮಾತನಾಡುವರು. ನಂತರ ನೇರವಾಗಿ ನಾಯ್ಕಲ್ ಗ್ರಾಮಕ್ಕೆ ಆಗಮಿಸುವ ಸಚಿವ ಖರ್ಗೆ, ಅಲ್ಲಿನ ಹೆದ್ದಾರಿ ರಸ್ತೆ ಬಳಿ ಪ್ರತಿಷ್ಠಾಪಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಮೂರ್ತಿಯನ್ನು ಲೋಕಾರ್ಪಣೆ ಮಾಡಿ ಅಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆಂದು ಶಾಸಕರು ಹೇಳಿದರು.
ಬಹುದಿನಗಳ ಹಿಂದೆ ಈ ಕಾರ್ಯಕ್ರಮ ಆಗಬೇಕಿತ್ತು. ಕಾಲ ಈಗ ಕೂಡಿ ಬಂದಿದೆ. ನಾಯ್ಕಲ್ ನ ಕಾರ್ಯಕ್ರಮದಲ್ಲಿ ಐದು ಸಾವಿರ ಜನರು ಸೇರುವ ನಿರೀಕ್ಷೆ ಇದೆ ಎಂದರು. ಗೃಹ ಇಲಾಖೆಯಿಂದ ಜಿಲ್ಲೆಗೆ ಆಗಬೇಕಾದ ಕೆಲವು ಕೆಲಸ ಕುರಿತು ಸಚಿವರಿಗೆ ಬೇಡಿಕೆಗಳ ಮನವಿ ಸಲ್ಲಿಸಲಾಗುವುದೆಂದರು. ಜಿಲ್ಲಾಧ್ಯಕ್ಷ ಬಸರೆಡ್ಡಿ ಪಾಟೀಲ್ ಅನಪುರ, ಜಿಲ್ಲಾ ವಕ್ತಾರ ಶ್ಯಾಮಸನ್ ಮಾಳಿಕೇರಿ, ಹಿರಿಯ ಮುಖಂಡ ಚಿದಾನಂದಪ್ಪ ಕಾಳೆಬೆಳಗುಂದಿ ಇದ್ದರು.----ಫೋಟೊ-----
12ವೈಡಿಆರ್4ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಬಸರೆಡ್ಡಿ ಪಾಟೀಲ್ ಅನಪುರ, ಶ್ಯಾಮಸನ್ ಮಾಳಿಕೇರಿ, ಚಿದಾನಂದಪ್ಪ ಇದ್ದರು.