ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಅನ್ಯಾಯಕ್ಕೊಳಗಾದವರ ಧ್ವನಿ: ನಾಟೇಕಾರ್

| Published : Dec 14 2024, 12:48 AM IST

ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಅನ್ಯಾಯಕ್ಕೊಳಗಾದವರ ಧ್ವನಿ: ನಾಟೇಕಾರ್
Share this Article
  • FB
  • TW
  • Linkdin
  • Email

ಸಾರಾಂಶ

Ambedkar Swabhimani Sena Voice of the Oppressed: Natekar

-ಕೊಡೇಕಲ್ ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ನೂತನ ಪಧಾಧಿಕಾರಿಗಳ ನೇಮಕ

-----

ಕನ್ನಡಪ್ರಭ ವಾರ್ತೆ ಕೊಡೇಕಲ್

ಅಂಬೇಡ್ಕರ್ ಸ್ವಾಭಿಮಾನಿ ಸೇನೆಯು ಕೇವಲ ಒಂದು ಸಂಘಟನೆಯಾಗಿರದೇ ಅನ್ಯಾಯಕ್ಕೊಳಗಾದವರ ಧ್ವನಿಯಾಗಿದೆ ಎಂದು ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ಜಿಲ್ಲಾಧ್ಯಕ್ಷ ಕಾಶಿನಾಥ್ ನಾಟೇಕಾರ್ ಹೇಳಿದರು.

ಗ್ರಾಮದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೋಬಳಿ ಘಟಕದ ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ನೂತನ ಪಧಾಧಿಕಾರಿಗಳ ನೇಮಕಗೊಳಿಸಿ ಅವರು ಮಾತನಾಡಿ, ಸಂಘಟನೆಯ ಪ್ರತಿಯೊಬ್ಬರೂ ಸಮಾನತೆಯ ದೃಷ್ಟಿಯಿಂದ ಎಲ್ಲಾ ಜಾತಿ, ಜನಾಂಗಗಳ ಏಳಿಗಾಗಿ ಶ್ರಮಿಸಬೇಕು ಎಂದರು.

ಅಧ್ಯಕ್ಷರನ್ನಾಗಿ ಬಸವರಾಜ ಬೂದಿಹಾಳ, ಉಪಾಧ್ಯಕ್ಷರಾಗಿ ಹುಲಗಪ್ಪ ತೀರ್ಥ, ಪ್ರಧಾನ ಕಾರ್ಯದರ್ಶಿ ಚನ್ನಪ್ಪ ಮದರಿ, ಕಾರ್ಯದರ್ಶಿಯಾಗಿ ಗುರು ಚಲುವಾದಿ, ಸದಸ್ಯರಾಗಿ ಹಣಮಂತ ಚಲವಾದಿ, ಖಜಾಂಚಿಯಾಗಿ ಬಸವರಾಜ್ ಗುಡಿಹಾಳ ತೀರ್ಥ ಅವರನ್ನು ಆಯ್ಕೆ ಮಾಡಲಾಯಿತು.

ಜಿಲ್ಲಾ ಕಾರ್ಯಾಧ್ಯಕ್ಷ ಜುಮ್ಮಣ್ಣ ಗುಡಿಮನಿ, ಬಸವರಾಜ್ ಹೊಸಮನಿ, ಮಲ್ಲಿಕಾರ್ಜುನ ಕುಮನೂರ್, ಸಾಯಬಣ್ಣ ಯಡ್ದೆಳ್ಳಿ, ವಿರೂಪಾಕ್ಷ ಕಚಕನೂರ, ಮೌನೇಶ್ ನಾಟೇಕಾರ್, ಹಣಮಂತ ನಾಯಕ, ಪರಶುರಾಮ್ ಗೆದ್ದಲಮರಿ, ಸೋಮು ಹಳ್ಳೂರ, ಪರಶುರಾಮ್ ಬೋನಾಳ, ಶಿವಬಸಪ್ಪ ದೇವತಕಲ್, ಬಸವರಾಜ್ ಯಡಿಯಾಪೂರ, ಸಿದ್ದಪ್ಪ ಮಾಳಳ್ಳಿ, ಬಸವರಾಜ್ ತಮದೊಡ್ಡಿ ಇದ್ದರು.

-----

ಫೋಟೊ: ಕೊಡೇಕಲ್ ಹೋಬಳಿ ಘಟಕದ ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

13ವೈಡಿಆರ್4