ಹಿರೇಕೆರೂರು ಸರ್ವಜ್ಞ ಕಲಾ ಭವನದಲ್ಲಿ ಅಂಬೇಡ್ಕರ್ 135ನೇ ಜನ್ಮ ದಿನ ಹಾಗೂ ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನ ರಾಮ್ ಅವರ 119ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಯು.ಬಿ. ಬಣಕಾರ ಉದ್ಘಾಟಿಸಿದರು.

ಹಿರೇಕೆರೂರು:ಡಾ. ಬಿ.ಆರ್. ಅಂಬೇಡ್ಕರ್ ರಚನೆ ಮಾಡಿದ ಸಂವಿಧಾನ ಉಳಿಸಿಕೊಂಡು ಹೋಗಬೇಕು. ಶೋಷಿತ ಎಲ್ಲ ಸಮಾಜದ ಏಳಿಗೆಗೆ ಡಾ. ಬಿ.ಅರ್. ಅಂಬೇಡ್ಕರ್ ಹಗಲಿರಳು ಶ್ರಮಿಸಿದ್ದಾರೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.ಪಟ್ಟಣದ ಸರ್ವಜ್ಞ ಕಲಾ ಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ್ ಹಾಗೂ ಪಟ್ಟಣ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ಜಾತಿಗಳ ಒಕ್ಕೂಟಗಳ ವತಿಯಿಂದ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ರವರ 135ನೇ ಜನ್ಮ ದಿನಾಚರಣೆ ಹಾಗೂ ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನ ರಾಮ್ ಅವರ 119ನೇ ಜನ್ಮ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಆದರ್ಶಗಳು ಎಲ್ಲ ಕಾಲಕ್ಕೂ ಶ್ರೇಷ್ಠವಾಗಿವೆ ಮತ್ತು ಭಾರತಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಅವರು ನೀಡಿದ ಸಂವಿಧಾನ ಇಂದು ನಮ್ಮ ದೈನಂದಿನ ಜೀವನದ ಭಾಗವಾಗಿದೆ. ಅವರ ಆಶಯಗಳಿಗೆ ತಕ್ಕಂತೆ ನಾವೆಲ್ಲ ನಡೆಯಬೇಕು. ಭಾರತಕ್ಕೆ ತನ್ನದೇ ಸೇವೆ ಸಲ್ಲಿಸಿದ ಮಹಾನ್ ಚೇತನ ಡಾ. ಬಾಬು ಜಗಜೀವನರಾಮ್ ಅವರು. ದೇಶದಲ್ಲಿ ಹಸಿರು ಕ್ರಾಂತಿ ರೂಪಿಸಿ ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಈ ಇಬ್ಬರೂ ಮಹನೀಯರ ಆದರ್ಶಗಳನ್ನು ಪಾಲನೆ ಮಾಡಬೇಕು. ಸಮಾಜದ ಪ್ರತಿಯೊಬ್ಬರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದರು.ಉಪ ತಹಸೀಲ್ದಾರ್ ಎಸ್.ಅರ್. ಅಪಿನಕೋಪ್ಪ, ಪಪಂ ಮುಖ್ಯಾಧಿಕಾರಿ ಕೋಡಿ ಭೀಮರಾಯ್, ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶ್ರೀಧರ್, ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಗಿರೀಶ ಡಿ. ಮುಡಿಯಮ್ಮನವರ, ಸಿಪಿಐ ಮಂಜುನಾಥ್ ಪಂಡಿತ್, ಇಒ ಎನ್. ರವಿ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬುರಡಿಕಟ್ಟಿ, ಗ್ಯಾರಂಟಿ ಸಮಿತಿ ಜಿಲ್ಲಾ ಉಪಾಧ್ಯಕ್ಷ ರಮೇಶ ಮಡಿವಾಳರ, ಜಿಪಂ ಮಾಜಿ ಸದಸ್ಯರಾದ ಬಿ.ಆರ್. ಪುಟ್ಟಣ್ಣನವರ, ಎನ್.ಎಂ. ಈಟೇರ, ಮಾಲತೇಶ ಮಾದರ, ದುರಗಪ್ಪ ನೀರಲಗಿ, ದುರಗೇಶ ತಿರಕಪ್ಪನವರ, ಗಣೇಶ ನಾಯಕ, ಜೆ. ವೀರಭದ್ರಗೌಡ ಗೌಡರ, ರುದ್ರಗೌಡ ದೊಡ್ಡಮಲ್ಲಪ್ಪನವರ, ರೇಷ್ಮ ಬಿ.ಆರ್., ಪ್ರೇಮಾ ಈಳಗೇರ್ ಸೇರಿದಂತೆ ದಲಿತ ಮುಖಂಡರು, ಕಚೇರಿ ಸಿಬ್ಬಂದಿ ಇದ್ದರು.ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಗಿರೀಶ ಡಿ. ಮುಡಿಯಮ್ಮನವರ ಸ್ವಾಗತಿಸಿದರು. ಪಿ.ಎಂ. ಪೋಷಣ್ ಶಕ್ತಿ ನಿರ್ಮಾಣ ಅಭಿಯಾನದ ಸಹಾಯಕ ನಿರ್ದೇಶಕ ಎಚ್.ಎಚ್. ಜಾಡರ ನಿರೂಪಿಸಿ ವಂದಿಸಿದರು. ಮಂಜುನಾಥ ಸುಳಿಗನ್ನಿ ಉಪನ್ಯಾಸ ನೀಡಿದರು,