ಸಾರಾಂಶ
ನಿಷ್ಠುರ ಮಾತುಗಳ ಕಾರಣಕ್ಕೆ ಆಗಿನ ಶರಣರು ಅವರಿಗೆ ಅಂಬಿಗರ ಚೌಡಯ್ಯ ಅವರನ್ನು ನಿಜಶರಣ ಎಂದು ಕರೆಯುತ್ತಿದ್ದರು. ಅವರ ತತ್ವಾದರ್ಶ ಹಾಗೂ ವಚನ ಸಾಹಿತ್ಯದ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಸುಭದ್ರ ಸಮಾಜ ಕಟ್ಟಲು ಸಾಧ್ಯ.
ಕನ್ನಡಪ್ರಭ ವಾರ್ತೆ ಯಾದಗಿರಿ
ನೇರ, ದಿಟ್ಟ ವ್ಯಕ್ತಿತ್ವದ ಅಂಬಿಗರ ಚೌಡಯ್ಯ ತಮ್ಮ ವಚನ ಮೂಲಕ 12ನೇ ಶತಮಾನದಲ್ಲಿದ್ದ ಅನಿಷ್ಟ ಆಚರಣೆ ತೊಲಗಿಸಲು ಶ್ರಮಿಸಿದವರು ಎಂದು ವಕೀಲರ ಸಂಘದ ಜಿಲ್ಲಾಧ್ಯಕ್ಷ ಸಿ.ಎಸ್. ಮಾಲಿಪಾಟೀಲ್ ಹೇಳಿದರು.ನಗರದ ಜಿಲ್ಲಾ ವಕೀಲರ ಸಂಘದ ಕಾರ್ಯಾಲಯದಲ್ಲಿ ನಡೆದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ನಿಷ್ಠುರ ಮಾತುಗಳ ಕಾರಣಕ್ಕೆ ಆಗಿನ ಶರಣರು ಅವರಿಗೆ ನಿಜಶರಣ ಎಂದು ಕರೆಯುತ್ತಿದ್ದರು. ಅವರ ತತ್ವಾದರ್ಶ ಹಾಗೂ ವಚನ ಸಾಹಿತ್ಯದ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಸುಭದ್ರ ಸಮಾಜ ಕಟ್ಟಲು ಸಾಧ್ಯ ಎಂದರು.ಚೌಡಯ್ಯ ಜಾತ್ಯತೀತ, ಧರ್ಮಾತೀತ, ಕಾಯಕ, ದಾಸೋಹ, ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿದವರು. ಇಂತಹ ಶರಣರ ಜಯಂತಿ ಆಚರಣೆ ಮಾಡುವುದರ ಜೊತೆಗೆ ಅವರ ವಚನಗಳಲ್ಲಿ ಸಾರಿದ ಭಾವೈಕ್ಯತೆ ಸಂದೇಶ ಜೀವನದಲ್ಲಿ ಅಳವಡಿಸಿಕೊಂಡು ಸೌಹಾರ್ದತೆಯಿಂದ ಬಾಳೋಣ ಎಂದರು.
ವಕೀಲರಾದ ನಿರಂಜನ್ ಯರಗೋಳ ಮಾತನಾಡಿದರು. ವಕೀಲರಾದ ಭೀಮರೆಡ್ಡಿ ಅಚ್ಚೋಲಾ, ನಿಂಗಣ್ಣ ಯರಗೋಳ, ಅಜಯ್ ಬಾಡಿಯಾಳ ಸೇರಿ ಇತರರಿದ್ದರು.