ಸಾರಾಂಶ
ಸಮಾಜದ ಢಂಬಾಚಾರ, ಮೂಢನಂಬಿಕೆ, ಸಾಮಾಜಿಕ ಅಸಮಾನತೆಯ ವಿರುದ್ಧ ಕ್ರ.ಶ. 12ನೇ ಶತಮಾನದಲ್ಲೇ ಧ್ವನಿ ಎತ್ತಿದ ನಿಷ್ಠುರ, ನೇರ ನಡೆಯ ನಿಜಶರಣ ಅಂಬಿಗರ ಚೌಡಯ್ಯ ಎಂದು ಬಸವರಾಜಪ್ಪ ಅಭಿಪ್ರಾಯಪಟ್ಟರು.
- ತಡಗಣಿಯಲ್ಲಿ ನಡೆದ ಜಯಂತಿ ಕಾರ್‍ಯಕ್ರಮದಲ್ಲಿ ಬಸವರಾಜಪ್ಪ ಅಭಿಮತ
ಕನ್ನಡಪ್ರಭ ವಾರ್ತೆ ಶಿರಾಳಕೊಪ್ಪನೇರ ಮತ್ತು ನಿಷ್ಠುರ ಸ್ವಭಾವದ ಅಂಬಿಗರ ಚೌಡಯ್ಯ ೧೨ನೇ ಶತಮಾನದ ಅನುಭವ ಮಂಟಪದ ವಿರೋಧಪಕ್ಷದ ನಾಯಕರಾಗಿದ್ದರು ಎಂದು ತಾಳಗುಂದ ಹಾಗೂ ಉಡಗಣಿ ಹೋಬಳಿ ಗಂಗಾಮತ ಸಮಾಜದ ಅಧ್ಯಕ್ಷ ಹಿರೇಜಂಬೂರ ಬಸವರಾಜಪ್ಪ ಹೇಳಿದರು.
ಸೋಮವಾರ ತಡಗಣಿ ಗ್ರಾಮದಲ್ಲಿರುವ ಅಂಬಿಗರ ಚೌಡಯ್ಯ ಸಮುದಾಯ ಭವನದಲ್ಲಿ ನಡೆದ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಬಿಗರ ಚೌಡಯ್ಯ ಢಂಬಾಚಾರ, ಮೂಢನಂಬಿಕೆ, ಸಾಮಾಜಿಕ ಅಸಮಾನತೆ ವಿರುದ್ಧ ಧ್ವನಿಯಾಗಿದ್ದರು. ಆದರೆ, ಇಂದು ಜನರಿಗೆ ಈ ವಿಚಾರಗಳ ಬಗ್ಗೆ ಮಾತನಾಡಲು ಸಮಯವೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ತಾಲ್ಲೂಕ ಗಂಗಾಮತ ಸಮಾಜದ ನೌಕರರ ಸಂಘದ ಅಧ್ಯಕ್ಷ ಪರಮೇಶ್ವರ ಮಾತನಾಡಿ, ೧೨ನೇ ಶತಮಾನದ ಶಿವಶರಣರ ನಡುವಿನಲ್ಲಿ ಇದ್ದು, ನಾನೊಬ್ಬ ನಿಜ ಶರಣ ಎಂದು ಧೈರ್ಯದಿಂದ ಘೋಷಿಸಿಕೊಂಡ ಮೊದಲ ನಿಜಶರಣ ಅಂಬಿಗರ ಚೌಡಯ್ಯ.
ತನಗೆ ಗುತ್ತಲ ರಾಜ ಉಡುಗೊರೆಯಾಗಿ ನೀಡಿದ ಗ್ರಾಮವನ್ನು ಜನರಿಗೆ ಮತ್ತೆ ದಾನವಾಗಿ ನೀಡಿದ ಕೀರ್ತಿ ಇವರದು. ಈ ಗ್ರಾಮ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನಲ್ಲಿ ಚೌಡಯ್ಯ ದಾನಾಪುರ ಎಂದು ಪ್ರಸಿದ್ಧಿ ಪಡೆದಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಸೇವಾ ಸಮಿತಿ ಸಂಸ್ಥಾಪಕ ಅಧ್ಯಕ್ಷ ಎಂ.ನವೀನ್ ಕುಮಾರ್, ಗಂಗಾಮತ ಸಮಾಜದ ಗೌರವಾಧ್ಯಕ್ಷ ಯಳಗೇರಿ ಬಸವ ರಾಜಪ್ಪ, ಪ್ರಧಾನ ಕಾರ್ಯದರ್ಶಿ ಈರಪ್ಪ ತಡಗಣಿ, ರಾಜ್ಯ ನಿರ್ದೇಶಕ ಕೋಡಿಹಳ್ಳಿ ಧರ್ಮಪ್ಪ, ಅಡಗಂಟಿ ಆನಂದಪ್ಪ, ಗಜೇಂದ್ರ, ಉಡಗಣಿ ಚಂದ್ರಶೇಖರ, ಬಸವೇಶ್ವರ ಬ್ಯಾಂಕ್ ನಿರ್ದೇಶಕ ಷಣ್ಮುಖಪ್ಪ ಮತ್ತು ಓಂಕಾರಪ್ಪ ಹಿರೇಜಂಬೂರು ಇದ್ದರು.