ಅಮಿನಗಡ ವೀರಭಧ್ರೇಶ್ವರ ರಥೋತ್ಸವ ಸಂಭ್ರಮ

| Published : Feb 15 2024, 01:33 AM IST

ಸಾರಾಂಶ

ಅಮೀನಗಡ: ಪಟ್ಟಣದಲ್ಲಿ ಶ್ರೀ ವೀರಭಧ್ರೇಶ್ವರ ದೇವರ ರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ಜರುಗಿತು. ಪ್ರಾರಂಭದಲ್ಲಿ ಪಟ್ಟಣದ ಹಿರಿಯ ಪುರವಂತರಾದ ಚಂದ್ರಲಿಂಗಪ್ಪ ಬಸರಕೋಡ ಅವರ ಮನೆಯಿಂದ ತೇರಿನ ಕಳಸವನ್ನು ಮಂಗಳವಾದ್ಯಗಳೊಂದಿಗೆ ವಿಜೃಂಣೆಯಿಂದ ತರಲಾಯಿತು.

ಕನ್ನಡಪ್ರಭವಾರ್ತೆ ಅಮೀನಗಡ

ಪಟ್ಟಣದಲ್ಲಿ ಶ್ರೀ ವೀರಭಧ್ರೇಶ್ವರ ದೇವರ ರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ಜರುಗಿತು. ಪ್ರಾರಂಭದಲ್ಲಿ ಪಟ್ಟಣದ ಹಿರಿಯ ಪುರವಂತರಾದ ಚಂದ್ರಲಿಂಗಪ್ಪ ಬಸರಕೋಡ ಅವರ ಮನೆಯಿಂದ ತೇರಿನ ಕಳಸವನ್ನು ಮಂಗಳವಾದ್ಯಗಳೊಂದಿಗೆ ವಿಜೃಂಣೆಯಿಂದ ತರಲಾಯಿತು. ನಂತರ ಪಟ್ಟಣದ ಕುರುಹಿನಶೆಟ್ಟಿ ಸಮಾಜ, ಹಾಲುಮತ ಸಮಾಜ, ಶಿವಾಚಾರ ದೇವಾಂಗ ಸಮಾಜ, ಶಿವಸಿಂಪಿ ಸಮಾಜ, ವಿಶ್ವಕರ್ಮ ಸಮಾಜ, ಬಂಡಿವಡ್ಡರ ಸಮಾಜ, ವಿವಿಧ ಗಣ್ಯರಿಂದ ಹಾಗೂ ರಕ್ಕಸಗಿ ಗ್ರಾಮಸ್ಥರಿಂದ ತೇರಿಗೆ ವಿವಿಧ ರೀತಿಯ ಬಾಬತ್ತು ಸಲ್ಲಿಸುವ ಮೂಲಕ ಸಂಜೆ ಶ್ರೀ ವೀರಭಧ್ರೇಶ್ವರ ರಥೋತ್ಸವ ವಿಜೃಂಭಣೆಯಿಂದ ಜರುಗಿತು.

ಅಮೀನಗಡ, ರಕ್ಕಸಗಿ, ಸೂಳೇಬಾವಿ, ಗಂಗೂರ, ಚಿತ್ತರಗಿ, ಹುಲಗಿನಾಳ, ಕಲ್ಲಗೋನಾಳ ಮುಂತಾದ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ಉತ್ತತ್ತಿ, ಲಿಂಬೆಹಣ್ಣು ಎಸೆಯುವುದರ ಮೂಲಕ ಭಕ್ತಿ ಸಮರ್ಪಿಸಿದರು.