ಸಾರಾಂಶ
ಚನ್ನಗಿರಿ ಲೈಂಗಿಕ ಹಗರಣದ ಆರೋಪಿ ಅಮ್ಜದ್‌ನ ನೀಚಕೃತ್ಯಕ್ಕೆ ಕ್ಷಮೆಯೇ ಇಲ್ಲ. ಆತ ಜಾಮೀನಿನ ಮೇಲೆ ಹೊರಬಂದರೆ ನಾವಂತೂ ಬಿಡುವುದಿಲ್ಲ. ಮುಂದೆಂದೂ ಈ ರೀತಿಯ ಘಟನೆ ಆಗದಂತೆ ಅಮ್ಜದ್‌ಗೆ ಗಲ್ಲು ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅಗ್ರಹಿಸಿ, ಅಮ್ಜದ್ ಫೋಟೋಗಳನ್ನು ಚನ್ನಗಿರಿಯಲ್ಲಿ ದಹಿಸಿದ್ದಾರೆ.
ದಾವಣಗೆರೆ: ಚನ್ನಗಿರಿ ಲೈಂಗಿಕ ಹಗರಣದ ಆರೋಪಿ ಅಮ್ಜದ್‌ನ ನೀಚಕೃತ್ಯಕ್ಕೆ ಕ್ಷಮೆಯೇ ಇಲ್ಲ. ಆತ ಜಾಮೀನಿನ ಮೇಲೆ ಹೊರಬಂದರೆ ನಾವಂತೂ ಬಿಡುವುದಿಲ್ಲ. ಮುಂದೆಂದೂ ಈ ರೀತಿಯ ಘಟನೆ ಆಗದಂತೆ ಅಮ್ಜದ್‌ಗೆ ಗಲ್ಲು ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅಗ್ರಹಿಸಿ, ಅಮ್ಜದ್ ಫೋಟೋಗಳನ್ನು ದಹಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಂತರ ಹೊರಬಂದು ಪ್ರೆಸ್ ಕ್ಲಬ್ ಬಳಿ ಲೈಂಗಿಕ ಹಗರಣದ ಆರೋಪಿ ಅಮ್ಜದ್ ಅವರ ಭಾವಚಿತ್ರಗಳನ್ನು ದಹಿಸಿದರು. ಅಮ್ಜದ್‌ನ ಕೃತ್ಯಗಳ ಹಿಂದೆ ದೊಡ್ಡ ಷಡ್ಯಂತ್ರ, ಸಂಘಟನೆಯ ಕೈವಾಡ ಇದೆ. ಇದೆಲ್ಲದರ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ಅಮ್ಜದ್ ಶಿಕ್ಷೆಯಿಂದ ಪಾರಾಗದಂತೆ ಪೊಲೀಸರು ನ್ಯಾಯಾಲಯಕ್ಕೆ ಗಟ್ಟಿಸಾಕ್ಷಿ ಒದಗಿಸಬೇಕು. ಅಮ್ಜದ್ ಜಾಮೀನಿನ ಮೇಲೆ ಹೊರಬಂದರೆ ನಾವಂತೂ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.ಅಮ್ಜದ್‌ಗೆ ಸಹಕಾರ ನೀಡಿದವರನ್ನು ಕೂಡಲೇ ಬಂಧಿಸಿ, ವಿಚಾರಣೆಗೆ ಒಳಪಡಿಸಬೇಕು. ಫಾಸ್ಟ್ ಟ್ರ್ಯಾಕ್ ಕೋರ್ಟ್ ಸ್ಥಾಪಿಸಿ ಇನ್ನು 3 ತಿಂಗಳಲ್ಲಿ ಅಮ್ಜದ್‌ಗೆ ಗಲ್ಲು ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಈ ಮೂಲಕ ಅತ್ಯಾಚಾರಿಗಳಿಗೆ ಎಚ್ಚರಿಕೆ ಸಂದೇಶ ಹೋಗಬೇಕು. ಅಮ್ಜದ್ ಪರವಾಗಿ ವಕೀಲರು ವಕಾಲತ್ತು ಹಾಕಬಾರದು. ಈ ಬಗ್ಗೆ ಬಾರ್ ಅಸೋಸಿಯೇಷನ್ ಗೆ ಸಂಘಟನೆಯಿಂದ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭ ಸಂಘಟನೆ ಮುಖಂಡರು ಇದ್ದರು. - - - -2ಕೆಡಿವಿಜಿ46, 47:ದಾವಣಗೆರೆಯಲ್ಲಿ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಆರೋಪಿ ಅಮ್ಜದ್‌ನ ಫೋಟೋಗಳನ್ನು ದಹಿಸಿದರು.