ಸಂಕಲ್ಪ ಉತ್ಸವದಲ್ಲಿ ಅಮ್ಮ ನಾಟಕ ಪ್ರದರ್ಶನ

| Published : Nov 05 2025, 03:00 AM IST

ಸಾರಾಂಶ

ಪಟ್ಟಣದ ಗಾಂಧೀ ಕುಟೀರದಲ್ಲಿ ಸೋಮವಾರ ನಡೆದ ೪ನೇ ದಿನದ ಸಂಕಲ್ಪ ಉತ್ಸವದಲ್ಲಿ ಅಮ್ಮ ನಾಟಕ ಅತ್ಯಂತ ಮನಮೋಹಕವಾಗಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ಕನ್ನಡಪ್ರಭ ವಾರ್ತೆ ಯಲ್ಲಾಪುರ

ಪಟ್ಟಣದ ಗಾಂಧೀ ಕುಟೀರದಲ್ಲಿ ಸೋಮವಾರ ನಡೆದ ೪ನೇ ದಿನದ ಸಂಕಲ್ಪ ಉತ್ಸವದಲ್ಲಿ ಅಮ್ಮ ನಾಟಕ ಅತ್ಯಂತ ಮನಮೋಹಕವಾಗಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ರಂಗಸಹ್ಯಾದಿ ಅಧ್ಯಕ್ಷ ಡಿ.ಎನ್. ಗಾಂಯ್ಕರ ಅವರ ಕಥೆ ಮತ್ತು ನಿರ್ದೇಶನದಲ್ಲಿ ಯಶಸ್ ಭಾಗ್ಯತ, ಆಶಾ ರವೀಂದ್ರ ಭಗನಗದ್ದೆ (ಕುಮಾರ), ಸರೋಜಾ ಪ್ರಶಾಂತ್ ಹೆಗಡೆ (ತಾಯಿ), ರಚನಾ ರವೀಂದ್ರ ಹೆಗಡೆ (ಯಂಕ), ಸಂಧ್ಯಾ ಶಾಂತಾರಾಮ ಹೆಗಡೆ (ಪರಿಮಳ), ಮಮತಾ ಪ್ರಕಾಶ ಭಟ್ಟ, ಸುಮಂಗಲಾ ಶ್ರೀಪಾದ ಭಟ್ಟ (ಗೆಳತಿಯರು), ಆಶಾ ಕೃಷ್ಣ ಪಟೇಲ್ (ಡಾಕ್ಟರ್), ಶ್ರೇಯಸ್ ಭಟ್ಟ, ಅಭಿರಾಮ ಹೆಗಡೆ, ಸಾಕೇತ್ ಭಟ್ಟ, ಆರ್ಯನ್ ಇನಾಮದಾರ, ಪುಣತಿ ಹೆಗಡೆ, ಆದ್ಯಾ ಪಟೇಲ, ಸುಮೇಧ ಭಟ್ಟ, ಅಪೇಕ್ಷ ಭಟ್ಟ, ಪುಗತಿ ನಾಯಕ, ವೈಷ್ಣವಿ ಕಲ್ಬುರ್ಗಿ, ಗಹನ ಪರಂಗಿ ಮಕ್ಕಳ ಪಾತ್ರಧಾರಿಗಳಾಗಿ ಅಭಿನಯಿಸಿದರು.

ಪ್ರವೀಣ ಇನಾಮದಾರ (ರಿದಂ ಪ್ಯಾಡ್), ಗಂಗಾ ಎಸ್. ಭಟ್ಟ, ಸಾನ್ನಿ ಇನಾಮದಾರ (ಹಿನ್ನೆಲೆ ಗಾಯನ), ಜಿ.ವಿ ಭಟ್ಟ, ಸಣ್ಣಪ್ಪ ಭಾಗ್ಯತ, ಗಾಯತ್ರಿ ಬೋಳಗುಡ್ಡೆ ಸಹಕರಿಸಿದರು.

ಸಂಕಲ್ಪ ಉತ್ಸವದಲ್ಲಿ ದೌಪದಿ ಪ್ರತಾಪ ಯಕ್ಷಗಾನ ಪ್ರದರ್ಶನ:

ಪಟ್ಟಣದ ಗಾಂಧೀ ಕುಟೀರದಲ್ಲಿ ಸೋಮವಾರ ೪ನೇ ದಿನದ ಸಂಕಲ್ಪ ಉತ್ಸವದಲ್ಲಿ ಪ್ರಸ್ತುತಗೊಂಡ ದೌಪದಿ ಪ್ರತಾಪ ಯಕ್ಷಗಾನ ಜನಮನ ಗೆದ್ದಿತು.ಭಾಗವತರಾಗಿ ರವೀಂದ್ರ ಭಟ್ಟ ಅಚವೆ, ಸರ್ವೇಶ್ವರ ಹೆಗಡೆ ಮೂರೂರು (ಭಾಗವತರು), ಗಣಪತಿ ಭಟ್ಟ ಕವಾಳ (ಮದ್ದಲೆ), ಗಣೇಶ ಗಾಂಸ್ಕರ (ಚಂಡೆ): ಮುಮ್ಮೇಳದ ಪಾತ್ರಧಾರಿಗಳಾಗಿ ವಿದ್ಯಾಧರ ಜಲವಳ್ಳಿ (ಅರ್ಜುನ), ನಿರಂಜನ ಜಗನಹಳ್ಳಿ (ಭೀಮ), ಶಂಕರ ಹೆಗಡೆ ನೀಲ್ನೋಡು (ದೌಪದಿ), ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ (ಸುಭದ್ರೆ), ಅಶೋಕ ಭಟ್ಟ ಸಿದ್ಧಾಪುರ (ನಾರದ), ಕಾರ್ತಿಕ ಚಿಟ್ಟಾಣಿ (ಕೃಷ್ಣ), ಶ್ರೀಧರ ಅಣಲಗಾರ (ಈಶ್ವರ), ದೀಪಕ ಕುಂಕಿ (ಪಾರ್ವತಿ), ಪ್ರೀತಿ ವಿನಾಯಕ ಹೆಗಡೆ (ಮನ್ಮಥ), ಕವಾಳೆ ಸಹೋದರರು (ಪ್ರಸಾಧನ) ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.ಭರತನಾಟ್ಯ:

ಪಟ್ಟಣದ ಗಾಂಧೀ ಕುಟೀರದಲ್ಲಿ ಸೋಮವಾರ ೪ನೇ ದಿನದ ಸಂಕಲ್ಪ ಉತ್ಸವದಲ್ಲಿ ಸುಮಾ ತೊಂಡೆಕೆರೆ ಮತ್ತು ವಿನುತಾ ಹೆಗಡೆ ತಂಡದವರಿಂದ ಭರತನಾಟ್ಯ ಪ್ರದರ್ಶನಗೊಂಡಿತು.