ವರ್ಷದಲ್ಲಿ ಅಮ್ಮಾಜೇಶ್ವರಿ ಏತ ನೀರಾವರಿ ಪೂರ್ಣ: ಸವದಿ

| Published : Nov 24 2024, 01:47 AM IST

ಸಾರಾಂಶ

ಅಥಣಿ ತಾಲೂಕಿನ ಪೂರ್ವ ಭಾಗದ ಅನೇಕ ಹಳ್ಳಿಗಳ ರೈತರ ಬಹುದಿನಗಳ ಕನಸಾದ ಕೊಟ್ಟಲಗಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಯನ್ನು ವರ್ಷದಲ್ಲಿ ಪೂರ್ಣಗೊಳಿಸಿ ರೈತರ ಜಮೀನುಗಳಿಗೆ ನೀರು ಹರಿಸುವ ಸಂಕಲ್ಪ ಹೊಂದಲಾಗಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಕನ್ನಡಪ್ರಭ ವಾರ್ತೆ ಅಥಣಿ

ತಾಲೂಕಿನ ಪೂರ್ವ ಭಾಗದ ಅನೇಕ ಹಳ್ಳಿಗಳ ರೈತರ ಬಹುದಿನಗಳ ಕನಸಾದ ಕೊಟ್ಟಲಗಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಯನ್ನು ವರ್ಷದಲ್ಲಿ ಪೂರ್ಣಗೊಳಿಸಿ ರೈತರ ಜಮೀನುಗಳಿಗೆ ನೀರು ಹರಿಸುವ ಸಂಕಲ್ಪ ಹೊಂದಲಾಗಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ನೀರಾವರಿ ಯೋಜನೆಯ ಕಾರ್ಯಾಲಯದಲ್ಲಿ ಕೊಟ್ಟಲಗಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಪ್ರಗತಿ ಪರಿಶೀಲನೆ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ನೀರಾವರಿ ಯೋಜನೆ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರದಿಂದ ಯಾವುದೇ ಆರ್ಥಿಕ ತೊಂದರೆ ಇಲ್ಲ. ಸರ್ಕಾರ ಈಗಾಗಲೇ ಮೊದಲ ಹಂತದ ಅನುದಾನ ಬಿಡುಗಡೆಗೊಳಿಸಿದ್ದು, ನಂತರ ಹಂತಹಂತವಾಗಿ ಅನುದಾನ ತರುವ ಮೂಲಕ ಈ ನೀರಾವರಿ ಯೋಜನೆಯನ್ನು 2025ರ ಡಿಸೆಂಬರ್ ವೇಳೆಗೆ ಪೂರ್ಣಗೊಳಿಸುವ ಮೂಲಕ ಪ್ರಾಯೋಗಿಕವಾಗಿ ನೀರು ಒದಗಿಸುವ ಸಂಕಲ್ಪ ಹೊಂದಿದ್ದೇವೆ ಎಂದು ತಿಳಿಸಿದರು.

ಈ ವೇಳೆ ನೀರಾವರಿ ಇಲಾಖೆ ಎಸ್.ಸಿ. ನಾಗರಾಜ, ಮುಖ್ಯ ಅಭಿಯಂತರ ಪ್ರವೀಣ ಹುನಸಿಕಟ್ಟಿ, ಸಹಾಯಕ ಅಭಿಯಂತರ ಅಂಬಣ್ಣ, ಭರತೇಶ ಮಹೇಶವಾಡಗಿ, ದೀಪಕ ಕಾಂಬಳೆ, ಗುತ್ತಿಗೆದಾರರು ಸುರೇಶ ಫನಿಕರ, ಅವಿನಾಶ ತ್ರಿಪಾಠಿ, ಪಂಪ್‌ ವಿತರಕರಾದ ರಾಜೇಶ ಹುಂಡೆ ಸೇರಿದಂತೆ ಇಲಾಖೆಯ ಕಿರಿಯ ಅಭಿಯಂತರರು, ಸಿಬ್ಬಂದಿ ಇದ್ದರು.