ಅಮ್ಮತ್ತಿ ಕಾರ್ಮಾಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಚೌಡೇಶ್ವರಿ ನಗರದಲ್ಲಿ ಜಲ್ ಜೀವನ್ ಮಿಷನ್ ಯೋಜನೆಯ ಕಾಮಗಾರಿ ಹಲವು ತಿಂಗಳಿನಿಂದ ಸ್ಥಗಿತಗೊಂಡಿರುವ ಬಗ್ಗೆ ನಿವಾಸಿಗಳ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉತ್ತಮ ಗುಣಮಟ್ಟದ ಕಾಂಕ್ರಿಟ್ ರಸ್ತೆಯ ಬದಿಯನ್ನು ಅಗೆದು ನಾಮಕಾವಸ್ಥೆಗೆ ಪೈಪ್ ಅಳವಡಿಸಿರುವ ಗುತ್ತಿಗೆದಾರರು ಬಳಿಕ ಕಾಮಗಾರಿಯತ್ತ ತಿರುಗಿಯೂ ನೋಡಿಲ್ಲ ಎಂಬ ಆರೋಪ ಕೇಳಿಬಂದಿದೆ.
ಸಿದ್ದಾಪುರ: ಅಮ್ಮತ್ತಿ ಕಾರ್ಮಾಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಚೌಡೇಶ್ವರಿ ನಗರದಲ್ಲಿ ಜಲ್ ಜೀವನ್ ಮಿಷನ್ ಯೋಜನೆಯ ಕಾಮಗಾರಿ ಹಲವು ತಿಂಗಳಿನಿಂದ ಸ್ಥಗಿತಗೊಂಡಿರುವ ಬಗ್ಗೆ ನಿವಾಸಿಗಳ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉತ್ತಮ ಗುಣಮಟ್ಟದ ಕಾಂಕ್ರಿಟ್ ರಸ್ತೆಯ ಬದಿಯನ್ನು ಅಗೆದು ನಾಮಕಾವಸ್ಥೆಗೆ ಪೈಪ್ ಅಳವಡಿಸಿರುವ ಗುತ್ತಿಗೆದಾರರು ಬಳಿಕ ಕಾಮಗಾರಿಯತ್ತ ತಿರುಗಿಯೂ ನೋಡಿಲ್ಲ ಎಂಬ ಆರೋಪ ಕೇಳಿಬಂದಿದೆ.
ರಸ್ತೆ ಅಗೆದು ಹಾಳುಮಾಡಿರುವ ಪರಿಣಾಮ ಸಾರ್ವಜನಿಕರ ಸಂಚಾರಕ್ಕೆ ಭಾರೀ ತೊಂದರೆ ಉಂಟಾಗುತ್ತಿದೆ. ಮಳೆ ಬಂದಾಗ ಕೆಸರುಮಯ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು ಅಗೆದ ಮಣ್ಣು ಹಾಗೂ ಕಲ್ಲುಗಳ ತುಂಡು ಚರಂಡಿಯಲ್ಲಿ ಬಿದ್ದು ಚರಂಡಿಯಲ್ಲಿ ನೀರು ಹರಿಯದೆ ದುರ್ವಾಸನೆ ಬೀರುತ್ತದೆ ಅಲ್ಲದೆ ರಸ್ತೆ ಅಗೆದ ಪರಿಣಾಮ ಸಂಚರಿಸಲಾಗದೆ ವಾಹನ ಸವಾರರು ಹಾಗೂ ಸ್ಥಳೀಯ ನಿವಾಸಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಡಳಿತದ ಗಮನಕ್ಕೆ ತಂದರು ಅವರುಗಳು ಕೈ ಚೆಲ್ಲಿ ಕುಳಿತಿದ್ದಾರೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ತಕ್ಷಣ ಕಾಮಗಾರಿ ಪೂರ್ಣಗೊಳಿಸಿ ರಸ್ತೆ ದುರಸ್ತಿ ಮಾಡದಿದ್ದಲ್ಲಿ ನಿವಾಸಿಗಳನ್ನು ಒಗ್ಗೂಡಿಸಿ ಪ್ರತಿಭಟನೆ ನಡೆಸುವುದಾಗಿ ಚೌಡೇಶ್ವರಿ ನಗರ ನಿವಾಸಿ ತಂಗಮಣಿ ಎಚ್ಚರಿಕೆ ನೀಡಿದ್ದಾರೆ.