ಅಮ್ಮತ್ತಿ ಒಂಟಿಯಂಗಡಿ ಪ್ರೀಮಿಯರ್ ಲೀಗ್ 2026 ರ ಚಾಂಪಿಯನ್ ಪಟ್ಟವನ್ನು ಎ.ಎಫ್.ಸಿ ತಂಡ ತನ್ನದಾಗಿಸಿಕೊಂಡರೆ. ಸಾಕರ್ ಯುನೈಟೆಡ್ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಆರ್.ವಿ.ಎನ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಅಮ್ಮತ್ತಿ ಪ್ರಾಥಮಿಕ ಶಾಲಾ ಮೈದಾನದಲಿ ಆಯೋಜಿಸಲಾಗಿದ್ದ ಅಮ್ಮತ್ತಿ ಒಂಟಿಯಂಗಡಿ ಪ್ರೀಮಿಯರ್ ಲೀಗ್ 2026 ರ ಚಾಂಪಿಯನ್ ಪಟ್ಟವನ್ನು ಎ.ಎಫ್.ಸಿ ತಂಡ ತನ್ನದಾಗಿಸಿಕೊಂಡರೆ. ಸಾಕರ್ ಯುನೈಟೆಡ್ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.

ಬಿಡ್ಡಿಂಗ್ ಮಾದರಿಯಲ್ಲಿ ಆಯೋಜಿಸಲಾಗಿದ್ದ ಈ ಪಂದ್ಯಾವಳಿಯು ಜ.3ರಿಂದ ಅಮ್ಮತ್ತಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಿತು. ಪಂದ್ಯಾಟದಲ್ಲಿ ಸಿವಿ ಯುನೈಟೆಡ್ ಒಂಟಿಯಂಗಡಿ, ಸಿ.ವೈ.ಸಿ ಒಂಟಿಯಂಗಡಿ, ಬಿ.ವೈ.ಸಿ ಇಂಜಲಗೆರೆ, ಎ.ಎಫ್.ಸಿ ಅಮ್ಮತ್ತಿ, 3 ಸ್ಟಾರ್ ಅಮ್ಮತ್ತಿ, ಸಾಕರ್ ಯುನೈಟೆಡ್ ಅಮ್ಮತ್ತಿ, ಭಗವತಿ ಶಾಮಿಯಾನ, ವೆಲ್ ಬಾಯ್ಸ್ ಒಳಗೊಂಡಂತೆ 8 ತಂಡಗಳು ಭಾಗವಹಿಸಿದ್ದವು.

ಭಾಗವಹಿಸಿದ್ದ 8 ತಂಡಗಳ ಪೈಕಿ ಸಿವಿ ಯುನೈಟೆಡ್, ಎ.ಎಫ್.ಸಿ, ಬಿ.ವೈ.ಸಿ, ಸಾಕರ್ ಯುನೈಟೆಡ್ ಈ ನಾಲ್ಕು ತಂಡಗಳು ಸೆಮಿಫೈನಲ್ ಪ್ರವೇಶಿಸಿದವು. ಬಳಿಕ ಮೊದಲನೇ ಸೆಮಿಫೈನಲ್ ಪಂದ್ಯಾಟದಲ್ಲಿ ಸಾಕರ್ ಯುನೈಟೆಡ್ ಹಾಗೂ ಬಿ ವೈ ಸಿ ಮುಖಾಮುಖಿಯಾಗಿ ಸಾಕರ್ ಯುನೈಟೆಡ್ ತಂಡವು 2-0 ಗೋಲ್ ಗಳಿಂದ ಬಿ.ವೈ.ಸಿ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತು. ಸಿ ವಿ ಯುನೈಟೆಡ್ ಹಾಗೂ ಎ ಎಫ್ ಸಿ ತಂಡಗಳ ನಡುವೆ ನಡೆದ ಎರಡನೇ ಸೆಮಿಫೈನಲ್ ಪಂದ್ಯಾಟದಲ್ಲಿ 2 -2 ಗೋಲ್ ಗಳಿಗೆ ಸಮಬಲವಾಗಿ ಪೆನಾಲ್ಟಿ ಶೂಟೌಟ್ ನಲ್ಲಿ ಎ.ಎಫ್.ಸಿ ತಂಡ ಜಯಗಳಿಸುವ ಮೂಲಕ ಫೈನಲ್ ಪ್ರವೇಶಿಸಿತು.

ಎ.ಎಫ್.ಸಿ ಹಾಗೂ ಸಾಕರ್ ಯುನೈಟೆಡ್ ತಂಡಗಳ ನಡುವೆ ನಡೆದ ಫೈನಲ್ ಪಂದ್ಯಾಟದಲ್ಲಿ 1 - 1 ಗೋಲ್ ಗಳಿಂದ ಎರಡು ತಂಡಗಳು ಸಮಬಲ ಸಾಧಿಸಿತು. ನಂತರ ನಡೆದ ಪೆನಾಲ್ಟಿ ಶೂಟೌಟ್ ನಲ್ಲಿ ಎ ಎಫ್ ಸಿ ತಂಡವು ವಿಜೇತರಾದರೆ ಸಾಕರ್ ಯುನೈಟೆಡ್ ತಂಡ ರನ್ನರ್ಸ್ ಆಫ್ ಗೆ ತೃಪ್ತಿ ಪಟ್ಟಿತ್ತು.

ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ತಂಡಗಳಿಗೆ ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿಯನ್ನು ನೀಡಲಾಯಿತು. ಇದಲ್ಲದೆ ಉತ್ತಮ ಗೋಲ್ಕೀಪರ್ ಪ್ರಶಸ್ತಿಯನ್ನು ಪವನ್ , ಉತ್ತಮ ಆಟಗಾರ ಪ್ರಶಸ್ತಿಯನ್ನು ಅರವಿಂದ್ ಹಾಗೂ ಅತಿ ಹೆಚ್ಚು ಗೋಲ್ ಗಳಿಸಿದ ಆಟಗಾರ ಪ್ರಶಸ್ತಿಯನ್ನು ದೀಕ್ಷಿತ್ ಪಡೆದುಕೊಂಡರು.

ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷರಾದ ಜಗದೀಶ್ ಮಂದಪ್ಪ ಪಾಣತಲೆ, ಅರಮನಮಡ ವಿವೇಕ್ ಮುತ್ತಣ್ಣ, ಬೊಮ್ಮಂಡ ರೋಷನ್, ಚೊಕ್ಕಂಡ ಸಂಜು ಸುಬ್ಬಯ್ಯ, ಶಿಜು ಟಿ ಕೆ, ಲಿಜೇಶ್, ಸಮೀರ್, ವೆಲರಿಯನ್ ಮಾಸ್ಕರನೆಸ್, ಹಾಗೂ ಆರ್.ವಿ. ಎನ್ ಸಂಸ್ಥೆಯ ಸದಸ್ಯರಾದ ರಧೀಶ್, ವಿಜು, ಶೇಷಪ್ಪ, ಅರುಣ್ , ರಾಘವೇಂದ್ರ ಪುಟ್ಟು, ಲೋಹಿತ್ ನಾಯ್ಡು ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭ ಸಮಾಜ ಸೇವಕ, ಜೀವ ರಕ್ಷಕ ಚೊಕ್ಕಂಡ ಸಂಜು ಸುಬ್ಬಯ್ಯನವರನ್ನು ಆರ್.ವಿ.ಎನ್ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.