ಸಾರಾಂಶ
ತರಬೇತಿ ಪಡೆದ ಶಿಬಿರಾರ್ಥಿಗಳಲ್ಲಿ ಸುವರ್ಣಾ ಮಸೆಕರ, ಭವಾನಿ ಆನಂದಾಚೆ ಹಾಗೂ ಸುನಿತಾ ಆಡವೇಪಚೆ ತರಬೇತಿ ಅನುಭವ ಹಂಚಿಕೊಂಡರು.
ಹಳಿಯಾಳ: ಮಹಿಳೆಯರು ತರಬೇತಿಯಲ್ಲಿ ಕಲಿತ ಕೌಶಲ್ಯ ಸದ್ಬಳಕೆ ಮಾಡಿದರೆ ನಿಮ್ಮ ವೃತ್ತಿಯನ್ನೇ ಉದ್ಯಮವನ್ನಾಗಿ ಬೆಳೆಸಲು ವಿಪುಲವಾದ ಅವಕಾಶಗಳಿವೆ ಎಂದು ಹುಬ್ಬಳ್ಳಿಯ ಶೋಧಾ ಮೋಟಾರ್ಸ್‌ನ ಇನ್ಶುರೆನ್ಸ್ ಮ್ಯಾನೇಜರ್ ವನಿತಾ ಯಟಗೇರಿ ಹೇಳಿದರು.
ಗರಡೊಳ್ಳಿ ಗ್ರಾಮದಲ್ಲಿ ಕೆನರಾ ಬ್ಯಾಂಕ್ ದೇಶಪಾಂಡೆ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ಹಾಗೂ ಹುಬ್ಬಳ್ಳಿಯ ಶೋಧಾ ಮೋಟಾರ್ಸ್ ಸಂಸ್ಥೆಯ ಸಹಯೋಗದಲ್ಲಿ ಮಹಿಳಾ ಸಬಲೀಕರಣದ ಉದ್ದೇಶದಿಂದ ಮಂಗಳವಾರ ಆಯೋಜಿಸಿದ್ದ 10 ದಿನಗಳ ಫ್ಯಾಷನ್ ಬ್ಲೌಸ್ ಡಿಸೈನಿಂಗ್ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ತರಬೇತಿ ಪ್ರಮಾಣಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು. ಕೆನರಾ ಬ್ಯಾಂಕ್ ಆರ್ಸೆಟಿ ಸಂಸ್ಥೆ ನೀಡುತ್ತಿರುವ ಕೌಶಲ್ಯ ತರಬೇತಿ ಯೋಜನೆಗಳನ್ನು ಶ್ಲಾಘಿಸಿದ ಅವರು, ಸಂಸ್ಥೆಯ ಈ ರೀತಿಯ ಜನಪರ ಕಾರ್ಯಕ್ರಮಗಳಿಗೆ ಸದಾ ಬೆಂಬಲ ನೀಡಲಿದೆ ಎಂದು ಹೇಳಿದರು.ಶೋಧಾ ಮೋಟಾರ್ಸ್‌ನ ಇನ್ನೊಬ್ಬ ಅಧಿಕಾರಿ ಲಕ್ಷ್ಮೀ ಕರೋಷಿ ಮಾತನಾಡಿದರು.ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿಯ ಯೋಜನಾ ಸಂಯೋಜಕ ವಿನಾಯಕ ಎ. ಚವ್ಹಾಣ ಅಧ್ಯಕ್ಷತೆ ವಹಿಸಿದ್ದರು. ಕೆಸರೋಳ್ಳಿ ಗ್ರಾಪಂ ಸದಸ್ಯೆ ಜುವಾಣಿ ಕಾಮ್ರೆಕರ ಸಿದ್ದಿ, ಬುಡಕಟ್ಟು ಜನಪದ ಕಲಾವಿದೆ ಜುಲಿಯಾನಾ ಫರ್ನಾಂಡಿಸ್, ಸಂಪನ್ಮೂಲ ವ್ಯಕ್ತಿ ವಿದ್ಯಾ ಮೆತ್ರಿ ಉಪಸ್ಥಿತರಿದ್ದರು. ತರಬೇತಿ ಪಡೆದ ಶಿಬಿರಾರ್ಥಿಗಳಲ್ಲಿ ಸುವರ್ಣಾ ಮಸೆಕರ, ಭವಾನಿ ಆನಂದಾಚೆ ಹಾಗೂ ಸುನಿತಾ ಆಡವೇಪಚೆ ತರಬೇತಿ ಅನುಭವ ಹಂಚಿಕೊಂಡರು.ಶಿಬಿರಾರ್ಥಿ ಜೆನಿಫರ್ ಕಾಮ್ರೆಕರ, ಯಶೋದಾ ಮೆತ್ರಿ, ಉಳವಯ್ಯ ಬೆಂಡಿಗೇರಿ ಕಾರ್ಯಕ್ರಮ ನಿರೂಪಿಸಿದರು.