ಅಪಘಾತದಲ್ಲಿ ಕೈ ಬೆರಳುಗಳನ್ನು ಕಳೆದುಕೊಂಡು ಕಂಗಾಲಾಗಿದ್ದ ವ್ಯಕ್ತಿಗೆ ತುಮಕೂರಿನ ಸಿದ್ದಗಂಗಾ ಆಸ್ಪತ್ರೆಯ ವೈದ್ಯರು ಮರುಜೀವನ ನಡೆಸಲು ಅನುಕೂಲ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರುಅಪಘಾತದಲ್ಲಿ ಕೈ ಬೆರಳುಗಳನ್ನು ಕಳೆದುಕೊಂಡು ಕಂಗಾಲಾಗಿದ್ದ ವ್ಯಕ್ತಿಗೆ ತುಮಕೂರಿನ ಸಿದ್ದಗಂಗಾ ಆಸ್ಪತ್ರೆಯ ವೈದ್ಯರು ಮರುಜೀವನ ನಡೆಸಲು ಅನುಕೂಲ ಮಾಡಿದ್ದಾರೆ. ಕಾಲಿನ ಬೆರಳನ್ನು ಕತ್ತರಿಸಿ ಕೈಗೆ ಜೋಡಿಸುವ ಮೂಲಕ ಅತ್ಯಂತ ಅಪರೂಪದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಕೆಲಸ ಮಾಡುವಾಗ ಆಕಸ್ಮಿಕವಾಗಿ ಯಂತ್ರಕ್ಕೆ ಸಿಲುಕಿ ವ್ಯಕ್ತಿಯೊಬ್ಬರು ತಮ್ಮ ಬಲಗೈಯ ಐದೂ ಬೆರಳುಗಳನ್ನು ಕಳೆದುಕೊಂಡಿದ್ದರು. ಹೆಬ್ಬೆರಳು ಇಲ್ಲದೆ ಯಾವುದೇ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಆ ವ್ಯಕ್ತಿ ದೈನಂದಿನ ಕೆಲಸಗಳಿಗೂ ಪರದಾಡುವಂತಾಗಿತ್ತು.

12 ಗಂಟೆಗಳ ಕಾಲ ನಡೆದ ಸಾಹಸಈ ಸವಾಲನ್ನು ಸ್ವೀಕರಿಸಿದ ಸಿದ್ದಗಂಗಾ ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜ ರಿ ವಿಭಾಗದ ವೈದ್ಯರು, ‘ಟೋ ಟು ತಂಬ್ ಟ್ರಾನ್ಸ್‌ಫರ್’ ಎಂಬ ವಿಶೇಷ ಚಿಕಿತ್ಸೆ ನೀಡಲು ನಿರ್ಧರಿಸಿದರು. ರೋಗಿಯ ಕಾಲಿನ ಒಂದು ಬೆರಳನ್ನು ತೆಗೆದು, ಅದನ್ನು ಕೈಯ ಹೆಬ್ಬೆರಳಿನ ಜಾಗಕ್ಕೆ ಜೋಡಿಸಲಾಯಿತು. ಮುಂದಿನ ಎರಡು ತಿಂಗಳಲ್ಲಿ ಉಳಿದ ಎರಡು ಬೆರಳುಗಳನ್ನು ಜೋಡಿಸಾಗುತ್ತದೆ. ಮೈಕ್ರೋಸ್ಕೋಪ್ ಬಳಸಿ ಅತೀ ಸಣ್ಣ ರಕ್ತನಾಳಗಳು ಮತ್ತು ನರಗಳನ್ನು ಒಂದೊಂದಾಗಿ ಜೋಡಿಸುವ ಈ ಸಂಪೂರ್ಣ ಪ್ರಕ್ರಿಯೆ ಸುಮಾರು ೧೨ ಗಂಟೆಗಳ ಕಾಲ ನಿರಂತರವಾಗಿ ನಡೆಯಿತು.

ಸಾಧನೆ ಮಾಡಿದ ವೈದ್ಯರ ತಂಡ ಪ್ಲಾಸ್ಟಿಕ್ ಸರ್ಜನ್‌ಗಳಾದ ಡಾ. ಮಧುಸೂದನ್ ಕೆ. ಮತ್ತು ಡಾ. ಉದಯ್, ಅರಿವಳಿಕೆ ತಜ್ಞರಾದ ಡಾ. ಶಶಿಕಿರಣ್, ಡಾ. ನಾಗಭೂಷಣ್ ಹಾಗೂ ಶುಶ್ರೂಷಾ ಸಿಬ್ಬಂದಿಯ ತಂಡ ಈ ಯಶಸ್ವಿ ಶಸ್ತ್ರಚಿಕಿತ್ಸೆಯನ್ನು ನಡೆಸಿದೆ.