ಸಂವಿಧಾನ ಅಂಗೀಕಾರದ ಅಮೃತ ಮಹೋತ್ಸವ ಆಚರಣೆ

| Published : Nov 28 2024, 12:33 AM IST

ಸಾರಾಂಶ

Amrita Mahotsava celebration of the adoption of the Constitution

ಚಳ್ಳಕೆರೆ:ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿ ಹಾಗೂ ಉತ್ತಮ ಆಡಳಿತ ನೀಡಲು ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಸಮರ್ಪಿಸಿಕೊಂಡು ಇಂದಿಗೆ ೭೫ ವರ್ಷ ಸಂದಿದ್ದು, ನಾವೆಲ್ಲರೂ ಸಂವಿಧಾನದ ಸಿದ್ದಾಂತಗಳನ್ನು ಪಾಲಿಸುವತ್ತ ಗಮನ ನೀಡಬೇಕೆಂದು ಬಾಪೂಜಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಓ.ಬಾಬುಕುಮಾರ್ ತಿಳಿಸಿದರು.

ಅವರು, ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಸಮರ್ಪಣಾ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಬೋಧಕ ವರ್ಗಕ್ಕೆ ಸಂವಿಧಾನದ ಕರಡು ಪ್ರತಿ ವಾಚಿಸಿಪ್ರತಿಜ್ಞಾವಿಧಿಯನ್ನು ಬೋಧಿಸಿದರು.

ಕನ್ನಡ ಪ್ರಾಧ್ಯಾಪಕ ಡಾ.ಜಿ.ವಿ.ರಾಜಣ್ಣ, ಎಚ್.ಆರ್.ಮುಜೀಬುಲ್ಲಾ, ಭಾಗ್ಯಲಕ್ಷ್ಮೀ, ಮಾರುತಿ, ರಮೇಶ್, ಕೆಂಚಪ್ಪ, ಮಮತಾ, ಪ್ರೇಮ, ರಚಿತಾ ಮುಂತಾದವರು ಉಪಸ್ಥಿತರಿದ್ದರು.

------

ಪೋಟೋ: ಚಳ್ಳಕೆರೆ ನಗರದ ಬಾಪೂಜಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂವಿಧಾನ ಸಮರ್ಪಣಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಂವಿಧಾನ ಪ್ರತಿಜ್ಞಾವಿಧಿ ಬೋಧಿಸಲಾಯಿತು.

೨೬ಸಿಎಲ್‌ಕೆ೩