ಅಮೃತ ವಿಶ್ವವಿದ್ಯಾಪೀಠಂನಲ್ಲಿ ಐಇಇಇ ವಿಚಾರ ಸಂಕಿರಣ ಪೂರ್ವ ಕಾರ್ಯಾಗಾರ

| Published : Mar 19 2024, 12:50 AM IST

ಅಮೃತ ವಿಶ್ವವಿದ್ಯಾಪೀಠಂನಲ್ಲಿ ಐಇಇಇ ವಿಚಾರ ಸಂಕಿರಣ ಪೂರ್ವ ಕಾರ್ಯಾಗಾರ
Share this Article
  • FB
  • TW
  • Linkdin
  • Email

ಸಾರಾಂಶ

ವಿವಿಧ ಹಂತಗಳಲ್ಲಿರುವ ಸಂಶೋಧಕರು ಈಗಾಗಲೇ ಸಂಶೋಧನಾ ಪ್ರಸ್ತಾವ ಸಲ್ಲಿಸಿದ್ದು, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ವೃತ್ತಿಪರ ಹಾಗೂ ಶೈಕ್ಷಣಿಕ ಪರಿಣತರಿಂದ ಸಂಶೋಧನಾ ಪ್ರಸ್ತಾವಗಳಿಗೆ ಸೂಕ್ತ ಮಾರ್ಗದರ್ಶನ ಕೊಡಿಸುವುದು

ಫೋಟೋ- 18ಎಂವೈಎಸ್ 33ಕನ್ನಡಪ್ರಭ ವಾರ್ತೆ ಮೈಸೂರು

ಕ್ಲೌಡ್ ಕಂಪ್ಯೂಟಿಂಗ್ ಇನ್ ಎಮರ್ಜಿಂಗ್ ಮಾರ್ಕೆಟ್ಸ್ ವಿಷಯ ಕುರಿತು ಆಯೋಜಿಸಿರುವ 13ನೇ ಅಂತಾರಾಷ್ಟ್ರೀಯ ಐಇಇಇ ವಿಚಾರ ಸಂಕಿರಣದ ಪೂರ್ವಭಾವಿ ಕಾರ್ಯಾಗಾರವನ್ನು ಅಮೃತ ವಿಶ್ವವಿದ್ಯಾಪೀಠಂನಲ್ಲಿ ಆಯೋಜಿಸಲಾಗಿತ್ತು.

ವಿವಿಧ ಹಂತಗಳಲ್ಲಿರುವ ಸಂಶೋಧಕರು ಈಗಾಗಲೇ ಸಂಶೋಧನಾ ಪ್ರಸ್ತಾವ ಸಲ್ಲಿಸಿದ್ದು, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ವೃತ್ತಿಪರ ಹಾಗೂ ಶೈಕ್ಷಣಿಕ ಪರಿಣತರಿಂದ ಸಂಶೋಧನಾ ಪ್ರಸ್ತಾವಗಳಿಗೆ ಸೂಕ್ತ ಮಾರ್ಗದರ್ಶನ ಕೊಡಿಸುವುದು ಇದರ ಮುಖ್ಯ ಉದ್ಧೇಶ.

ಇದಕ್ಕೆ ಪೂರಕವಾಗಿ ಅನೇಕ ದಿಕ್ಸೂಚಿ ಭಾಷಣಗಳನ್ನು ಏರ್ಪಡಿಸಲಾಗಿತ್ತು. ಟಿಐಇ (ದಿ ಇಂಡಸ್ ಆಂಥ್ರಪ್ರೆನ್ಯುರ್) ಮೈಸೂರು ಚಾಪ್ಟರ್ ನ ಅಧ್ಯಕ್ಷರು ಹಾಗೂ ಆಶಯ ಡಿಸೈನ್ ಸೊಲ್ಯುಶನ್ಸ್ ನ ಡಾ. ಮಹೇಶ್ ರಾವ್ ’ಯೂಸ್ ಆಫ್ ಪ್ರೆಡಿಕ್ಟಿವ್ ಅನಾಲಿಟಿಕ್ಸ್ ಇನಹೆಲ್ತ್ ಕೇರ್ಕುರಿತು; ಐಬಿಎಂನ ಗುರ್ವಿಂದರ್ ಸಿಂಗ್ ಹಾಗೂ ಅಕ್ಸೆಂಚರ್ ನ ಯತಿನ್ ಗಾವ್ಡೆ ಜಂಟಿಯಾಗಿ ಜೆನ್ ಎಐ ಇಂಟ್ರೊಡಕ್ಷನ್ ವಿಥ್ ವಾಟ್ಸನ್ ಎಕ್ಸ್ ಕುರಿತು; ಎಂಐಟಿ ಮೈಸೂರಿನ ಡಾ. ರವಿಚಂದ್ರ ಕುಲಕರ್ಣಿ ಹಾಗೂ ಸಿವೈಎಎಜಿ ಟೆಕ್ನೊಲಾಜಿಸ್ ನ ಕಿರಣ್ ಪುದುಕುಡಿ ನೆಕ್ಸ್ಟ್ ಜೆನ್ ಸೋಶಿಯಲ್ ಇಂಪ್ಯಾಕ್ಟ್ ವಿಥ್ ಐಇಇಇ ಸಸ್ಟೇನೇಬಲ್ ಡೆವಲಪ್ಮೆಂಟ್ ಪ್ಲಾಟ್ ಫಾರ್ಮ್ ಕುರಿತು ಮಾತನಾಡುವರು.

ಇದೇ ಸಂದರ್ಭದಲ್ಲಿ ಮೈಸೂರಿನ ವಿಗ್ಯಾನ್ ಡೇಟಾ ಲ್ಯಾಬ್ಸನ್ ಶ್ರೀನಿವಾಸ್ ವರದರಾಜನ್, ಲೆನೊವೊ ಇಂಡಿಯಾದ ಶಿವಕುಮಾರ್ ದಕ್ಷಿಣಾಮೂರ್ತಿ ಕೂಡ ವಿಚಾರ ಮಂಡಿಸಿದರು.

ಈ ವೇಳೆ ವಿಚಾರ ಸಂಕಿರಣದ ಪೂರ್ವಭಾವಿಯಾಗಿ ನಡೆದ ಕಾರ್ಯಾಗಾರದ ಕುರಿತು ಬೆಂಗಳೂರಿನ ಪ್ರಗ್ಯಾನ್ ಡೇಟಾ ಲ್ಯಾಬ್ಸ್ ಮತ್ತು ವಿಚಾರಸಂಕಿರಣದ ಸ್ಟಿಯರಿಂಗ್ ಕಮಿಟಿಯ ಸದಸ್ಯರಾದ ಡಾ.ಟಿ.ಎಸ್. ಮೋಹನ್ ಮಾಹಿತಿ ನೀಡಿದರು. ಅಮೃತ ವಿಶ್ವವಿದ್ಯಾಪೀಠಂನ ಅಸೋಸಿಯೇಟ್ ಡೀನ್ ಪ್ರೊ. ಶೇಖರ್ ಬಾಬು, ಪ್ರಾಂಶುಪಾಲ ಡಾ.ಜಿ. ರವೀಂದ್ರ ನಾಥ್ ಇದ್ದರು.