ತರೀಕೆರೆ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳು, ಯುವಜನರು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಈ ಅಭಿಯಾನದ ಮುಖ್ಯ ಉದ್ದೇಶ. ವ್ಯಸನಮುಕ್ತ ಸಮಾಜ-ನಮ್ಮೆಲ್ಲರ ಸಂಕಲ್ಪ ಎಂದು ಪುರಸಭೆ ಸದಸ್ಯ, ಶ್ರೀ ಸಾಯಿ ಇಂಟರ್ ನ್ಯಾಷನಲ್ ಸ್ಕೂಲ್ ಕಾರ್ಯದರ್ಶಿ ಶಶಾಂಕ್ ಟಿ.ಜಿ.ಹೇಳಿದ್ದಾರೆ.

ತರೀಕೆರೆಯಲ್ಲಿ ಮಾದಕ ವಸ್ತು ವಿರೋಧಿ ಜಾಗೃತಿಗೆ ಮ್ಯಾರಥಾನ್

ಕನ್ನಡಪ್ರಭ ವಾರ್ತೆ ತರೀಕೆರೆ

ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳು, ಯುವಜನರು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಈ ಅಭಿಯಾನದ ಮುಖ್ಯ ಉದ್ದೇಶ. ವ್ಯಸನಮುಕ್ತ ಸಮಾಜ-ನಮ್ಮೆಲ್ಲರ ಸಂಕಲ್ಪ ಎಂದು ಪುರಸಭೆ ಸದಸ್ಯ, ಶ್ರೀ ಸಾಯಿ ಇಂಟರ್ ನ್ಯಾಷನಲ್ ಸ್ಕೂಲ್ ಕಾರ್ಯದರ್ಶಿ ಶಶಾಂಕ್ ಟಿ.ಜಿ.ಹೇಳಿದ್ದಾರೆ.

ಶನಿವಾರ ಶ್ರೀ ಸಾಯಿ ಇಂಟರ್‌ ನ್ಯಾಷನಲ್ ಸ್ಕೂಲ್, ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜು, ಲಯನ್ಸ್ ಕ್ಲಬ್, ರೋಟರಿ ಕ್ಲಬ್, ಪುರಸಭೆ ತರೀಕೆರೆ, ಆರಕ್ಷಕ ಇಲಾಖೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಭೂಮಿ ಫೌಂಡೇಶನ್ ಸಹಕಾರದಲ್ಲಿ ಶ್ರೀ ಸಾಯಿ ಇಂಟರ್ ನ್ಯಾಷನಲ್ ಸ್ಕೂಲ್ ಮುಂಭಾಗ ನಡೆದ ಮಾದಕ ವಸ್ತು ವಿರೋಧಿ ಜಾಗೃತಿ ಮ್ಯಾರಥಾನ್‌/ ಅಭಿಯಾನಕ್ಕೆ ಚಾಲನೆ ನೀಡಿದರು.

ಆರೋಗ್ಯ ಇಲಾಖೆ ಡಾ. ಪ್ರಸನ್ನ ಕುಮಾರ್ ಸಣ್ಣಕ್ಕಿ ಮಾತನಾಡಿ ಹೊರ ರಾಜ್ಯಗಳಿಂದ ಮಾದಕ ವಸ್ತುಗಳು ನಮ್ಮ ಯುವಕರ ಕೈ ಸೇರಿ ನಮ್ಮ ಯುವಕರು ವ್ಯಸನಿಗಳಾಗಿ ಖಿನ್ನತಗೆ ಒಳಗಾಗುತ್ತಿದ್ದಾರೆ. ವಿದ್ಯಾರ್ಥಿಗಳು ಇಂತಹ ಮಾದಕ ವಸ್ತುಗಳ ವ್ಯಸನದಿಂದ ಮುಕ್ತವಾಗಿ ಉತ್ತಮ ವಿದ್ಯಾಭ್ಯಾಸದಿಂದ ಒಳ್ಳೆಯ ಉದ್ಯೋಗ ಪಡೆಯಬೇಕು ಎಂದರು.

ಪೊಲೀಸ್ ಇನ್ಸ್‌ಪೆಕ್ಟರ್ ರಾಮಚಂದ್ರ ನಾಯಕ್ ಮಾತನಾಡಿ ಮಾನವ ಕುಲಕ್ಕೆ ದೊಡ್ಡ ಮಾರಕ ಈ ಮಾದಕ ವಸ್ತುಗಳು, ಇಂತಹ ಅಭಿಯಾನದ ಮೂಲಕ ಮಾದಕ ವಸ್ತುಗಳ ನಿರ್ಮೂಲನೆಗೆ ಜಾಗೃತಿ ಮೂಡಿಸಬೇಕು. ಈ ಮೂಲಕ ನಶಾಮುಕ್ತ ದೇಶ ಕಟ್ಟೋಣ. ಮುಂದಿನ ಪೀಳಿಗೆಗೆ ಒಳ್ಳೆಯ ವಾತಾವರಣ ನೀಡೋಣ ಎಂದರು.

ರೋಟರಿ ಸಂಸ್ಥೆ ಅಧ್ಯಕ್ಷ ಕೆ. ಪಿ. ಕುಮಾರ್, ಲಯನ್ಸ್ ಅಧ್ಯಕ್ಷ ಟಿ.ವಿ.ಪ್ರದೀಪ್ ಕುಮಾರ್, ಉಪಾಧ್ಯಕ್ಷ ಟಿ.ಎಂ.ರಾಜು, ಪದಾದಿಕಾರಿಗಳು, ಸದಸ್ಯರು, ಮನಸು ಪ್ರತಿಷ್ಠಾನ ಅಧ್ಯಕ್ಷ ಟಿ.ಆರ್.ಶ್ರೀಧರ್, ಪುರಸಭೆ ನಾಮಿನಿ ಸದಸ್ಯ ಅದಿಲ್ ಪಾಶ, ಪ್ರಾಂಶುಪಾಲ ಡಾ. ಪಿ.ಕಾರ್ತಿಕೇಯನ್ ಸದಸ್ಯರು, ಪೋಷಕರು, 5 ಕೆ ಮ್ಯಾರಥಾನ್ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

5 ಕೆ ಮ್ಯಾರಥಾನ್ ಅಭಿಯಾನ ಶ್ರೀ ಸಾಯಿ ಇಂಟರ್ನ್ಯಾಷನಲ್ ಶಾಲೆಯಿಂದ ಬಿ. ಎಚ್. ರಸ್ತೆ ಮೂಲಕ ಎಸ್. ಜೆ. ಎಂ, ಕಾಲೇಜ್, ಗಾಳಿಹಳ್ಳಿ ಕ್ರಾಸ್, ಕೆಇಬಿ ಸರ್ಕಲ್, ಎಂ ಜಿ ರಸ್ತೆಯ ಮೂಲಕ ಸಾಗಿ ಮಾರಿಗದ್ದಿಗೆ ಸರ್ಕಲ್ ಹಾದು, ಮಹಾತ್ಮಾ ಗಾಂಧಿ ವೃತ್ತದಲ್ಲಿ ಮುಕ್ತಾಯಗೊಂಡಿತು.26ಕೆಟಿಆರ್.ಕೆ.1ಗೆ

ತರೀಕೆರೆಯಲ್ಲಿ ಮಾದಕ ವಸ್ತು ವಿರೋಧಿ ಜಾಗೃತಿ ಅಭಿಯಾನ 5 ಕೆ ಮ್ಯಾರಥಾನ್‌ ಗೆ ಶ್ರೀ ಸಾಯಿ ಇಂಟರ್ ನ್ಯಾಷನಲ್ ಸ್ಕೂಲ್ ಕಾರ್ಯದರ್ಶಿ ಶಶಾಂಕ್ ಟಿ.ಜಿ ಚಾಲನೆ ನೀಡಿದರು. ಪೊಲೀಸ್ ಇನ್ಸ್ ಪೆಕ್ಟರ್ ರಾಮಚಂದ್ರ ನಾಯಕ್ ಮತ್ತಿತರರು ಇದ್ದರು.