ಅಯೋಧ್ಯೆಯಲ್ಲಿ ಪರಂಪರೆಯ ಏಕೀಕರಣದೊಂದಿಗೆ ಸಾಮರಸ್ಯದ ನಿರ್ಮಾಣ: ಡಾ.ಕೃಷ್ಣ ಭಟ್

| Published : Jan 24 2024, 02:04 AM IST

ಅಯೋಧ್ಯೆಯಲ್ಲಿ ಪರಂಪರೆಯ ಏಕೀಕರಣದೊಂದಿಗೆ ಸಾಮರಸ್ಯದ ನಿರ್ಮಾಣ: ಡಾ.ಕೃಷ್ಣ ಭಟ್
Share this Article
  • FB
  • TW
  • Linkdin
  • Email

ಸಾರಾಂಶ

ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ನಡೆದ ರಾಮೋತ್ಸವ ಸರಣಿ ಕಾರ್ಯಕ್ರಮ ಸಂಪನ್ನಗೊಂಡಿತು.

ಕನ್ನಡಪ್ರಭ ವಾರ್ತೆ ಪುತ್ತೂರುಅಯೋಧ್ಯೆಯಲ್ಲಿ ನಡೆಯುತ್ತಿರುವ ಅಭೂತಪೂರ್ವ ಕ್ಷಣಕ್ಕೆ ನಾವೆಲ್ಲರೂ ಸಾಕ್ಷಿಗಳಾಗಿದ್ದೇವೆ. ಅಯೋಧ್ಯೆಯಲ್ಲಿ ಪರಂಪರೆಯ ಏಕೀಕರಣದೊಂದಿಗೆ ಸಾಮರಸ್ಯದ ಸ್ಥಾಪನೆಯಾಗಿದೆ. ಶ್ರೀರಾಮನ ಆದರ್ಶಗಳನ್ನು ನಮ್ಮೊಳಗೆ ಅಳವಡಿಸಿಕೊಂಡು, ಭವಿಷ್ಯದಲ್ಲಿ ಸತ್ಪ್ರಜೆಗಳಾಗಿ ನಾಡಿನ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸುವಂತಾಗಬೇಕು ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ. ಕೃಷ್ಣಭಟ್ ಹೇಳಿದರು.ಅವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಹಾಗೂ ಸ್ನಾತಕ ವಿಭಾಗದ ಸಹಯೋಗದಲ್ಲಿ ನಡೆದ ಶ್ರೀರಾಮೋತ್ಸವ ಸರಣಿ ಕಾರ್ಯಕ್ರಮದಲ್ಲಿ ಶ್ರೀರಾಮ ಭಾವ ಪೂಜೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಅಯೋಧ್ಯೆಯಲ್ಲಿ ಪರಂಪರೆಯ ಏಕೀಕರಣದೊಂದಿಗೆ ಸಾಮರಸ್ಯದ ಸ್ಥಾಪನೆಯಾದ ಹಿನ್ನೆಲೆಯಲ್ಲಿ ವಿವೇಕಾನಂದ ಮಹಾವಿದ್ಯಾಲಯದಲ್ಲಿ ನಿರಂತರ ಹತ್ತು ದಿನಗಳ ರಾಮನ ಗುಣಗಾನ ಮಾಡುವಂತ ಕಾರ್ಯಕ್ರಮವು ನಡೆದಿದ್ದು, ಇದು ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ನಡೆದಿಲ್ಲ, ನಡೆಯುವುದೂ ಇಲ್ಲ. ಇದನ್ನು ಅವಲೋಕನ ಮಾಡಿದರೆ ಇಡೀ ರಾಷ್ಟ್ರವೇ ಗಮನಿಸಬೇಕಾದ ವಿಚಾರವಾಗಿದೆ. ಹಾಗಾಗಿ ಇದು ನಿಸ್ವಾರ್ಥ ಸೇವೆಯ ಪ್ರತಿರೂಪವಾಗಿದೆ ಎಂದರು.ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಮಾತನಾಡಿ, ಅನೇಕರು ಶೈಕ್ಷಣಕವಾಗಿ ಈ ಕಾರ್ಯಕ್ರಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇವರೆಲ್ಲರಿಗೂ ಶ್ರೀರಾಮನ ಆಶೀರ್ವಾದ ಖಂಡಿತ ಇದ್ದೇ ಇರುತ್ತದೆ. ಶತ ಶತಮಾನಗಳ ಹೋರಾಟದ ಫಲ, ಕೋಟ್ಯಂತರ ಭಾರತೀಯರ ಕೋರಿಕೆಯು ಹಲವಾರು ಎಡರು ತೊಡರುಗಳನ್ನು ದಾಟಿ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ನೆರವೇರಿದೆ. ಇದರಿಂದ ನಮ್ಮ ದೇಶಕ್ಕೆ ಹೊಸ ಚೈತನ್ಯ ಬಂದಿದ್ದು, ಇದು ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡಬೇಕಾದ ದಿನ. ಶ್ರೀರಾಮ ಚರಿತ್ರೆಯಲ್ಲಿ ಮಾತ್ರವಲ್ಲದೆ ಇಡೀ ವಿಶ್ವಕ್ಕೇ ಆದರ್ಶಪುರುಷನಾಗಿ ಕಂಗೊಳಿಸುತ್ತಿದ್ದಾನೆ. ಅವನ ಆದರ್ಶಗಳನ್ನು ನಮ್ಮೊಳಗೆ ಅಳವಡಿಸಿಕೊಂಡು ಹೊಸ ರಾಷ್ಟ್ರದ ನಿರ್ಮಾಣವಾಗಲಿ ಎಂದರು.ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳೀಕೃಷ್ಣ ಕೆ.ಎನ್. ಮಾತನಾಡಿ, ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಹಿನ್ನೆಯಲ್ಲಿ ಕಾಲೇಜಿನಲ್ಲಿ ನಿರಂತರವಾಗಿ ನೆರವೇರಿದ ಕಾರ‍್ಯಕ್ರಮದಲ್ಲಿ ವಿದ್ಯಾರ್ಥಿಗಳು ಶ್ರೀರಾಮನಿಗಾಗಿ ಕರಸೇವೆಯನ್ನು ಮಾಡುವ ರೀತಿಯಲ್ಲಿ ಪಾಲ್ಗೊಂಡಿದ್ದಾರೆ. ಕಾಲೇಜಿನ ರಥದ ಗಾಲಿಗಳಂತೆ ಬೋಧಕ-ಬೋಧಕೇತರ ಸಿಬ್ಬಂದಿಗಳು ಕೂಡಾ ಶ್ರೀರಾಮೋತ್ಸವ ಸರಣಿ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಗಮನಾರ್ಹ ವಿಚಾರ. ಅಂತೆಯೇ ರಾಮನ ಸಾನ್ನಿಧ್ಯದಲ್ಲಿ ಕಚೇರಿ ಸಹಾಯಕ ಮತ್ತು ಪರಿಚಾರಕಿಯರನ್ನು ಸನ್ಮಾನ ಮಾಡಿದ್ದು ಹೆಮ್ಮೆಯ ಕ್ಷಣವಾಗಿದೆ ಎಂದು ಹೇಳಿದರು.ಕಾಲೇಜ್‌ನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್, ಕಾಲೇಜು ಪರೀಕ್ಷಾಂಗ ಕುಲಸಚಿವರ ಡಾ. ಎಚ್.ಜಿ. ಶ್ರೀಧರ್, ಕಾಲೇಜಿನ ಕಚೇರಿ ಸಹಾಯಕ ಮೋಹನ್, ಪ್ರಥಮ ಸಾತಕೋತ್ತರ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿ ಸುಲಕ್ಷಣ ಶರ್ಮ ಮಾತನಾಡಿದರು.

ಈ ಸಂದರ್ಭದಲ್ಲಿ ಕಾಲೇಜು ವಸತಿ ನಿಲಯದ ಪಾಕ ತಜ್ಞರಾದ ಅಶೋಕ, ಮೋಹನ್ ಎಚ್. ಮತ್ತು ಕಂಪ್ಯೂಟರ್ ಟೆಕ್ನಿಷಿಯನ್ ಪುನೀತ್ ಅರಸೀಕೆರೆ ಅವರನ್ನು ಸನ್ಮಾನಿಸಲಾಯಿತು. ‘ಎತ್ತಿ ಕೊಂಡಾಡಿ ರಾಮ ನಿನ್ನ’ ಎಂಬ ಆಲ್ಬಂ ಸಾಂಗ್ ಬಿಡುಗಡೆಗೊಳಿಸಲಾಯಿತು.ವಿದ್ಯಾರ್ಥಿಗಳಾದ ಆಶಿತಾ ಸ್ವಾಗತಿಸಿದರು. ಸ್ವಾತಿ ವಂದಿಸಿದರು. ಹರಿಪ್ರಸಾದ್ ಈಶ್ವರಮಂಗಲ ಕಾರ್ಯಕ್ರಮವನ್ನು ನಿರೂಪಿಸಿದರು.