ಸಾರಾಂಶ
ಜಿಲ್ಲೆಯ ಅಂಚೆ ವಿಭಾಗ ಕಚೇರಿಗೆ ಜಿಲ್ಲಾ ಸ್ವೀಪ್ ಸಮಿತಿ ಅವರಯ ಭೇಟಿ ನೀಡಿ ಅಂಚೆ ಇಲಾಖೆಯಲ್ಲಿ ಮತದಾನ ಜಾಗೃತಿಗಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಕುರಿತು ಕಚೇರಿಯ ಅಧೀಕ್ಷಕ ಜಿ.ಬಿ.ನಾಯಕ ಅವರೊಂದಿಗೆ ಚರ್ಚಿಸಲಾಯಿತು.
ಕನ್ನಡಪ್ರಭ ವಾರ್ತೆ ವಿಜಯಪುರ
ಜಿಲ್ಲೆಯ ಅಂಚೆ ವಿಭಾಗ ಕಚೇರಿಗೆ ಜಿಲ್ಲಾ ಸ್ವೀಪ್ ಸಮಿತಿ ಅವರಯ ಭೇಟಿ ನೀಡಿ ಅಂಚೆ ಇಲಾಖೆಯಲ್ಲಿ ಮತದಾನ ಜಾಗೃತಿಗಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಕುರಿತು ಕಚೇರಿಯ ಅಧೀಕ್ಷಕ ಜಿ.ಬಿ.ನಾಯಕ ಅವರೊಂದಿಗೆ ಚರ್ಚಿಸಲಾಯಿತು.ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನ ಜಾಗೃತಿಗಾಗಿ ತಯಾರಿಸಿರುವ ಶೀಲುಗಳು, ಕರಪತ್ರಗಳು ಮತ್ತು ಪೋಸ್ಟರ್‌ಗಳನ್ನು ಹಸ್ತಾಂತರಿಸಲಾಯಿತು. ಮತದಾನ ಪ್ರಮಾಣ ಹೆಚ್ಚಿಸಲು ವಿಜಯಪುರ ಜಿಲ್ಲೆಯ ಅಂಚೆ ವಿಭಾಗದ ಅಡಿಯಲ್ಲಿ ಬರುವ ಎಲ್ಲ ಅಂಚೆ ಕಚೇರಿಗಳಿಗೆ ಬರುವ ಗ್ರಾಹಕರಿಗೆ ಮತದಾನ ಜಾಗೃತಿ ಮೂಡಿಸಲು ವಿನಂತಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಯೋಜನಾ ಅಂದಾಜು ಮತ್ತು ಮೌಲ್ಯಮಾಪನಾಧಿಕಾರಿ ಎ.ಬಿ.ಅಲ್ಲಾಪೂರ, ಕೆನರಾ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ದಾರಾವತ್ ವೀರಣ್ಣ, ಹಿರಿಯ ವ್ಯವಸ್ಥಾಪಕ ವಿಷ್ಣುವರ್ಧನ ರೆಡ್ಡಿ, ಕೆನರಾ ಬ್ಯಾಂಕ್ ಹಿರಿಯ ವ್ಯವಸ್ಥಾಪಕ ಅನಿಲ ಮೋರೆ, ಸ್ಟೇಟ್ ಬ್ಯಾಂಕ್‌ನ ಕ್ರೆಡಿಟ್ ಮ್ಯಾನೇಜರ್ ಕೃಷ್ಣಯ್ಯ, ಆಪರೇಷನ್ಸ್ ಮ್ಯಾನೇಜರ್ ಪಿ.ಆರ್.ದೇಸಾಯಿ, ಅಂಚೆ ವಿಭಾಗದ ಉಪ ಅಧೀಕ್ಷಕ ವ್ಹಿ.ವ್ಹಿ.ನಿಂಬರಗಿ, ಕಚೇರಿ ಸಹಾಯಕ ವ್ಹಿ.ಎಸ್.ಉಮರಾಣಿ, ವಿವಿಧ ಬ್ಯಾಂಕ್ ಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ, ಜಿಲ್ಲಾ ಪಂಚಾಯತಿಯ ಸಿ.ಸಿಕುಲಕರ್ಣಿ, ವಿಶ್ವನಾಥ ಶಹಾಪೂರ, ಸುವರ್ಣ ಭಜಂತ್ರಿ, ಹಾಗೂ ಇತರರು ಉಪಸ್ಥಿತರಿದ್ದರು.