ಸಾರಾಂಶ
ಕನ್ನಡಪ್ರಭ ವಾರ್ತೆ ತಾಳಿಕೋಟೆ
ಪಟ್ಟಣದಲ್ಲಿ ರಾಷ್ಟ್ರಮಟ್ಟದ ಕ್ರೀಡೆ ನಡೆಸಬೇಕೆಂಬ ಆಸೆ ಯಿದ್ದು, ರಾಜ್ಯಮಟ್ಟದಲ್ಲಿ ಹೆಸರು ತರುವ ಕ್ರೀಡೆ ಈ ಭಾಗದಲ್ಲಿ ನಡೆಯಿತು. ಕ್ರೀಡಾಪಟುಗಳ ಆಸಕ್ತಿ ಹಾಗೂ ಕ್ರೀಡಾಮನೋಭಾವನೆ ಹೆಚ್ಚಿದೆ ಎಂಬುದು ಇದರಿಂದ ಗೊತ್ತಾಗಲಿದೆ ಎಂದು ಪಪೂ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಚಂದ್ರಶೇಖರ ಹೊಸಮನಿ ಹೇಳಿದರು.ಪಟ್ಟಣದ ಎಸ್.ಎಸ್.ವಿದ್ಯಾ ಸಂಸ್ಥೆಯ ಮೈದಾನದಲ್ಲಿ ಬೆಂಗಳೂರಿನ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ), ವಿಜಯಪುರ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ), ಎಚ್.ಎಸ್.ಪಾಟೀಲ ಸ್ವತಂತ್ರ ಪಪೂ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಪಪೂ ಕಾಲೇಜುಗಳ ಬಾಲಕ ಮತ್ತು ಬಾಲಕಿಯರ ರಾಜ್ಯಮಟ್ಟದ ವಾಲಿಬಾಲ್ ಕ್ರೀಡಾಕೂಟದ ಬಹುಮಾನ ವಿತರಣೆಯಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿ ಪಠ್ಯೇತರ ಚಟುವಟಿಕೆಯೊಂದಿಗೆ ಕ್ರೀಡಾ ಆಸಕ್ತಿ ಬೆಳೆಸಿಕೊಳ್ಳಿ. ವ್ಯವಸ್ಥಿತ ಆಸಕ್ತಿಯನ್ನು ಬೆಳೆಸಿಕೊಂಡು ಸದೃಢ ದೇಹ ಹೊಂದಬೇಕು ಎಂದು ಸಲಹೆ ನೀಡಿದರು.
ಖ್ಯಾತ ನೇತ್ರ ತಜ್ಞ ಡಾ.ಪ್ರಭುಗೌಡ ಲಿಂಗದಳ್ಳಿ ಮಾತನಾಡಿ, ಆರೋಗ್ಯ ದೃಷ್ಟಿ ಒಳ್ಳೆಯದಾಗಿದ್ದರೆ ಕ್ರೀಡೆ ಎಂಬುದು ಒಳ್ಳೆಯದಾಗಿ ಪರಿಣಮಿಸಲಿದೆ. ಅಂತಹ ಕ್ರೀಡಾ ಮನೋಭಾವವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವುದರೊಂದಿಗೆ ಕ್ರೀಡಾಕೂಟದ ಕೇಂದ್ರ ಬಿಂದು ಎಚ್.ಎಸ್.ಪಾಟೀಲ ಅವರ ಸೇವಾ ಕಾರ್ಯ ಮಹತ್ವದ್ದಾಗಿದೆ. ರಾಜ್ಯಮಟ್ಟದ ವಾಲಿಬಾಲ್ ಕ್ರೀಡೆ ರಾಷ್ಟ್ರಮಟ್ಟದ ಕ್ರೀಡೆ ಎಂಬಂತೆ ಭಾಸವಾಯಿತು. ಕ್ರೀಡಾಪಟುಗಳು ಆಸಕ್ತಿಯಿಂದ ಆಟವಾಡಿದ್ದಾರೆ ಎಂದರು.ಅಸ್ಕಿ ಫೌಡೇಷನ್ ಅಧ್ಯಕ್ಷ ಸಿ.ಬಿ.ಅಸ್ಕಿ ಮಾತನಾಡಿ, ತಾಳಿಕೋಟೆಯಲ್ಲಿ ನಡೆದ ಸಾಹಿತ್ಯ ಸಮ್ಮೇಳನವೂ ರಾಜ್ಯಮಟ್ಟದಲ್ಲಿ ಹೆಸರಾಯಿತು, ವಾಲಿಬಾಲ್ ಕ್ರೀಡಾಕೂಟವು ಆಸಕ್ತಿ ಮೂಡಿಸಿದೆ. ಎಚ್.ಎಸ್.ಪಾಟೀಲ, ಕಸಾಪ ಅಧ್ಯಕ್ಷ ಆರ್.ಎಲ್.ಕೊಪ್ಪದ ಹಾಗೂ ಎಲ್ಲ ನಾಗರಿಕರು ಒಗ್ಗೂಡಿ ಕ್ರೀಡಾಕೂಟದ ಯಶಸ್ವಿಗೆ ಕಾರಣರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕ್ರೀಡಾ ಸಂಚಾಲಕ ಬೆಂಗಳೂರು ಮುನಿರಾಜು ಮಾತನಾಡಿ, ಈ ಕ್ರೀಡಾಕೂಟ ಉತ್ಸಾಹಭರಿತವಾಗಿತ್ತು. ಸಂಘಟಿಕರ ಕಾರ್ಯ ಮಹತ್ವದ್ದಾಗಿತ್ತು. ಯಾವುದೇ ಕಾರ್ಯ ಮಾಡಲು ದುಡ್ಡು ಇರಬಹುದು ಆದರೆ ಏರ್ಪಡಿಸುವದು ಸುಲಭವಲ್ಲ. ಈ ಕಾಲೇಜಿನ ಸಂಸ್ಥಾಪಕ ಎಚ್.ಎಸ್.ಪಾಟೀಲರು ಸಂಘಟಿಸಿರುವ ಕ್ರೀಡಾಕೂಟ ಒಳ್ಳೆಯದಾಗಿತ್ತು ಎಂದು ಬಣ್ಣಿಸಿದರು.ಅಧ್ಯಕ್ಷತೆ ವಹಿಸಿದ್ದ ಎಸ್.ಎಸ್.ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಚ್.ಎಸ್.ಪಾಟೀಲ ಮಾತನಾಡಿದರು. ಶಿಕ್ಷಕ ಸಾಹೇಬಗೌಡ ಬಿರಾದಾರ ಮಾತನಾಡಿದರು. ಕಲಕೇರಿಯ ಷ.ಬ್ರ.ಗುರುಮಡಿವಾಳೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.
ವೇದಿಕೆಯಲ್ಲಿ ಎಸ್.ಎಸ್.ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಸಚೀನ ಪಾಟೀಲ, ಆಡಳಿತಾಧಿಕಾರಿ ಕಿರಣ ಪಾಟೀಲ, ಡಾ.ಎಂ.ಎಂ.ಬೆಳಗಲ್ಲ, ಸೋಮಾಪೂರ, ಡಾ.ಎಸ್.ಎಂ.ಸಜ್ಜನ, ನಾಗೇಶ ಕಟ್ಟಿಮನಿ, ಕಾಶೀನಾಥ ಮುರಾಳ, ಎಂ.ಎಚ್.ಕೇಂಭಾವಿ, ವಿಜಯಸಿಂಗ್ ಹಜೇರಿ, ರಾಜುಗೌಡ ಪಾಟೀಲ(ಚಿಂಚೋಳಿ), ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ, ಆರ್.ಎಲ್.ಕೊಪ್ಪದ, ಪ್ರಾಚಾರ್ಯ ಎಂ.ಎಸ್.ಬಿರಾದಾರ, ಪಿಎಸ್ಐ ರಾಮನಗೌಡ ಸಂಕನಾಳ, ಹಿರಿಯ ಪತ್ರಕರ್ತ ಜಿ.ಟಿ.ಘೋರ್ಪಡೆ, ರಾಮನಗೌಡ ಬಾಗೇವಾಡಿ, ಬಸರಾಜ ನಾಯ್ಕೋಡಿ, ಜೆಎಸ್‌ಎಸ್ ಸಂಸ್ಥೆಯ ಕಾರ್ಯದರ್ಶಿ ಶ್ರೀಕಾಂತ ಪತ್ತಾರ, ಸಿದ್ದನಗೌಡ ಮಂಗಳೂರ, ಪ್ರಕಾಶ ಹಜೇರಿ, ಪ್ರಾಚಾರ್ಯೆ ಎಂ.ಎಸ್.ಬಿರಾದಾರ, ದೈಹಿಕ ಉಪನ್ಯಾಸಕ ಎಸ್.ಬಿ.ಮಂಗ್ಯಾಳ್, ಪ್ರೌಢ ಶಾಲೆಯ ದೈಹಿಕ ಶಿಕ್ಷಕರಾದ ಎಂ.ಎಸ್.ರಾಯಗೊಂಡ, ಆರೀಫ ಹೊನ್ನುಟಗಿ, ರೋಹಿತ್ ನಾಯಕ ಇತರರು ಇದ್ದರು.ಸಹಾಯ ಸಹಕಾರ ನೀಡಿದವರಿಗೆ, ಉಪನ್ಯಾಸಕರಿಗೆ, ಶಿಕ್ಷಕರಿಗೆ ಸಂಸ್ಥೆಯ ಅಧ್ಯಕ್ಷ ಎಚ್.ಎಸ್.ಪಾಟೀಲ, ಸಂತೋಷ ಪಾಟೀಲ, ಕಿರಣ ಪಾಟೀಲ ಅವರು ಸನ್ಮಾನಿಸಿ ಗೌರವಿಸಿದರು. ಶಿಕ್ಷಕ ಸಂತೋಷ ಜಾಮಗೊಂಡಿ ಸ್ವಾಗತಿಸಿದರು. ಬಿ.ಐ.ಹಿರೇಹೊಳಿ ನಿರೂಪಿಸಿದರು. ಎ.ಬಿ.ಇರಾಜ ವಂದಿಸಿದರು.------------