ಗರಿಷ್ಠ ಸ್ವಚ್ಛತೆಗೆ ಬೇಕಿದೆ ಅರಿವಿನ ಕಾರ್ಯಾಗಾರ

| Published : Sep 30 2024, 01:18 AM IST

ಸಾರಾಂಶ

ಗುಬ್ಬಿ: ಶಿಕ್ಷಕರು ಹಾಗೂ ಮಕ್ಕಳಿಗೆ ತಮ್ಮ ಶಾಲೆ ಮತ್ತು ಪರಿಸರದ ಗರಿಷ್ಠ ಸ್ವಚ್ಛತೆ ಸಾಧಿಸಲು ಅರಿವಿನ ಕಾರ್ಯಾಗಾರದ ಅವಶ್ಯಕತೆ ಇದೆ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಅನುಪಮಾ ತಿಳಿಸಿದರು.

ಗುಬ್ಬಿ: ಶಿಕ್ಷಕರು ಹಾಗೂ ಮಕ್ಕಳಿಗೆ ತಮ್ಮ ಶಾಲೆ ಮತ್ತು ಪರಿಸರದ ಗರಿಷ್ಠ ಸ್ವಚ್ಛತೆ ಸಾಧಿಸಲು ಅರಿವಿನ ಕಾರ್ಯಾಗಾರದ ಅವಶ್ಯಕತೆ ಇದೆ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಅನುಪಮಾ ತಿಳಿಸಿದರು.

ಪಟ್ಟಣದಲ್ಲಿ ತಾಲೂ ಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಏರ್ಪಡಿಸಿದ್ದ ಸ್ವಚ್ಛತಾ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಎಲ್ಲರೂ ಜಾಗೃತರಾದಲ್ಲಿ ಮಾತ್ರ ಏರುತ್ತಿರುವ ಜಾಗತಿಕ ತಾಪಮಾನವನ್ನು ತಡೆಗಟ್ಟಲು ಸಾಧ್ಯ . ಅತ್ಯಂತ ಉತ್ತಮವಾದ ಸ್ಥಳೀಯ ಕಾರ್ಯವಿಧಾನಗಳ ಕುರಿತು ಮಕ್ಕಳಿಗೆ ತರಬೇತಿ ನೀಡಬೇಕು. ಘನ ತ್ಯಾಜ್ಯ ವಸ್ತುಗಳ ನಿರ್ವಹಣೆ ಹಾಗೂ ಕಾಗದದ ಪುನರ್ ಬಳಕೆ ಕುರಿತು ಅರಿವು ಮೂಡಿಸಬೇಕು.ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಪ್ರಸನ್ನ ಮಾತನಾಡಿ ಅಭಿಯಾನಗಳನ್ನು ನಡೆಸುವುದರಿಂದ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸಾಧ್ಯವಾಗುವುದು. ವಿದ್ಯಾವಂತರು ಹಾಗೂ ವಿಚಾರವಂತರು ಜಾಗೃತಗೊಂಡು ಎಲ್ಲರಲ್ಲಿಯೂ ಸ್ವಚ್ಛತೆ ಹಾಗೂ ಪರಿಸರ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕಿದೆ ಎಂದರು.

ಈ ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಪೂರ್ಣಿಮಾ ಯಾದವ್, ವಿನುತ ಡಿ ಎಸ್, ಮೇಧಾ ಪಿ ಎಂ, ವಕೀಲರ ಸಂಘದ ಕಾರ್ಯದರ್ಶಿ ಸುರೇಶ್, ಪದಾಧಿಕಾರಿ ರಂಗಸ್ವಾಮಿ, ಮಂಜುನಾಥ್, ನ್ಯಾಯವಾದಿಗಳು, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುಳಾದೇವಿ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.