ಮನರಂಜಿಸಿದ ಸಂಗೀತ ವೈಭವ ಕಾರ್ಯಕ್ರಮ

| Published : Sep 16 2024, 01:50 AM IST

ಸಾರಾಂಶ

ಯರಗಟ್ಟಿ ಸಮೀಪದ ಸತ್ತಿಗೇರಿ ಗ್ರಾಮದ ಕಮತ ತೋಟದ ಗಜಾನನ ಯುವಕ ಮಂಡಳಿ ಹಾಗೂ ವಿರೂಪಾಕ್ಷ ಮಾಮನಿ ಅಭಿಮಾನಿ ಬಳಗದ ಆಶ್ರಯದಲ್ಲಿ ಗಣೇಶ ಚತುರ್ಥಿ ನಿಮಿತ್ತ ಎ.ಮಧು ಎಂ.ಎಸ್. 41 ಬೇಸ್ಟ್ ಬೆಳಗಾವಿ ತಂಡದಿಂದ ನಡೆದ ಸಂಗೀತ ವೈಭವ ಕಾರ್ಯಕ್ರಮ ಸಾರ್ವಜನಿಕರ ಮನರಂಜಿಸಿತು.

ಕನ್ನಡಪ್ರಭ ವಾರ್ತೆ ಯರಗಟ್ಟಿ

ಸಮೀಪದ ಸತ್ತಿಗೇರಿ ಗ್ರಾಮದ ಕಮತ ತೋಟದ ಗಜಾನನ ಯುವಕ ಮಂಡಳಿ ಹಾಗೂ ವಿರೂಪಾಕ್ಷ ಮಾಮನಿ ಅಭಿಮಾನಿ ಬಳಗದ ಆಶ್ರಯದಲ್ಲಿ ಗಣೇಶ ಚತುರ್ಥಿ ನಿಮಿತ್ತ ಎ.ಮಧು ಎಂ.ಎಸ್. 41 ಬೇಸ್ಟ್ ಬೆಳಗಾವಿ ತಂಡದಿಂದ ನಡೆದ ಸಂಗೀತ ವೈಭವ ಕಾರ್ಯಕ್ರಮ ಸಾರ್ವಜನಿಕರ ಮನರಂಜಿಸಿತು.ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿರೂಪಾಕ್ಷ ಮಾಮನಿ ಭಾರತದ ಅಗಾಧತೆ ಮತ್ತು ವೈವಿಧ್ಯತೆಯಿಂದಾಗಿ ಭಾರತೀಯ ಸಂಗೀತ ಶಾಸ್ತ್ರೀಯ ಸಂಗೀತ, ಜಾನಪದ, ರಾಕ್ ಮತ್ತು ಪಾಪ್ ಒಳಗೊಂಡಿರುವ ಬಹು ಪ್ರಬೇಧಗಳು ಮತ್ತು ರೂಪಗಳಲ್ಲಿ ಹಲವಾರು ಪ್ರಕಾರಗಳನ್ನು ಒಳಗೊಂಡಿದೆ. ಇದು ಹಲವಾರು ಸಹಸ್ರಮಾನಗಳ ಇತಿಹಾಸ ಹೊಂದಿದೆ. ಭಾರತದಲ್ಲಿ ಸಂಗೀತ ಸಾಮಾಜಿಕ, ಧಾರ್ಮಿಕ ಜೀವನದ ಅವಿಭಾಜ್ಯ ಅಂಗವಾಗಿದೆ. ಗ್ರಾಮೀಣ ಭಾಗದ ಯುವ ಪ್ರತಿಭೆಗಳಿಗೆ ವೇದಿಕೆಯಾಗಿದೆ ಎಂದು ಹೇಳಿದರು.

ಈ ವೇಳೆ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು, ಮಹಾಂತೇಶ ಗೋಡಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಮಾಜಿ ಅಧ್ಯಕ್ಷ ಗೌಡಪ್ಪ ಸವದತ್ತಿ, ಪಂಚನಗೌಡ ದ್ಯಾಮನಗೌಡ್ರ, ಅಜೀತಕುಮಾರ ದೇಸಾಯಿ, ಈರಣ್ಣ ಚಂದರಗಿ, ಪರ್ವತಗೌಡ ಪಾಟೀಲ, ಶ್ರೀಶೈಲ ಬಳಗೇರ, ವಿಠ್ಠಲ ಬಂಟನೂರ, ಪ್ರಕಾಶ ಹೊಸಮನಿ, ಆನಂದ ಬಾಗೋಡಿ ಇತರರು ಇದ್ದರು.