ಸಾರಾಂಶ
ಮುಂದಿನ ದಿನದಲ್ಲಿ ಗಂಗಾಮತ ಸಮಾಜದ ಮಕ್ಕಳ ಹಿತದೃಷ್ಟಿಯಿಂದ ಎಸ್ ಟಿ ಸ್ಥಾನಮಾನ ಕಲ್ಪಿಸುವಂತೆ ಪ್ರಾಮಾಣಿಕವಾಗಿ ಹೋರಾಟ ಮಾಡುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಗುತ್ತಲ: ಮುಂದಿನ ದಿನದಲ್ಲಿ ಗಂಗಾಮತ ಸಮಾಜದ ಮಕ್ಕಳ ಹಿತದೃಷ್ಟಿಯಿಂದ ಎಸ್ ಟಿ ಸ್ಥಾನಮಾನ ಕಲ್ಪಿಸುವಂತೆ ಪ್ರಾಮಾಣಿಕವಾಗಿ ಹೋರಾಟ ಮಾಡುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಸಮೀಪದ ನರಸೀಪುರದ ನಿಜಶರಣ ಅಂಬಿಗರ ಚೌಡಯ್ಯನವರ ಪೀಠದಲ್ಲಿ ಆಯೋಜಿಸಿರುವ 7ನೇ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮದಲ್ಲಿ ಮಂಗಳವಾರ ಗಂಗಾರತಿಗೆ ಚಾಲನೆ ನೀಡಿ ಅವರು ಮಾತನಾಡಿದರು.ಗಂಗಾಮತ ಸಮಾಜದ ಜನರಲ್ಲಿ ಹೃದಯ ವೈಶ್ಯಾಲತೆ ಇದೆ. ಸಮಾಜದ ಅಂಕುಡೊಂಕು ತಿದ್ದುವ ನೇರ ನಿಷ್ಠರ ಅಂಬಿಗರ ಚೌಡಯ್ಯನವರಿಗೆ ನಿಜ ಶರಣ ಎಂದು ಕರೆದವರು ವಿಶ್ವಗುರು ಬಸವಣ್ಣವರು ಎಂದರು.ಗಂಗಾಮತ ಸಮಾಜದ ಮಕ್ಕಳಿಗೆ ಉತ್ತಮ ಶಿಕ್ಷಣ ಸಂಸ್ಕಾರ ಲಭಿಸುತ್ತಿದ್ದು, ಬಡತನ ನಿರ್ಮೂಲನೆಯಾಗಿ ಸದೃಢ ಸಮಾಜ ನಿರ್ಮಾಣವಾಗುತ್ತಿದೆ. ನಾಡಿನ ಬೆನ್ನೆಲುಬಾದ ರೈತನಿಗೆ ಸಮೃದ್ಧಿಯಾದ ಜೀವನ ಭಗವಂತ ಕರುಣಿಸಲಿ ಎಂದರು.ಮಠದ ಅಭಿವೃದ್ಧಿಗೆ ಭಕ್ತರು ಸೇರಿ ಒಗ್ಗಟ್ಟಿನಿಂದ ದುಡಿಯೋಣ ಎಂದು ಕರೆ ನೀಡಿದರು.
ಈ ವೇಳೆ ಅಂಬಿಗರ ಚೌಡಯ್ಯನವರ ಪೀಠಾಧ್ಯಕ್ಷ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ, ವಿಪ ಸದಸ್ಯ ಎನ್.ರವಿಕುಮಾರ, ಮಾಜಿ ಸಚಿವ ಪ್ರಮೋದ ಮಧ್ವರಾಜ, ಶಾಸಕ ಕೃಷ್ಣ ನಾಯ್ಕ, ಮಾಜಿ ಶಾಸಕ ಅರುಣಕುಮಾರ ಪೂಜಾರ ಇತರರು ಇದ್ದರು.