ಸಾರಾಂಶ
ಕನ್ನಡಪ್ರಭ ವಾರ್ತೆ ಕೆಜಿಎಫ್ನಗರಾಭಿವೃದ್ದಿ ಇಲಾಖೆಯ ಸಚಿವ ಬೈರತಿ ಸುರೇಶ್ ಕೆಜಿಎಫ್‌ನ ಬೆಮೆಲ್ ನಗರದ ೨೯೪ ಎಕರೆ ಜಾಗದಲ್ಲಿ ಉದ್ದೇಶಿತ ಇಂಟಿಗ್ರೇಟೆಡ್ ಟೌನ್‌ಶಿಪ್ ನಿರ್ಮಾಣದ ಭೂಮಿಯನ್ನು ಗುರುವಾರ ಪರಿಶೀಲಿಸಿದರು.ಚೆನ್ನೈ ಎಕ್ಸಪ್ರೆಸ್ ಹೈವೇ ಪಕ್ಕದ ೨೯೪ ಎಕರೆ ಇಂಟಿಗ್ರೇಟೆಡ್ ಟೌನ್ ಶಿಪ್‌ಗೆ ಎಕ್ಸ್‌ಪ್ರೆಸ್ ಹೈವೆಯಿಂದ ನೇರವಾಗಿ ೩೦ ಅಡಿ ರಸ್ತೆ ನಿರ್ಮಿಸಲು ಸಮಗ್ರ ನೀಲಿ ನಕ್ಷೆ ತಯಾರಿಸುವಂತೆ ತಹಸೀಲ್ದಾರ್ ನಾಗವೇಣಿ ಅವರಿಗೆ ಸೂಚನೆ ನೀಡಿದರು. ಇದಕ್ಕಾಗಿ ಅಗತ್ಯವಿರುವ ೧೧ ಎಕರೆ ಸರಕಾರಿ ಗೋಮಳದ ಭೂಮಿ ಬಳಸಿಕೊಳ್ಳುವಂತೆ ಸಚಿವರು ತಿಳಿಸಿದರು.
ಟೌನ್‌ಷಿಪ್‌ಗೆ ಅನುದಾನ೨೯೪ ಎಕರೆ ಪ್ರದೇಶದಲ್ಲಿ ತಲೆ ಎತ್ತಲಿರುವ ಬೃಹತ್ ಇಂಟಿಗ್ರೇಟೆಡ್ ಟೌನ್‌ಶಿಪ್ ೨೯೪ ಎಕರೆ ಜಾಗದಲ್ಲಿ ಮರಗಿಡಗಳ ತೆರವು, ರಸ್ತೆ, ನಿರ್ಮಾಣ, ವಾಣಿಜ್ಯ ಕಟ್ಟಡದ ನಿವೇಶನಗಳ ವಿಂಗಡಣೆ ಹಾಗೂ ಇನ್ನಿತರ ಕಾಮಗಾರಿಗಳಿಗೆ ನಗರಾಭಿವೃದ್ದಿ ಇಲಾಖೆಯಿಂದ ಅಗತ್ಯವಿರುವ ಅನುದಾನ ಬಿಡುಗಡೆಗೊಳಿಸಿ ಟೌನ್‌ಶಿಪ್ ನಿರ್ಮಾಣ ಮಾಡಲಾಗುವುದೆಂದು ತಿಳಿಸಿದರು.ಈ ಯೋಜನೆಯಲ್ಲಿ ಜನತೆಗೆ ಉತ್ತಮ ಮೂಲಸೌಲಭ್ಯ, ಆರಾಮದಾಯಕ ವಾಸಸ್ಥಳ ಮತ್ತು ಸಮಗ್ರ ಅಭಿವೃದ್ದಿ ಯೋಜನೆಗಳನ್ನು ಒದಗಿಸಲು ಉದ್ದೇಶಿಸಲಾಗಿದ್ದು, ಈ ಟೌನ್‌ಶಿಪ್ ಅತ್ಯಾಧುನಿಕ ಮೂಲಸೌಲಭ್ಯಗಳೊಂದಿಗೆ ವಾಣಿಜ್ಯ ಕೇಂದ್ರಗಳು, ಶಿಕ್ಷಣ ಮತ್ತು ಆರೋಗ್ಯ ಸೇವೆಗಳು, ಉದ್ಯಾನಗಳು ಮತ್ತು ಪರಿಸರ ಸ್ನೇಹಿ ವಸತಿ ಸೌಲಭ್ಯಗಳನ್ನು ಒಳಗೊಂಡಿರುತ್ತದೆ.ಹೊಸ ಉದ್ಯೋಗ ಸೃಷ್ಟಿ:ಸಮಗ್ರ ಟೌನ್ ಶಿಫ್ ಯೋಜನೆಯಲ್ಲಿ ಹೊಸ ಉದ್ಯೋಗಾವಕಾಶ ಸೃಷ್ಟಿಸಲಿದೆ. ಯೋಜನೆಯು ಕೆಜಿಎಫ್- ಬಂಗಾರಪೇಟೆ ಎರಡು ತಾಲೂಕುಗಳ ಸಮಗ್ರ ಅಭಿವೃದ್ದಿಗೆ ಸಹಾಯಕವಾಗುವ ನೀರಿಕ್ಷೆಯಿದ್ದು, ಇದು ನಗರ-ಗ್ರಾಮೀಣ ಪ್ರದೇಶಗಳ ನಡುವೆ ಸಂಪರ್ಕ ಒದಗಿಸುತ್ತದೆ ಎಂದು ಸಚಿವರು ತಿಳಿಸಿದರು.ಕೆಜಿಎಫ್ ಎಸ್‌ಪಿ ಶಾಂತರಾಜು, ತಹಸೀಲ್ದಾರ್ ನಾಗವೇಣಿ, ಪೌರಾಯುಕ್ತ ಪವನ್‌ಕುಮಾರ್, ಡಿವೈಎಸ್ಪಿ ಪಾಂಡುರಂಗ ಇದ್ದರು.