ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ
ಪ್ರಧಾನಮಂತ್ರಿ ನರೇಂದ್ರ ಮೋದಿ ಹೆಸರು ಹೇಳಿ ಮತ ಕೇಳುವ ನಿಮಗೆ ನಿಮ್ಮ ಅಭಿವೃದ್ಧಿ ಬಗ್ಗೆ ಹೇಳುವ ನೈತಿಕತೆ ಇಲ್ಲವೆ? ಅಚ್ಚೇ ದಿನ ಎಲ್ಲಿದೆ ಸುಳ್ಳಿನ ಸಾಮ್ರಾಜ್ಯ ಕಟ್ಟಿ ರಾಜಕಾರಣ ಮಾಡುತ್ತಿರುವ ಬಿಜೆಪಿಗರಿಂದ ದೇಶದಲ್ಲಿ ಒಂದು ರೀತಿಯ ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ ಎನ್ನುವಂತಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಕಿಡಿಕಾರಿದರು.ಗುರುವಾರ ತಾಲೂಕಿನ ಅಗರಖೇಡ ಗ್ರಾಮದಲ್ಲಿ 2024ರ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದರು. ವಿಜಯಪುರ ಜಿಲ್ಲೆಯ ಸಂಸದ ರಮೇಶ ಜಿಗಜಿಣಗಿ ಮಾಡಬೇಕಾದ ಕೆಲಸ ಸಾಕಷ್ಟು ಇದ್ದರೂ, ಜಿಲ್ಲೆಯಲ್ಲಿ ಯಾವುದೇ ಕೆಲಸ ಮಾಡಿಲ್ಲ. ಅವರ ಸಾಧನೆ ಮಾತ್ರ ಶೂನ್ಯ. ಇಂಡಿ ಮತಕ್ಷೇತ್ರದ ಜನತೆ ಹೃದಯವಂತರು ನನಗೆ ಯಾವ ರೀತಿ ಮತ ಹಾಕಿ ಆಶೀರ್ವಾದ ಮಾಡಿದ್ದಿರಿ. ಅದೇ ರೀತಿ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಇವರಿಗೂ ಹೆಚ್ಚಿನ ಮತಗಳು ನೀಡಿ ಗೆಲ್ಲಿಸಬೇಕು. ಲೋಕಸಭಾ ಚುನಾವಣೆ ಬಂದರೆ ನನಗೆ ಒಂದು ರೀತಿಯ ಮುಜುಗರ ಆಗುತ್ತದೆ. ಇದನ್ನು ಅಳಿಸಬೇಕಾದರೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ರಾಜು ಆಲಗೂರ ಇವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಅಭ್ಯರ್ಥಿ ರಾಜು ಆಲಗೂರ ಮಾತನಾಡಿ, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ನನಗೆ ಅಶೀರ್ವಾದ ಮಾಡಿ ಗೆಲ್ಲಿಸಿದರೆ, ನಿಮ್ಮ ಮನೆಯ ಮಗನಾಗಿ ನಿಮ್ಮ ಕಷ್ಟ ಸುಖದಲ್ಲಿ ಪಾಲುದಾರನಾಗಿ ಸೇವೆ ಮಾಡುತ್ತೇನೆ ಎಂದು ಮನವಿ ಮಾಡಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವೀದ ಮೋಮಿನ, ಇಲಿಯಾಸ ಬೊರಾಮಣಿ, ಕಲ್ಲನಗೌಡ ಬಿರಾದಾರ, ಎಂ.ಅರ್ ಪಾಟೀಲ, ಅಣ್ಣಪ್ಪ ಬಿದರಕೋಟ, ವಿಠ್ಠಲಗೌಡ ಪಾಟೀಲ, ಭೀಮಣ್ಣಾ ಕೌಲಗಿ, ಜೆಟ್ಟೆಪ್ಪ ರವಳಿ,ಪ್ರಶಾಂತ ಕಾಳೆ,ಗುರುನಾಥ ಹಾವಳಗಿ, ಬಾಬುಸಾಹುಕಾರ ಅಂದೇವಾಡಿ, ಸುಖದೇವ ಮೇಲಿನಕೇರಿ, ಅಶೋಕ ಖಂಡೇಕರ್, ಹುಚ್ಚಪ್ಪ ತಳವಾರ ಮೊದಲಾದವರು ಈ ಸಭೆಯಲ್ಲಿ ಇದ್ದರು.