ಸಾರಾಂಶ
ಮೂಡಲಗಿ: ತಾಲೂಕಿನ ಕಲ್ಲೋಳಿ ಪಟ್ಟಣದ ಹೊರವಲಯದ ಮೂಡಲಗಿ ರಸ್ತೆಗೆ ಹೊಂದಿಕೊಂಡಿರುವ ಸಂಗಟಿ ಎಂಬುವವರ ಕಬ್ಬಿನ ಗದ್ದೆಯೊಳಗೆ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಶವ ಗುರುವಾರದಂದು ಪತ್ತೆಯಾಗಿದೆ. ಸುಮಾರು ಐದಾರು ದಿನಗಳ ಹಿಂದೆ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸಂಗಟಿಯವ ತೋಟದಲ್ಲಿ ಕೆಲಸ ಮಾಡುವ ವ್ಯಕ್ತಿಯು ಗುರುವಾರ ಮುಂಜಾನೆ ಗದ್ದೆ ಕಡೆಗೆ ಹೋದಾಗ ಕೊಳೆತ ಸ್ಥಿತಿಯಲ್ಲಿ ಶವ ಕಂಡು ಜಮೀನದ ಮಾಲೀಕರಿಗೆ ತಿಳಿಸಿದ್ದಾನೆ. ಕೂಡಲೇ ಜಮೀನು ಮಾಲೀಕ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.
ಮೂಡಲಗಿ: ತಾಲೂಕಿನ ಕಲ್ಲೋಳಿ ಪಟ್ಟಣದ ಹೊರವಲಯದ ಮೂಡಲಗಿ ರಸ್ತೆಗೆ ಹೊಂದಿಕೊಂಡಿರುವ ಸಂಗಟಿ ಎಂಬುವವರ ಕಬ್ಬಿನ ಗದ್ದೆಯೊಳಗೆ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಶವ ಗುರುವಾರದಂದು ಪತ್ತೆಯಾಗಿದೆ.
ಸುಮಾರು ಐದಾರು ದಿನಗಳ ಹಿಂದೆ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸಂಗಟಿಯವ ತೋಟದಲ್ಲಿ ಕೆಲಸ ಮಾಡುವ ವ್ಯಕ್ತಿಯು ಗುರುವಾರ ಮುಂಜಾನೆ ಗದ್ದೆ ಕಡೆಗೆ ಹೋದಾಗ ಕೊಳೆತ ಸ್ಥಿತಿಯಲ್ಲಿ ಶವ ಕಂಡು ಜಮೀನದ ಮಾಲೀಕರಿಗೆ ತಿಳಿಸಿದ್ದಾನೆ. ಕೂಡಲೇ ಜಮೀನು ಮಾಲೀಕ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.ಘಟಪ್ರಭಾ ಸಿಪಿಐ ಎಚ್ ಡಿ ಮುಲ್ಲಾ, ಪಿಎಸ್‍ಐ ಎಸ್ ಆರ್ ಕಣವಿ, ಎಎಸ್‍ಐ ಎಸ್. ಯು. ಕಿಲಾರಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತಪಟ್ಟ ವ್ಯಕ್ತಿ ಯಾರು? ಹಾಗೂ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಶವವನ್ನು ಬೆಳಗಾವಿ ಜಿಲ್ಲಾ ಶಸ್ಪತ್ರೆಗೆ ಮರಣೋತ್ರ ಪರೀಕ್ಷೆಗೆ ಕಳುಹಿಸಲಾಗಿದೆ.
ಶವದ ಸುತ್ತ ಅನುಮಾನದ ಹುತ್ತ : ಕಬ್ಬಿನ ಗದ್ದೆಯೊಳಗೆ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಶವದ ಹತ್ತಿರ ಶ್ರೀಧಂಗದ ಕಟ್ಟಿಗೆ ತುಂಡುಗಳು ಮತ್ತು ಗರಗಸ ಪತ್ತೆಯಾಗಿದ್ದರಿಂದ ಆ ವ್ಯಕ್ತಿಯ ಸಾವಿನ ಹಿಂದೆ ಅನುಮಾನಗಳು ಹುಟ್ಟಿಕೊಂಡಿವೆ. ಆ ಶ್ರೀಧಂಗದ ಕಟ್ಟಿಗೆ ತುಂಡುಗಳನ್ನು ಮತ್ತು ಗರಗಸವನ್ನು ಪೊಲೀಸ್ ಅಧಿಕಾರಿಗಳು ವಶಪಡಿಸಿಕೊಂಡಿರುವ ಬಗ್ಗೆ ತಿಳಿದು ಬಂದಿದೆ.