ನಾಡು, ನುಡಿ, ಕನ್ನಡ ಚಳವಳಿಗೆ ಅನಕೃ ಪ್ರೇರಕ ಶಕ್ತಿ: ಮಾಳವಾಡ

| Published : May 13 2024, 01:05 AM IST

ನಾಡು, ನುಡಿ, ಕನ್ನಡ ಚಳವಳಿಗೆ ಅನಕೃ ಪ್ರೇರಕ ಶಕ್ತಿ: ಮಾಳವಾಡ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡದ ಕಟ್ಟಾಳು ಅಪ್ರತಿಮ ಹೋರಾಟಗಾರರಾಗಿದ್ದ ಅನಕೃ ಅವರು ನಾಡು, ನುಡಿ, ಚಳವಳಿಗೆ ಪ್ರೇರಕ ಶಕ್ತಿಯಾಗಿದ್ದರು ಎಂದು ನಿವೃತ್ತ ಗ್ರಂಥಪಾಲಕ ಬಿ.ಎಸ್. ಮಾಳವಾಡ ಹೇಳಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಕನ್ನಡದ ಕಟ್ಟಾಳು ಅಪ್ರತಿಮ ಹೋರಾಟಗಾರರಾಗಿದ್ದ ಅನಕೃ ಅವರು ನಾಡು, ನುಡಿ, ಚಳವಳಿಗೆ ಪ್ರೇರಕ ಶಕ್ತಿಯಾಗಿದ್ದರು ಎಂದು ನಿವೃತ್ತ ಗ್ರಂಥಪಾಲಕ ಬಿ.ಎಸ್. ಮಾಳವಾಡ ಹೇಳಿದರು.

ನಗರದ ವೀರ ಪುಲಿಕೇಶಿ ಕನ್ನಡ ಬಳಗದಿಂದ ಇಲ್ಲಿನ ವೆಂಕಟೇಶ್ವರ ನಗರದ ಸರ್ವಜ್ಞ ಭವನದಲ್ಲಿ ಕಾದಂಬರಿ ಸಾರ್ವಭೌಮ ಅನಕೃ ಅವರ 116ನೇ ಜನ್ಮದಿನ ಹಾಗೂ ಬಸವಣ್ಣನವರ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕನ್ನಡವು ಬದುಕಿನ ಭಾಷೆಯಾಗಬೇಕು, ಕನ್ನಡದಿಂದಲೇ ನಾವೆಲ್ಲರು ಎಂಬ ಭಾವ ನಮ್ಮದಾದಾಗ ಮಾತ್ರ ಕನ್ನಡವು ನಾಡಿನ ಸಾರ್ವಭೌಮ ಭಾಷೆಯಾಗಿ ಉಳಿಯುತ್ತದೆ. ನಮ್ಮ ಭಾಷೆಯ ಬಗ್ಗೆ ಪ್ರತಿಯೊಬ್ಬರೂ ಅಭಿಮಾನವಿಟ್ಟುಕೊಂಡು ಅದನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು ಎಂದು ಅನಕೃ ಹೇಳುತ್ತಿದ್ದರು. ಕನ್ನಡದ ಬಗ್ಗೆ ನಾವೆಲ್ಲರೂ ಅಭಿಮಾನವಿಟ್ಟುಕೊಂಡು ಅದನ್ನು ಉಳಿಸಿ ಬೆಳೆಸುವ ಕೆಲಸ ಮಾಡೋಣ ಎಂದರು.

ಬಸವಣ್ಣನವರು ಕಾಯಕ ದಾಸೋಹಕ್ಕೆ ಹೊಸ ಸ್ವರೂಪ ನೀಡಿ ಶಿವಯೋಗದ ಮೂಲಕ ಪ್ರತಿಯೊಬ್ಬರಲ್ಲಿ ಜಾಗೃತಿ ಮೂಡಿಸಿದ್ದಾರೆ. ಅವರ ಸಾಮಾಜಿಕ, ಧಾರ್ಮಿಕ, ಅಧ್ಯಾತ್ಮಿಕ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಅವರ ಜೀವನ ಮತ್ತು ಆದರ್ಶಗಳು ದಾರಿ ದೀಪವಾಗಿವೆ ಎಂದರು.

ಅತಿಥಿಗಳಾಗಿ ಆಗಮಿಸಿದ್ದ ಜಗನ್ನಾಥ ಅಗಸಿಮನಿ, ರವೀಂದ್ರ ಹೊಂಬಳ ಮಾತನಾಡಿದರು. ಈ ಸಂದರ್ಭದಲ್ಲಿ ಎಂ. ಮಯೂರ, ಆರ್. ವಿಭಾ, ವಿರಾಟ್, ಗೀತಾ ಮರೇಗುದ್ದಿ, ನಾಗರಾಜ ಪತ್ತಾರ, ವಾಣಿ ಸುರೇಶ ಸೇರಿದಂತೆ ಹಲವರಿದ್ದರು.