ಸಾರಾಂಶ
ಸಂಘದ ಏಳಿಗೆಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಸಂಘಕ್ಕೆ ಸಂಬಂಧಪಟ್ಟ ಐದು ಗ್ರಾಮಗಳ ರೈತರ ಉನ್ನತ್ತಿಗೆ, ಬಿತ್ತನೆ ಬೀಜ, ರಸಗೊಬ್ಬರ, ಅನ್ನಭಾಗ್ಯ ಯೋಜನೆಯಡಿ ಅಕ್ಕಿ ವಿತರಣೆ, ಸಾಲಸೌಲಭ್ಯ ಸೇರಿದಂತೆ ವಿಶೇಷ ಅನುದಾನವನ್ನು ತಂದು ರೈತರ ಸರ್ವೊತ್ತೊಮುಖ ಅಭಿವೃದ್ಧಿಗೆ ಒತ್ತು.
ಕನ್ನಡಪ್ರಭ ವಾರ್ತೆ ಮಳವಳ್ಳಿ
ತಾಲೂಕಿನ ದುಗ್ಗನಹಳ್ಳಿ ವಿವಿದ್ದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಆನಂದ್ ಹಾಗೂ ಉಪಾಧ್ಯಕ್ಷರಾಗಿ ಸ್ವಾಮಿ ಅವಿರೋಧವಾಗಿ ಆಯ್ಕೆಯಾದರು.ಸಂಘದ ಸಭಾಂಗಣದಲ್ಲಿ ಐದು ವರ್ಷದ ಆಡಳಿತ ಮಂಡಳಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ತಲಾ ಒಂದೊಂದು ನಾಮಪತ್ರ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆಯಾಗಿರುವ ಬಗ್ಗೆ ಚುನಾವಣಾಧಿಕಾರಿ ಸಂತೋಷ್ ಘೋಷಣೆ ಮಾಡಿದರು.
ನೂತನ ಅಧ್ಯಕ್ಷ ಡಿ.ಎಸ್ ಆನಂದ್ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲು ಸಹಕಾರ ನೀಡಿದ ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಸರ್ವ ಸದಸ್ಯರು, ನಿರ್ದೇಶಕರು ಹಾಗೂ ಕಾಂಗ್ರೆಸ್ ಮುಖಂಡರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.ಸಂಘದ ಏಳಿಗೆಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಸಂಘಕ್ಕೆ ಸಂಬಂಧಪಟ್ಟ ಐದು ಗ್ರಾಮಗಳ ರೈತರ ಉನ್ನತ್ತಿಗೆ, ಬಿತ್ತನೆ ಬೀಜ, ರಸಗೊಬ್ಬರ, ಅನ್ನಭಾಗ್ಯ ಯೋಜನೆಯಡಿ ಅಕ್ಕಿ ವಿತರಣೆ, ಸಾಲಸೌಲಭ್ಯ ಸೇರಿದಂತೆ ವಿಶೇಷ ಅನುದಾನವನ್ನು ತಂದು ರೈತರ ಸರ್ವೊತ್ತೊಮುಖ ಅಭಿವೃದ್ಧಿಗೆ ಮುಂದಾಗುವುದಾಗಿ ಹೇಳಿದರು.
ಕಾಂಗ್ರೆಸ್ ಮುಖಂಡ ಮುತ್ತುರಾಜ್ ಮಾತನಾಡಿ, ಸಂಘವನ್ನು ಉತ್ತಮ ರೀತಿಯಲ್ಲಿ ಅಭಿವೃದ್ದಿಪಡಿಸುತ್ತಾರೆಂಬ ಆಕಾಂಕ್ಷೆಯೊಂದಿಗೆ 9 ಜನ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರನ್ನು ಆಯ್ಕೆ ಮಾಡಿರುವ ಸದಸ್ಯರ ನಂಬಿಕೆಗೆ ಚ್ಯುತಿ ಬಾರದಂತೆ ಅಧ್ಯಕ್ಷ ಉಪಾಧ್ಯಕ್ಷ ಉತ್ತಮವಾಗಿ ಸೇವೆ ಸಲ್ಲಿಸಲಿದ್ದಾರೆ ಎಂದರು.ನಿಕಟ ಪೂರ್ವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜೆ.ದೇವರಾಜ್ ಮಾತನಾಡಿ, ಸಂಘದ ಸದಸ್ಯರು ಅಭಿವೃದ್ಧಿ ಪಡಿಸುವ ಭರವಸೆಯೊಂದಿಗೆ ಚುನಾವಣೆ ಗೆಲುವಿಗೆ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಈ ವೇಳೆ ನಿರ್ದೇಶಕರಾದ ಡಿ.ಎಸ್.ನಂದೀಶ್, ಬಸವರಾಜು, ಡಿ.ಕೆ.ಬೋರೇಗೌಡ, ವೆಂಕಟೇಗೌಡ, ಕೆ.ಪಿ.ಜೈಶೀಲಾ, ಎಚ್.ಎಂ.ಸ್ವಾಮಿ, ಜಿ.ಕೃಷ್ಣ, ಗ್ರಾಪಂ ಅಧ್ಯಕ್ಷ ಗೋವಿಂದ ರಾಜು, ಮುಖಂಡರಾದ ಆನಂದ್ ಮಂಜು, ಗುರುಸ್ವಾಮಿ, ರುದ್ರಪ್ಪ, ರವಿಶೆಟ್ಟಿ ಬೀರಪ್ಪ, ನಂದೀಶ್, ಮಹೇಶ್, ಪ್ರಸನ್ನ, ಪ್ರಕಾಶ್, ಶ್ರೀನಿವಾಸ್, ಶಾಂತರಾಜು, ಚಿನ್ನಸ್ವಾಮಿ, ಸತೀಶ್, ಶಂಕರ್, ರವಿಶೆಟ್ಟಿ, ಗುರುಸ್ವಾಮಿ, ವೀರೇಗೌಡ, ನಂಜುಂಡ, ನವೀನ್, ಮಂಜು,ಪುಟ್ಟಣ್ಣ, ನಂದೀಶ್, ನಾಗೇಂದ್ರ, ಯೋಗನಂದ, ತ್ಯಾಗರಾಜು, ವೆಂಕಟರಾಜು ಸೇರಿದಂತೆ ಇತರರು ಇದ್ದರು.