ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 2 ಸರಗಳ್ಳತನ ಪ್ರಕರಣಗಳು, ಕೆಂಚಾರಹಳ್ಳಿ ವೃತ್ತದಲ್ಲಿ 1 ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ವಿಚಾರಣೆಯಿಂದ ತಿಳಿದುಬಂದಿದೆ.

ಕನ್ನಡಪ್ರಭ ವಾರ್ತೆ ಚಿಂತಾಮಣಿ

ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಅವರ ಬಳಿ ಇರುವ ಬೆಲೆಬಾಳುವ ಬಂಗಾರದ ತಾಳಿಬೊಟ್ಟು, ಕಿವಿ ಓಲೆಗಳನ್ನು ಕಿತ್ತುಕೊಂಡು ಹೋಗಿ ತಾಲೂಕಿನಲ್ಲಿ ಕುಖ್ಯಾತಿ ಪಡೆದಿದ್ದ ಪ್ರಕರಣದ ಆರೋಪಿ ಕೆ.ಎನ್.ಚಂದ್ರ ಎಂಬಾತನನ್ನು ಮಾಲು ಸಮೇತ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಕರಣಗಳ ಮಾಹಿತಿಗಳನ್ನು ಪಡೆದು ವೈಜ್ಞಾನಿಕವಾಗಿ ತನಿಖೆಯನ್ನು ಕೈಗೊಂಡು ತಾಲೂಕಿನ ಕದಿರಾಪುರ ಗ್ರಾಮದ ಕೆ.ಎನ್.ಚಂದ್ರ (26 )ವರ್ಷ ಆರೋಪಿಯನ್ನು ಮಾಲು ಸಮೇತ ವಶಕ್ಕೆ ಪಡೆದು ಆರೋಪಿಯಿಂದ ಒಟ್ಟು 6,16,640 ರು.ಗಳ ಬೆಲೆಬಾಳುವ ಬಂಗಾರದ ಒಡವೆಗಳನ್ನು ಮತ್ತು 1 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 2 ಸರಗಳ್ಳತನ ಪ್ರಕರಣಗಳು, ಕೆಂಚಾರಹಳ್ಳಿ ವೃತ್ತದಲ್ಲಿ 1 ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ವಿಚಾರಣೆಯಿಂದ ತಿಳಿದುಬಂದಿದೆ.

ಒಟ್ಟು ಮೂರು ಸರಗಳ್ಳತನ ಪ್ರಕರಣಗಳನ್ನು ಪತ್ತೆ ಮಾಡುವಲ್ಲಿ ಯಶ್ವಸಿಯಾದ ತಂಡಗಳ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಪೊಲೀಸ್ ಅಧೀಕ್ಷಕ ಕುಶಾಲ್‌ಚೌಕ್ಸೆ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಗನ್ನಾಥ್ ರೈ ತಂಡಕ್ಕೆ ಪ್ರಶಂಸೆಯನ್ನು ತಿಳಿಸಿದ್ದಾರೆ.