ಸಾರಾಂಶ
ಕೊಪ್ಪಳ: ಆನೆಗೊಂದಿ ಉತ್ಸವ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದೊಂದಿಗೆ ಆನೆಗೊಂದಿಯಲ್ಲಿ ಜರುಗಿದ ಮ್ಯಾರಥಾನ್ ಓಟಕ್ಕೆ ಆನೆಗೊಂದಿಯ ಕಡೆಬಾಗಿಲು ಹತ್ತಿರ ಜಿಲ್ಲಾಧಿಕಾರಿ ನಲಿನ್ ಅತುಲ್ ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು.ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆ, ಎಸ್ಪಿ ಯಶೋದಾ ವಂಟಿಗೋಡಿ, ಎಸಿ ಕ್ಯಾ.ಮಹೇಶ ಮಾಲಗಿತ್ತಿ, ಉತ್ಸವದ ಕ್ರೀಡಾ ಸಮಿತಿ ಅಧ್ಯಕ್ಷರೂ ಆದ ಯುವ ಸಬಲೀಕರಣ-ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ್ ಜಾಬಗೌಡ್ರ, ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಇತರರಿದ್ದರು.ಮ್ಯಾರಥಾನ್ ಓಟದ ವಿಜೇತರು:ಆನೆಗೊಂದಿಯ ಕಡೆಬಾಗಿಲುದಿಂದ ಆರಂಭಗೊಂಡ ಮ್ಯಾರಥಾನ್ ಅಂಜನಾದ್ರಿ ಬೆಟ್ಟದ ದಾರಿ, ಪಂಪಾ ಸರೋವರವರೆಗೆ ಜರುಗಿತು. ವಿಜೇತರಿಗೆ ಪ್ರಥಮ ಬಹುಮಾನ ₹12,000, ದ್ವಿತೀಯ ₹10,000, ತೃತೀಯ ₹8000, ಚತುರ್ಥ ₹6000 ಮತ್ತು ಪಂಚಮಿ ₹4000 ಆಗಿದೆ. ಓಟದಲ್ಲಿ ಪುರುಷರ ವಿಭಾಗದಲ್ಲಿ ಧಾರವಾಡದ ಸಚಿನ್ ಪ್ರಥಮ ಸ್ಥಾನ ಪಡೆದರು. ಧಾರವಾಡದ ಮಣಿಕಂಠ ದ್ವಿತೀಯ, ಅಥಣಿಯ ರಾಜು ನಾಯಕ್ ತೃತೀಯ, ಹೊಸಪೇಟೆಯ ಮಂಜುನಾಥ ನಾಲ್ಕನೇ ಸ್ಥಾನ ಪಡೆದರೆ, ಗಂಗಾವತಿಯ ಮಹಮದ್ ಸಮೀರ್ ಐದನೇ ಸ್ಥಾನ ಪಡೆದುಕೊಂಡರು.ಮಹಿಳಾ ವಿಭಾಗ:ಹಿರೇಬೆಣಕಲ್-1ರ ಆಫಿಯಾ ಪ್ರಥಮ ಸ್ಥಾನ ಪಡೆದರು. ಹಿರೇಬೆಣಕಲ್-1ರ ಹಿನಾಕೌಸರ್ ದ್ವಿತೀಯ, ಧಾರವಾಡದ ವಿಜಯಲಕ್ಷ್ಮಿ ತೃತೀಯ, ಕೊಪ್ಪಳದ ಸುನೀತಾ ನಾಲ್ಕನೇ ಸ್ಥಾನ ಪಡೆದರೆ ಕೊಪ್ಪಳದ ಸಿಂಧು ಐದನೇ ಸ್ಥಾನ ಪಡೆದುಕೊಳ್ಳುವುದರ ಮೂಲಕ ಆನೆಗೊಂದಿ ಉತ್ಸವ ಮ್ಯಾರಥಾನ್ ವಿಜೇತರಾಗಿ ಬಹುಮಾನಕ್ಕೆ ಅರ್ಹರಾದರು.
;Resize=(128,128))
;Resize=(128,128))
;Resize=(128,128))
;Resize=(128,128))