ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ದೈಹಿಕವಾಗಿ ಅಶಕ್ತರಾಗಿರುವ 54 ಫಲಾನುಭವಿಗಳಿಗೆ 5.50 ಲಕ್ಷ ರು. ಮೊತ್ತದ ವೈದ್ಯಕೀಯ ನೆರವು ವಿತರಿಸಲಾಯಿತು.

ಕುಂದಾಪುರ: ಇಲ್ಲಿನ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ದೈಹಿಕವಾಗಿ ಅಶಕ್ತರಾಗಿರುವ 54 ಫಲಾನುಭವಿಗಳಿಗೆ 2025-2026 ನೇ ಸಾಲಿನ ಸುಮಾರು 5.50 ಲಕ್ಷ ರು. ಮೊತ್ತದ ವೈದ್ಯಕೀಯ ನೆರವುವನ್ನು ಸೋಮವಾರ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಆಡಳಿತ ಧರ್ಮದರ್ಶಿ ಕೆ. ಶ್ರೀರಮಣ ಉಪಾಧ್ಯಾಯ ಅವರು ಮಾತನಾಡಿ, ಕಳೆದ ಮೂರು ದಶಕಗಳಿಂದಲೂ ಶ್ರೀದೇವಳವು ಸಮಾಜಮುಖಿಯಾಗಿ ತೆರೆದುಕೊಂಡಿದ್ದು, ಪ್ರತಿವರ್ಷವೂ ದೈಹಿಕ ಆಶಕ್ತರಿಗೆ, ದೇವಸ್ಥಾನಗಳ ಜೀರ್ಣೋದ್ಧಾರ ಹಾಗೂ ವಿವಿಧ ಶಾಲೆಗಳು, ಸಂಘ ಸಂಸ್ಥೆಗಳಿಗೆ ಯತಾಶಕ್ತಿ ನೆರವನ್ನು ನೀಡುತ್ತಾ ಬಂದಿರುತ್ತದೆ. ದೇವರ ಪ್ರಸಾದ ರೂಪವಾಗಿ ಈ ವೈದ್ಯಕೀಯ ನೆರವನ್ನು ಪಡೆದ ಅಶಕ್ತ ಫಲಾನುಭವಿಗಳು ಶ್ರೀ ವಿನಾಯಕನ ಅನುಗ್ರಹದಿಂದ ಶೀಘ್ರವಾಗಿ ಚೇತರಿಸಿಕೊಂಡು ಎಲ್ಲರಿಗೂ ಆಯುರಾರೋಗ್ಯ ಆನಂದ ಐಶ್ವರ್ಯವನ್ನು ಕೊಟ್ಟು ಇಷ್ಟಾರ್ಥವನ್ನು ಅನುಗ್ರಹಿಸಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ನಿವೃತ್ತ ಆಡಳಿತ ಧರ್ಮದರ್ಶಿಗಳಾದ ಕೆ. ಸೂರ್ಯನಾರಾಯಣ ಉಪಾಧ್ಯಾಯ, ಪರ್ಯಾಯ ಅರ್ಚಕರಾದ ಕೆ. ವ್ಯಾಸ ಉಪಾಧ್ಯಾಯ ಹಾಗೂ ಸಹೋದರರು ಕಚೇರಿಯ ವ್ಯವಸ್ಥಾಪಕ ನಟೇಶ್ ಕಾರಂತ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.