ಒಂಬತ್ತು ಕಳಸಗಳಿಗೆ ಗಂಗೆಯನ್ನು ಶಾಸ್ತ್ರೋಕ್ತವಾಗಿ ತುಂಬಿ ದೇವಿಯ ಅವಾಹನೆ ಮಾಡಲಾಯಿತು. ಪೂರ್ಣಕುಂಭಗಳನ್ನು ಪುಷ್ಪ, ಹೊಂಬಾಳೆಯಿಂದ ಅಲಂಕರಿಸಲಾಯಿತು. ದೇವಿಗೆ ಪುಣ್ಯಸ್ನಾನ ಮಾಡಿಸಿ ವಿವಿಧ ಆಭರಣ, ವಸ್ತ್ರ, ಪುಷ್ಪಮಾಲೆಗಳಿಂದ ಶೃಂಗರಿಸಿದರು.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಪಟ್ಟಣದ ಆದಿಶಕ್ತಿ ಶ್ರೀಅಂಗಾಳಪರಮೇಶ್ವರಿ ದೇವಿಗೆ ವಾರ್ಷಿಕ ಪೂಜಾರಾಧನೆಗೆ ಗಂಗಾರತಿ ಮೂಲಕ ಶುಭ ಶುಕ್ರವಾರ ದೇವಿಯ ಉದ್ಘೋಷದೊಂದಿಗೆ ಚಾಲನೆ ದೊರೆಯಿತು.

ಅರ್ಚಕ ವಿಜಯ್ ಸಾರಥ್ಯದಲ್ಲಿ ದೇವಿಗೆ ವಿವಿಧ ಪೂಜಾ ಕೈಂಕರ್ಯಗಳು ಆರಂಭವಾಗಿ ಅಮಾನಿಕೆರೆಗೆ ದೇವಿ ಮೂರ್ತಿಯನ್ನು ಶ್ರದ್ಧಾಭಕ್ತಿಯಿಂದ ತೆಗೆದುಕೊಂಡು ಹೋಗಲಾಯಿತು. ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿ ಅಶ್ವಥಕಟ್ಟೆ ಬಳಿಯ ಸೋಪಾನಕಟ್ಟೆಯ ತಟದಲ್ಲಿದೇವಿಯ ಮೂರ್ತಿಯನ್ನು ಇರಿಸಲಾಯಿತು.

ಒಂಬತ್ತು ಕಳಸಗಳಿಗೆ ಗಂಗೆಯನ್ನು ಶಾಸ್ತ್ರೋಕ್ತವಾಗಿ ತುಂಬಿ ದೇವಿಯ ಅವಾಹನೆ ಮಾಡಲಾಯಿತು. ಪೂರ್ಣಕುಂಭಗಳನ್ನು ಪುಷ್ಪ, ಹೊಂಬಾಳೆಯಿಂದ ಅಲಂಕರಿಸಲಾಯಿತು. ದೇವಿಗೆ ಪುಣ್ಯಸ್ನಾನ ಮಾಡಿಸಿ ವಿವಿಧ ಆಭರಣ, ವಸ್ತ್ರ, ಪುಷ್ಪಮಾಲೆಗಳಿಂದ ಶೃಂಗರಿಸಿದರು.

ದೇವಿಯ ಮೂರ್ತಿಯನ್ನುಅರ್ಚಕ ವಿಜಯ್, ಸುಮಂಗಲಿಯರು ಪೂರ್ಣಕುಂಭವನ್ನು ಹೊತ್ತು ಮೂಲಗುಡಿಯವರೆಗೆ ಮೆರವಣಿಗೆಯಲ್ಲಿ ಸಾಗಿದರು. ಹೆಜ್ಜೆಯುದ್ದಕ್ಕೂಈಡುಗಾಯಿ ಅರ್ಪಿಸಿ ಜೈಕಾರ ಹಾಕಲಾಯಿತು. ಚಂಡೆ ವಾದ್ಯದೊಂದಿಗೆ ದೇವಿಯ ಮೆರವಣಿಗೆ ಸಾಗಿ ಅಂತಿಮವಾಗಿ ಗುಡಿಗೆ ಸಾಗಿತು.

ಕಂಕಣ ಕಟ್ಟಿಕೊಂಡ ಭಕ್ತರು ಉಪವಾಸವಿದ್ದು ದೇವಿಗೆ ಹರಕೆ ಒಪ್ಪಿಸಿದರು.ಚಂಡೆ ವಾದ್ಯ ಮೇಳದ ಜೊತೆಗೆ ಭಕ್ತರುದೇವಿಯ ನಾಮ ಪಠಿಸುತ್ತ ನರ್ತಿಸಿದರು.

ಅಷ್ಟೋತ್ತರ ಪಠಣೆ, ಸಹಸ್ರನಾಮಾವಳಿಯಂತಹ ಧಾರ್ಮಿಕ ಕಾರ್ಯಕ್ರಮಗಳು ಅರಂಭವಾಯಿತು.ರಾತ್ರಿ ನಡೆಯುವ ಪ್ರತ್ಯಾಂಗೀರಾ ಹೋಮಕ್ಕೆ ಭಕ್ತರು ಸಜ್ಜಾದರು.

ಶ್ರೀಚಿತ್ತಾಳಮ್ಮ ದೇವಿಗೆ ವಿಶೇಷ ಪೂಜೆ

ಕನ್ನಡಪ್ರಭ ವಾರ್ತೆ ಮಂಡ್ಯ

ಎಳ್ಳು ಅಮಾವಾಸ್ಯೆ ಪ್ರಯುಕ್ತ ತಾಲೂಕಿನ ಹೊಳಲು ಗ್ರಾಮದ ಚಿತ್ತಾಳಮ್ಮ ದೇವಿಗೆ ವಿಶೇಷ ಪೂಜಾ ಕಾರ್ಯಗಳನ್ನು ನಡೆಸಲಾಯಿತು.

ಬೆಳಗಿನಿಂದಲೇ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳನ್ನು ಕೈಗೊಂಡ ನಂತರ ದೇವಿಗೆ ವಿಶೇಷವಾಗಿ ಆಲಂಕಾರ ಮಾಡಲಾಯಿತು. ನಂತರ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.

ಎಳ್ಳು ಅಮಾವಾಸ್ಯೆ ಅಂಗವಾಗಿ ಸುತ್ತಮುತ್ತಲ ಗ್ರಾಮಸ್ಥರು ದೇವಳಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದು ಪುನೀತರಾದರು. ನಂತರ ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು.

ಮಾಜಿ ಶಾಸಕ ಎಚ್.ಬಿ.ರಾಮು, ದೇವಾಲಯ ಟ್ರಸ್ಟ್‌ನ ಗೌರವಾಧ್ಯಕ್ಷ ಎಚ್.ಎಲ್.ಶಿವಣ್ಣ, ಕಾರ್ಯದರ್ಶಿ ಶಿವಲಿಂಗಯ್ಯ, ಖಜಾಂಚಿ ಪಟೇಲ್ ರಾಮು, ಸದಸ್ಯರಾದ ಸದಾನಂದ, ಜಟ್ಟಿ ಕುಮಾರ್, ನಿಂಗೇಗೌಡ, ನಿಂಗರಾಜು, ಚಂದನ್, ಸಿ.ಕೆ. ನಾಗರಾಜು, ರವಿಕುಮಾರ್, ವ್ಯವಸ್ಥಾಪಕ ಶಿವರಾಮು, ಸಹಾಯಕ ಸುರೇಶ್, ಮುದ್ದೇಗೌಡ ಇತರರು ದೇವಾಲಯಕ್ಕೆ ಭೇಟಿ ನೀಡಿ ದೇವಿಯದರ್ಶನ ಪಡೆದರು.