ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಸಾಕಷ್ಟು ಅಂಗನವಾಡಿ ಕೇಂದ್ರಗಳು ಕನಿಷ್ಟ ಮೂಲಭೂತ ಸೌಕರ್ಯಗಳಿಲ್ಲದೆ ವಂಚಿತವಾಗಿವೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು,ಸಿಜೆಎಂ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಹೆಚ್.ಕೆ.ಉಮೇಶ್ ಅಸಮಾಧಾನ ವ್ಯಕ್ತಪಡಿಸಿದರು.ನಗರದ ನ್ಯಾಯಾಲಯಗಳ ಸಂಕೀರ್ಣದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮಧ್ಯಸ್ಥಿಕೆ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.ಅವ್ಯವಸ್ಥೆಗಳ ಆಗರ ಅಂಗನವಾಡಿತಾವು ಮತ್ತು ತಮ್ಮ ತಂಡ ಅಂಗನವಾಡಿಗಳಿಗೆ ಭೇಟಿ ನೀಡಿದಾಗ ಮಕ್ಕಳ ಹಾಜರಾತಿ ಇರಲಿಲ್ಲ. ಮಕ್ಕಳು ಇಲಾಖೆ ನೀಡುತ್ತಿರುವ ಮಿಲೆಟ್ ಉಂಡೆಗಳನ್ನು ಉಪ್ಪಿಟ್ಟನ್ನು ತಿನ್ನದೆ ಇರುವುದನ್ನು, ಗರ್ಭಿಣಿ ಸ್ತ್ರೀಯರು ಊಟ ಮಾಡಲು ಬರದೆ ಇರುವುದು, ಭೇಟಿ ನೀಡಿದ ಎಲ್ಲಾ ಕೇಂದ್ರದಲ್ಲಿ ತರಕಾರಿ, ಮೊಟ್ಟೆ ಶೇಖರಣೆ ಇಲ್ಲದಿರುವುದು, ಶಿಕ್ಷಕಿ ಅಥವಾ ಸಹಾಯಕಿ ಗೈರಾಗಿರುವುದು, ಶಿಕ್ಷಕಿ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿ ಕೇಂದ್ರದಲ್ಲಿ ಇಲ್ಲದಿರುವುದು, ಅಡುಗೆ ಸಹಾಯಕಿ ಮಕ್ಕಳಿಗೆ ಆಹಾರ ತಯಾರು ಮಾಡದೆ ಇರುವುದು, ಕೆಲ ಅಂಗನವಾಡಿಗಳಲ್ಲಿ ಯಾವುದೇ ಮಕ್ಕಳು ಶಾಲೆಗೆ ಬಾರದೆ ಇರುವುದು, ಮಕ್ಕಳ ಹಾಜರಾತಿ ನೋಂದಣಿ ಮಾಡದೆ ಇರುವುದು, ಸಮಯಕ್ಕೆ ಸರಿಯಾಗಿ ಬಾಗಿಲು ತೆಗೆಯದಿರುವುದು ಮತ್ತು ಸಮಯಕ್ಕಿಂತ ಮುಂಚೆ ಕೇಂದ್ರಗಳನ್ನು ಮುಚ್ಚುವುದು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಇರುವುದು ಕಂಡು ಬಂದವು ಎಂದರು.ನಗರದ ವಾಪಸಂದ್ರ ಸರ್ಕಾರಿ ಹಿರಿಯ ಪ್ರಾಥಮಿಕ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ, ಲೋಕಾಯುಕ್ತ ಕಚೇರಿ ಹಿಂಬದಿ ಇರುವ ಅಂಗನವಾಡಿ, ವಾರ್ಡ್ ನಂ.2,3,5,9 ಮತ್ತು 22 ರ ಅಂಗನವಾಡಿಗಳು, ತಾಲ್ಲೂಕಿನ ಮಂಚನಬಲೆ ಗ್ರಾಮದಲ್ಲಿರುವ ಮೂರು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದಾಗ ಕಂಡು ಬಂದ ಅಂಶಗಳೆಂದರೆ ಈ ಹಿಂದೆ ನೀಡುತ್ತಿದ್ದ ಆಹಾರ ಪದಾರ್ಥಗಳು, ತರಕಾರಿ ಸೌಲಭ್ಯಗಳು ಪ್ರಸ್ತುತ್ತ ನೀಡದೇ ಇರುವ ಕಾರಣ ಹೆಚ್ಚು ಮಂದಿ ಮಕ್ಕಳು ಬಾಣಂತಿಯರು, ಗರ್ಭಿಣಿಯರು ಅಂಗನವಾಡಿ ಕೇಂದ್ರಗಳಿಗೆ. ಭೇಟಿ ನೀಡುತ್ತಿಲ್ಲ ಎಂದರು.
ಶುದ್ಧ ಕುಡಿಯುವ ನೀರಿಲ್ಲಈ ಹಿಂದೆ ಮೊಳಕೆ ಕಾಳು ತರಕಾರಿ ಸಂಬಾರು ನೀಡುತ್ತಿದ್ದು, ಪ್ರಸ್ತುತ್ತ ಪ್ರತಿ ಮಗುವಿಗೆ ತರಕಾರಿಗಾಗಿ 2 ರು.ಗಳು ನೀಡುತ್ತಿದ್ದು, ತರಕಾರಿ ಖರೀದಿಸಲು ಆಗುತ್ತಿಲ್ಲ ಎಂದು ತಿಳಿದು ಬಂದಿದೆ. ಬಹಳಷ್ಟು ಕೇಂದ್ರಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇಲ್ಲದ ಕಾರಣ ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ಸರಬರಾಜು ಇಲ್ಲದಿರುವುದು ಕಂಡು ಬಂದಿದೆ. ಮಕ್ಕಳಿಗೆ ನಲಿ-ಕಲಿ ಯಡಿಯಲ್ಲಿ ಆಟೋಪಕರಣಗಳು ಇಲ್ಲದಿರುವುದು ಕಂಡು ಬಂದಿದೆ ಹಾಗೂ ಮೊಟ್ಟೆ ಸರಬರಾಜು ಇಲ್ಲದಿರುವುದು ಕಂಡು ಬಂತು, ಅಂಗನವಾಡಿ ಕೇಂದ್ರಗಳಲ್ಲಿ ಖರೀದಿಸುವ ವಸ್ತುಗಳ ರಸೀದಿ ಪುಸ್ತಕ ಬಳಕೆ ಇಲ್ಲದಿರುವುದು ಕಂಡು ಬಂದಿದೆ ಎಂದರು.
ಅಧಿಕಾರಿಗಳು ಭೇಟಿ ನೀಡಿಲ್ಲಬಹಳಷ್ಟು ಅಂಗನವಾಡಿ ಕೇಂದ್ರಗಳಲ್ಲಿ ಅಂಗನವಾಡಿ ಶಿಕ್ಷಕರು ಅಡುಗೆ ಸಹಾಯಕರನ್ನು ಕೇಂದ್ರಗಳಲ್ಲಿ ಬಿಟ್ಟು ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿ, ಹೊರಗಡೆ ಉಳಿದಿರುವುದು ಕಂಡು ಬಂದಿರುತ್ತದೆ. 2022 ನೇ ಸಾಲಿನಿಂದ ಜಿಲ್ಲಾ ಮಟ್ಟದ ಅಧಿಕಾರಿಗಳು ತಾಲ್ಲೂಕು ಮಟ್ಟದ ಅಧಿಕಾರಿಗಳು ಅಂಗನವಾಡಿ ಕೇಂದ್ರಗಳಿಗೆ ಪರಿಶೀಲನೆಗಾಗಿ ತೆರಳಿರುವುದು ಹಾಗೂ ಸಂದರ್ಶನ ಪುಸ್ತಕದಲ್ಲಿ ಅವರ ಸಹಿ ಮತ್ತು ಮಾಹಿತಿ ಇಲ್ಲದೇ ಇರುವುದು ಕಂಡು ಬಂದಿದೆ ಎಂದರು.
ಮಕ್ಕಳಿಗೆ ಮನೆಯಲ್ಲೇ ಊಟಅಂಗನವಾಡಿ ಕೇಂದ್ರಗಳ ಹತ್ತಿರ ಭೇಟಿ ನೀಡಿ ಮಾಹಿತಿ ನೀಡಿದ ಪೋಷಕರ ಪ್ರಕಾರ ಪ್ರಸ್ತುತ್ತ ಅಂಗನವಾಡಿ ಕೇಂದ್ರಗಳಲ್ಲಿ ಕೇವಲ ತರಕಾರಿ ಇಲ್ಲದ ಉಪ್ಪಿಟ್ಟು ಮತ್ತು ಮಿಲೇಟ್ಸ್ ಹುಂಡೆ ಮಾತ್ರ ನೀಡುತ್ತಿದ್ದು ಮಕ್ಕಳನ್ನು ಕೇಂದ್ರಗಳಿಗೆ ಕಳುಹಿಸಲು ಇಷ್ಟ ವಾಗುತ್ತಿಲ್ಲವೆಂದು ತಮ್ಮ ಮನೆಯಲ್ಲೇ ಇನ್ನು ಚನ್ನಾಗಿರುವ ಪೌಷ್ಟಿಕ ಆಹಾರವನ್ನು ನೀಡುತ್ತಿರುತ್ತೇವೆ ಎಂದು ತಿಳಿಸಿದ್ದಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪ್ಯಾನಲ್ ವಕೀಲರಾದ ಮಂಜುನಾಥರೆಡ್ಡಿ, ಸೌಜನ್ಯಗಾಂಧಿ,ವಂದನಾ,ಆಶಾ, ಇದ್ದರು.