ಅಂಗನವಾಡಿ ಕಲಿಕೆಯೇ ಮಕ್ಕಳ ಶಿಕ್ಷಣಕ್ಕೆ ಅಡಿಪಾಯ: ಶಾಸಕ ಹೆಬ್ಬಾರ್

| Published : Jun 26 2024, 12:32 AM IST

ಸಾರಾಂಶ

ಇಲಾಖೆಯಿಂದ ಮಕ್ಕಳಿಗಾಗಿ ನೀಡಲಾಗುವ ಮೊಟ್ಟೆ ಮುಂತಾದ ಪೌಷ್ಟಿಕ ಆಹಾರವನ್ನು ಗುಣಮಟ್ಟವಾಗಿ ತಯಾರಿಸಿ ನೀಡುವಂತೆ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರಿಗೆ ಶಾಸಕ ಹೆಬ್ಬಾರ್ ಸೂಚಿಸಿದರು.

ಮುಂಡಗೋಡ: ಅಂಗನವಾಡಿಯೇ ಮಕ್ಕಳ ಶಿಕ್ಷಣಕ್ಕೆ ಅಡಿಪಾಯವಾಗಿದ್ದು, ಅಂಗನವಾಡಿಯಲ್ಲಿ ಪೂರಕವಾದ ವಾತಾವರಣವಿರಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ್ ತಿಳಿಸಿದರು.

ತಾಲೂಕಿನ ಬೆಡಸಗಾಂವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ಯಾನವಳ್ಳಿ ಗ್ರಾಮದಲ್ಲಿ ನೂತನ ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.

ಇಲಾಖೆಯಿಂದ ಮಕ್ಕಳಿಗಾಗಿ ನೀಡಲಾಗುವ ಮೊಟ್ಟೆ ಮುಂತಾದ ಪೌಷ್ಟಿಕ ಆಹಾರವನ್ನು ಗುಣಮಟ್ಟವಾಗಿ ತಯಾರಿಸಿ ನೀಡುವಂತೆ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರಿಗೆ ಸೂಚಿಸಿದರು.

ಗ್ರಾಪಂ ಮಾಜಿ ಅಧ್ಯಕ್ಷ ಪ್ರಕಾಶ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ವಸಹಾಯ ಸಂಘದ ಸಭೆ ನಡೆಸಲು ಸಭಾಭವನ ಕಟ್ಟಡ ಮಂಜೂರಿ ಮಾಡುವಂತೆ ಮಹಿಳೆಯರು ಮನವಿ ಸಲ್ಲಿಸಿದರು. ಇದೇ ವೇಳೆ ಉತ್ತಮ ಗುಣಮಟ್ಟದ ಕಟ್ಟಡ ನಿರ್ಮಾಣ ಮಾಡಿದ ಗುತ್ತಿಗೆದಾರ ಆನಂದ ದೇವಾಡಿಗ ಅವರನ್ನು ಶಾಸಕ ಶಿವರಾಮ ಹೆಬ್ಬಾರ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯೆ ಮಾಲಿನಿ ನಾಯ್ಕ, ಕೋಮಲಾ ಗೌಡ, ಗುತ್ತಿಗೆದಾರ ಆನಂದ ದೇವಾಡಿಗ, ದೇವೇಂದ್ರ ನಾಯ್ಕ, ಪಿಡಿಒ ದಿವಾಕರ ಭಟ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ರಾಮು ಬಯಲುಸೀಮೆ, ಜಯದೇವ ನಾಯ್ಕ, ವೆಂಕಟರಮಣ ಮರಾಠಿ, ಈಶ್ವರ ಪೂಜಾರಿ, ಜ್ಞಾನೇಶ್ವರ ಗುಡಿಯಾಳ ಸೇರಿದಂತೆ ಸ್ಥಳೀಯ ಮುಖಂಡರು ಗ್ರಾಮಸ್ಥರು ಉಪಸ್ಥಿತರಿದ್ದರು.