ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಸಂಘದಿಂದ ಹುತಾತ್ಮ ಕಾರ್ಮಿಕರ ಸ್ಮರಣೆ

| Published : Apr 02 2025, 01:03 AM IST

ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಸಂಘದಿಂದ ಹುತಾತ್ಮ ಕಾರ್ಮಿಕರ ಸ್ಮರಣೆ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ ಹತ್ತಿ ಗಿರಣಿ ಕಾರ್ಮಿಕರ ಸಂಘಟನೆ ಸಂಘಟಿಸುವ ಸಂದರ್ಭದಲ್ಲಿ ಹುತಾತ್ಮರಾದ ಕಾರ್ಮಿಕ ನಾಯಕರಾದ ಸುರೇಶ್, ಶೇಖರಪ್ಪ ಅವರ 55ನೇ ಹುತಾತ್ಮರ ದಿನಾಚರಣೆ ಹಾಗೂ ಹಿರಿಯ ಕಾರ್ಮಿಕ ಮುಖಂಡ, ಮಾಜಿ ಶಾಸಕ ಪಂಪಾಪತಿ 23ನೇ ವರ್ಷದ ಸ್ಮರಣೆ ಕಾರ್ಯಕ್ರಮ ನಗರದ ಹೊರವಲಯದ ಆವರಗೆರೆ ಹುತಾತ್ಮರ ಸಮಾಧಿ ಬಳಿ ಮಂಗಳವಾರ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘ, ಎಚ್.ಕೆ.ರಾಮಚಂದ್ರಪ್ಪ ಬಣದಿಂದ ನಡೆಯಿತು.

- ಆವರಗೆರೆಯಲ್ಲಿ ಶೇಖರಪ್ಪ, ಸುರೇಶ್, ಪಂಪಾಪತಿ ಸಾಧನೆ ಸ್ಮರಣೆ

- - -

ದಾವಣಗೆರೆ: ದಾವಣಗೆರೆ ಹತ್ತಿ ಗಿರಣಿ ಕಾರ್ಮಿಕರ ಸಂಘಟನೆ ಸಂಘಟಿಸುವ ಸಂದರ್ಭದಲ್ಲಿ ಹುತಾತ್ಮರಾದ ಕಾರ್ಮಿಕ ನಾಯಕರಾದ ಸುರೇಶ್, ಶೇಖರಪ್ಪ ಅವರ 55ನೇ ಹುತಾತ್ಮರ ದಿನಾಚರಣೆ ಹಾಗೂ ಹಿರಿಯ ಕಾರ್ಮಿಕ ಮುಖಂಡ, ಮಾಜಿ ಶಾಸಕ ಪಂಪಾಪತಿ 23ನೇ ವರ್ಷದ ಸ್ಮರಣೆ ಕಾರ್ಯಕ್ರಮ ನಗರದ ಹೊರವಲಯದ ಆವರಗೆರೆ ಹುತಾತ್ಮರ ಸಮಾಧಿ ಬಳಿ ಮಂಗಳವಾರ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘ, ಎಚ್.ಕೆ.ರಾಮಚಂದ್ರಪ್ಪ ಬಣದಿಂದ ನಡೆಯಿತು.

ಸಂಘಟನೆ ಮುಖಂಡರು ಈ ಸಂದರ್ಭ ಮಾತನಾಡಿ, ಶೇಖರಪ್ಪ, ಸುರೇಶ್, ಪಂಪಾಪತಿ ಅವರ ಚಳವಳಿಗಳ ರೂಪರೇಷೆಗಳು, ಕಾರ್ಮಿಕರ ಪರವಾದ ನಿರ್ಧಾರಗಳು, ಸರ್ವರಿಗೂ ಸಮಾನತೆ ಆಶಯಗಳು, ತ್ಯಾಗ- ಬಲಿದಾನ ಅವಿಸ್ಮರಣೀಯ ಎಂದರು.

ಪಂಪಾಪತಿ 3 ಬಾರಿ ಶಾಸಕರಾಗಿ ದಾವಣಗೆರೆ ನಗರಕ್ಕೆ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಜನಸಾಮಾನ್ಯರ ಬಗ್ಗೆ ಬಹಳ ಕಾಳಜಿಯಿಂದ ಆಡಳಿತ ನಡೆಸಿದರು. ಜನಸಾಮಾನ್ಯರು ನೆಮ್ಮದಿ ಬದುಕಿಗೆ ಹಗಲು ಇರುಳು ದುಡಿದರು. ವಸತಿ ಇಲ್ಲದವರಿಗೆ 15,000 ನಿವೇಶನಗಳನ್ನು ಹಂಚಿ ಬಡವರು ನೆಮ್ಮದಿಯಾಗಿ ರಾತ್ರಿ ನಿದ್ದೆ ಮಾಡಲು ಕಾರಣಭೂತರಾದರು ಎಂದರು.

ನಗರದಲ್ಲಿ ಗಿಡ- ಮರಗಳನ್ನು ಕಾರ್ಮಿಕರಿಂದ ಬೆಳೆಸಿ ರಕ್ಷಿಸಲು ನಾಯಕತ್ವ ಕಾಳಜಿಯಿಂದ ವಹಿಸಿದ್ದರು. ಅಜಾತಶತ್ರುಗಳಾಗಿ ಆಡಳಿತ ನಡೆಸಿ, ನಾಯಕತ್ವ ಕೊಟ್ಟಿದ್ದರು. ಸ್ವಾರ್ಥವಿಲ್ಲದೇ ಕಾರ್ಮಿಕರಿಗೋಸ್ಕರ ಜೀವನ ಮುಡುಪಾಗಿಟ್ಟರು ಎಂದು ತಿಳಿಸಿದರು.

ದಾವಣಗೆರೆ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕರ ಸಂಘ ಜಿಲ್ಲಾ ಪದಾಧಿಕಾರಿಗಳಾದ ಜಿಲ್ಲಾಧ್ಯಕ್ಷೆ ಎಂ.ಬಿ. ಶಾರದಮ್ಮ ಜಿಲ್ಲಾ ಮುಖಂಡರಾದ ವಿಶಾಲಾಕ್ಷಿ ಮೃತುಂಜಯ, ತಾಲೂಕು ಅಧ್ಯಕ್ಷೆ ಎಂ.ಸರ್ವಮ್ಮ, ತಾಲೂಕು ಪ್ರಧಾನ ಕಾರ್ಯದರ್ಶಿ ಜೆ.ಎಂ. ಉಮಾ, ಖಜಾಂಚಿ ಸಿ.ಬಿ. ಕಾಳಮ್ಮ, ಸಂಘಟನಾ ಕಾರ್ಯದರ್ಶಿ ಚೌಡಮ್ಮ, ಹೊನ್ನಮ್ಮ, ಗಾಯಿತ್ರಿ, ಸಾವಿತ್ರ, ಸುಧಮ್ಮ, ಆಯುಷ, ರೇಣುಕಾ, ಶೀಲಾ, ಸುನಂದ, ಸುನೀತಾ ಮುಂತಾದ ಪದಾಧಿಕಾರಿಗಳು ಭಾಗವಹಿಸಿದ್ದರು.

- - -

-1ಕೆಡಿವಿಜಿ39:

ದಾವಣಗೆರೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಸಂಘದಿಂದ ಹುತಾತ್ಮರ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಿತು.