ಅಂಗರಗುಡ್ಡೆ: ಶಿಮಂತೂರು ಹಿಂದೂ ರುದ್ರ ಭೂಮಿಗೆ ಶಿಲಾನ್ಯಾಸ

| Published : Feb 17 2025, 12:33 AM IST

ಅಂಗರಗುಡ್ಡೆ: ಶಿಮಂತೂರು ಹಿಂದೂ ರುದ್ರ ಭೂಮಿಗೆ ಶಿಲಾನ್ಯಾಸ
Share this Article
  • FB
  • TW
  • Linkdin
  • Email

ಸಾರಾಂಶ

ಅಂಗರಗುಡ್ಡೆಯಲ್ಲಿ ಹಿಂದೂ ರುದ್ರಭೂಮಿ ನಿರ್ಮಾಣ ಸಮಿತಿಯ ಆಶ್ರಯದಲ್ಲಿ ನಿರ್ಮಾಣವಾಗಲಿರುವ ಹಿಂದೂ ರುದ್ರ ಭೂಮಿಯ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭವಾರ್ತೆ ಮೂಲ್ಕಿ

ಗ್ರಾಮ ಅಭಿವೃದ್ಧಿಯಲ್ಲಿ ರುದ್ರಭೂಮಿಯ ಅಗತ್ಯತೆ ಇದ್ದು ಸಂಘ ಸಂಸ್ಥೆ ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ರುದ್ರಭೂಮಿ ನಿರ್ವಹಣೆಯಾಗಬೇಕು ಎಂದು ಕಿನ್ನಿಗೋಳಿ ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ ಹೇಳಿದರು.

ಅಂಗರಗುಡ್ಡೆಯಲ್ಲಿ ಹಿಂದೂ ರುದ್ರಭೂಮಿ ನಿರ್ಮಾಣ ಸಮಿತಿಯ ಆಶ್ರಯದಲ್ಲಿ ನಿರ್ಮಾಣವಾಗಲಿರುವ ಹಿಂದೂ ರುದ್ರ ಭೂಮಿಯ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅತಿಕಾರಿಬೆಟ್ಟು ಗ್ರಾ.ಪಂ. ಅಧ್ಯಕ್ಷೆ ಶಶಿಕಲಾ ಅಧ್ಯಕ್ಷತೆ ವಹಿಸಿದ್ದು ಮೂಲ್ಕಿ ವಿಜಯ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಂಗನಾಥ ಶೆಟ್ಟಿ, ಗ್ರಾ. ಪಂ. ಉಪಾಧ್ಯಕ್ಷ ಮನೋಹರ ಕೋಟ್ಯಾನ್‌, ಭಜನಾ ಮಂದಿರ ಅಧ್ಯಕ್ಷ ಸಂಪತ್ ಕುಮಾರ್, ಹಿಂದೂ ರುದ್ರ ಭೂಮಿ ಸಮಿತಿ ಅಧ್ಯಕ್ಷ ಕೃಷ್ಣ ಶೆಟ್ಟಿಗಾರ್, ಕೋಶಾಧಿಕಾರಿ ತಾರಾನಾಥ್ ದೇವಾಡಿಗ, ವಿಜಯ್ ಭಂಡಾರಿ, ಉಪಾಧ್ಯಕ್ಷ ಕಿಶೋರ್ ದೇವಾಡಿಗ, ಮೋಹಿನಿ ಸಾಲಿಯಾನ್, ನವೀನ್ ಪಂಬದ, ಮಹಿಳಾ ಮಂಡಲದ ಅಧ್ಯಕ್ಷೆ ಅನಿತಾ ಶೆಟ್ಟಿ ಹಾಗೂ ಸದಸ್ಯರಾದ ದಿನೇಶ್ ಕೋಟ್ಯಾನ್, ಸುದೀರ್ ಶೆಟ್ಟಿ, ಜೀವನ್ ಶೆಟ್ಟಿ, ಕೇಶವ್ ದೇವಾಡಿಗ, ಹರೀಶ್ ಸಪಳಿಗ, ರಾಘವೇಂದ್ರ, ಆನಂದ್, ಸತೀಶ್ ಪೂಜಾರಿ, ಪ್ರಶಾಂತ್ ಕೋಟ್ಯಾನ್, ಯೋಗೀಶ್, ಶಿವಮೇಸ್ತಿç, ಜಯ ಸಾಲಿಯಾನ್, ಸಂದೇಶ್ ಆಚಾರ್ಯ, ಸತೀಶ್ ಆಚಾರ್ಯ, ಪ್ರತಿಕ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಪ್ರವೀಣ್ ಆರ್ ಶೆಟ್ಟಿ ಸ್ವಾಗತಿಸಿದರು. ಸತೀಶ್ ಪೂಜಾರಿ ವಂದಿಸಿದರು.