ಸಾರಾಂಶ
ಹಾನಗಲ್ಲ: ನಗರಕ್ಕೆ ಕುಡಿಯುವ ನೀರು ಪೂರೈಸುವ ಪ್ರಮುಖ ಮೂಲವಾಗಿರುವ ಆನಿಕೆರೆ ಉತ್ತಮ ಮಳೆಯಿಂದ ಭರ್ತಿಯಾಗಿ ಕೋಡಿ ಬಿದ್ದಿರುವ ಹಿನ್ನೆಲೆಯಲ್ಲಿ ಶಾಸಕ ಶ್ರೀನಿವಾಸ ಮಾನೆ ಅವರು ಗಂಗಾಪೂಜೆ ನೆರವೇರಿಸಿ, ಬಾಗಿನ ಅರ್ಪಿಸಿದರು. ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ ಶಾಸಕ ಮಾನೆ, ಈ ಬಾರಿ ಆನಿಕೆರೆ ಭರ್ತಿಯಾಗಿರುವುದರಿಂದ ನಿಟ್ಟುಸಿರು ಬಿಡುವಂತಾಗಿದೆ. ಕಳೆದ ಬಾರಿ ಆನಿಕೆರೆ ಭರ್ತಿಯಾಗದ ಕಾರಣ ಕುಡಿಯುವ ನೀರು ಪೂರೈಸಲು ಸಮಸ್ಯೆ ಅನುಭವಿಸುವಂತಾಗಿತ್ತು. ಒಟ್ಟು ೧೨೦ ಎಕರೆ ವಿಶಾಲ ಪ್ರದೇಶದಲ್ಲಿರುವ ಕೆರೆ ಭರ್ತಿಯಾಗಿರುವುದರಿಂದ ಈ ಬಾರಿ ನಿರಾಳ ಭಾವ ಆವರಿಸಿದೆ. ಆನಿಕೆರೆಗೆ ನೀರು ಪೂರೈಸುವ ಮಳಗಿ ಧರ್ಮಾ ಜಲಾಶಯವೂ ಭರ್ತಿಯಾಗಿರುವುದು ಖುಷಿ ತಂದಿದೆ. ಸಂಗ್ರಹಗೊಂಡಿರುವ ಜಲಮೂಲ ಸದ್ಬಳಕೆ ಮಾಡಿಕೊಂಡು ನಗರದ ನಿವಾಸಿಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸುವಂತೆ ಪುರಸಭೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.ತಾಲೂಕು ತಹಸೀಲ್ದಾರ್ ಎಸ್. ರೇಣುಕಮ್ಮ, ಪುರಸಭೆ ಮಾಜಿ ಅಧ್ಯಕ್ಷರಾದ ನಾಗಪ್ಪ ಸವದತ್ತಿ, ಖುರ್ಷಿದ ಹುಲ್ಲತ್ತಿ, ಸದಸ್ಯರಾದ ಮಹೇಶ ಪವಾಡಿ, ಮಮತಾ ಆರೆಗೊಪ್ಪ, ಶಂಶಿಯಾ ಬಾಳೂರ, ವೀಣಾ ಗುಡಿ, ಪರಶುರಾಮ ಖಂಡೂನವರ, ಸುರೇಶ ನಾಗಣ್ಣನವರ, ಮೇಕಾಜಿ ಕಲಾಲ, ಅಬ್ದುಲಗನಿ ಪಾಳಾ, ಗುರುರಾಜ ನಿಂಗೋಜಿ, ಆದರ್ಶ ಶೆಟ್ಟಿ, ಮಾಲತೇಶ ಕಾಳೇರ, ಉಷಾ ಸುಲಾಖೆ, ಮರ್ದಾನಸಾಬ ಬಡಗಿ, ಮುನ್ನಾ ನಾಯಕ, ಮುನ್ನಾ ಪಠಾಣ, ರಾಜೇಶ ಗುಡಿ, ಸಿಕಂದರ ವಾಲಿಕಾರ, ಬಾಳಾರಾಮ ಗುರ್ಲಹೊಸೂರ, ಮುಖ್ಯಾಧಿಕಾರಿ ಜಗದೀಶ ವೈ.ಕೆ., ಅಭಿಯಂತರ ನಾಗರಾಜ ಮಿರ್ಜಿ, ಅಧಿಕಾರಿಗಳಾದ ಎನ್.ಎಸ್. ನಾಗನೂರ, ಶಿವಾನಂದ ಕ್ಯಾಲಕೊಂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.