ಕೋಲಾರ ಜಿಲ್ಲೆಗೆ ವರದಾನವಾದ ಹೈನೋದ್ಯಮ

| Published : Feb 13 2024, 12:46 AM IST

ಸಾರಾಂಶ

ಜಿಲ್ಲೆಯಿಂದ ಉತ್ಪಾದನೆ ಆಗುವಂತಹ ಹಾಲು ದೇಶಾದ್ಯಂತ ರಪ್ತು ಮಾಡಲಾಗುತ್ತಿದೆ. ಜೊತೆಗೆ ಗಡಿ ಕಾಯುವ ಯೋಧರಿಗೂ ಪೂರೈಕೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಕೋಲಾರದಲ್ಲಿ ನಿರ್ಮಾಣ ಮಾಡಬೇಕಾಗಿರುವ ಎಂವಿ ಕೃಷ್ಣಪ್ಪ ಗೋಲ್ಡನ್ ಡೇರಿ ನಿರ್ಮಾಣಗೊಳ್ಳುವ ವಿಶ್ವಾಸ

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

೫೦ ವರ್ಷಗಳ ಹಿಂದೆ ಎಂವಿ. ಕೃಷ್ಣಪ್ಪ ಡೆನ್ಮಾರ್ಕ್ ನಿಂದ ಹಸುಗಳನ್ನು ತಂದು ರಾಜ್ಯದ ಜನತೆಗೆ ಪರಿಚಯಿಸಿದ ಫಲವಾಗಿ ಬರಗಾಲದಲ್ಲಿಯೂ ಜಿಲ್ಲೆಯ ಜನ ಹೈನೋದ್ಯಮವನ್ನು ನಂಬಿ ಜೀವನ ನಿರ್ವಹಣೆ ಮಾಡಲು ವರದಾನವಾಗಿದೆ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹೇಳಿದರು. ತಾಲೂಕಿನ ಕೆ.ಕದಿರೇನಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದಿಂದ ನೂತನವಾಗಿ ನಿರ್ಮಿಸಿದ ನೂತನ ಕಟ್ಟಡ, ಬಿಎಂಸಿ ಕೇಂದ್ರ ಮತ್ತು ಬಿಎಂ. ಕೃಷ್ಣಪ್ಪನವರ ಪುತ್ಥಳಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.

ಪ್ರತಿನಿತ್ಯ 10 ಲಕ್ಷ ಲೀ. ಹಾಲು ಉತ್ಪಾದನೆ

ಕೋಲಾರ ಜಿಲ್ಲೆಯ ಜನ ಹೈನುಗಾರಿಕೆಯನ್ನು ಹೆಚ್ಚಾಗಿ ಮುಖ್ಯ ಕಸುಬಾಗಿಸಿಕೊಂಡಿರುವುದರಿಂದ ನಿತ್ಯ ೧೦ ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ರಾಜ್ಯದಲ್ಲಿಯೇ ಕೋಲಾರ ಜಿಲ್ಲೆಯ ರೈತರಿಗೆ ಹೆಚ್ಚಿನ ಬೆಲೆಯನ್ನು ನೀಡಿ ಕೋಚಿಮುಲ್ ಹಾಲನ್ನು ಖರೀದಿ ಮಾಡುತ್ತಿರುವುದರಿಂದ ಕಷ್ಟಕಾಲದಲ್ಲಿಯೂ ಜನ ನೆಮ್ಮದಿಯಿಂದ ಜೀವನ ಸಾಗಿಸುವಂತಾಗಿದೆ ಎಂದರು.

ಜಿಲ್ಲೆಯಿಂದ ಉತ್ಪಾದನೆ ಆಗುವಂತಹ ಹಾಲು ದೇಶಾದ್ಯಂತ ರಪ್ತು ಮಾಡಲಾಗುತ್ತಿದೆ. ಜೊತೆಗೆ ಗಡಿ ಕಾಯುವ ಯೋಧರಿಗೂ ಪೂರೈಕೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಕೋಲಾರದಲ್ಲಿ ನಿರ್ಮಾಣ ಮಾಡಬೇಕಾಗಿರುವ ಎಂವಿ ಕೃಷ್ಣಪ್ಪಗೋಲ್ಡನ್ ಡೇರಿಗೆ ಹಲವು ಅಡೆತಡೆಗಳು ಬರುತ್ತಿವೆ. ಎಲ್ಲವನ್ನೂ ನಿವಾರಿಸಿ ಶೀಘ್ರವಾಗಿ ಗೋಲ್ಡನ್ ಡೇರಿ ನಿರ್ಮಾಣಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು.

ಗುಣಮಟ್ಟದ ಹಾಲು ಪೂರೈಸಿಕೋಚಿಮುಲ್ ನಿರ್ದೇಶಕ ಜಯಸಿಂಹ ಕೃಷ್ಣಪ್ಪ ಮಾತನಾಡಿ, ಖಾಸಗಿ ಡೇರಿಗಳು ಜಿಲ್ಲೆಯಲ್ಲಿ ಆರಂಭವಾಗಿ ನಮ್ಮ ರೈತರಿಗೆ ಹೆಚ್ಚಿನ ಬೆಲೆ ನೀಡುತ್ತೇವೆ ಹಾಲನ್ನು ಪೂರೈಸಿ ಎಂದು ಮರಳು ಮಾಡಲು ಹೊರಟಿದ್ದಾರೆ. ಇದ್ಯಾವುದಕ್ಕೂ ಕಿವಿಕೊಡದೆ ಸಂಘಕ್ಕೆ ಗುಣಮಟ್ಟದ ಹಾಲನ್ನು ಪೂರೈಸಿ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎಂ. ಮುನಿರಾಜು, ಕೋಚಿಮುಲ್‌ನ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಗೋಪಾಲಮೂರ್ತಿ, ಪ್ರಧಾನ ವ್ಯವಸ್ಥಾಪಕ ಶ್ರೀನಿವಾಸಗೌಡ, ಕೆವಿ. ಮುರಳಿ, ಮೋಹನ್ ಬಾಬು, ಶಂಕರ್ ರೆಡ್ಡಿ, ಕೆ.ವೆಂಕಟರಮಣ, ಎಸ್.ಕೆ.ಡಿ.ಆರ್.ಡಿ.ಪಿಯ ಯೋಜನಾಧಿಕಾರಿ ಚೇತನ್ ಕುಮಾರ್, ಸಬ್‌ಇನ್‌ಸ್ಪೆಕ್ಟರ್‌ ಕಿರಣ್, ತಾ.ಪಂ ಮಾಜಿ ಅಧ್ಯಕ್ಷ ಮಹದೇವ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿಚ್ಚಳ್ಳಿ ಗೋವಿಂದರಾಜು, ಎ.ಬಾಬು ಡೇರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೆಂಕಟರಾಮಯ್ಯ ಮುಂತಾದವರು ಹಾಜರಿದ್ದರು.