ಪ್ರಾಣಿ ಕಲ್ಯಾಣ ಮಂಡಳಿ ಪ್ರಚಾರಕ್ಕೆ ಕೋಣ ಬಲಿ ರದ್ದು

| Published : Apr 05 2024, 01:04 AM IST

ಸಾರಾಂಶ

ಪ್ರಾಣಿ ಕಲ್ಯಾಣ ಮಂಡಳಿ ಪ್ರಚಾರದಿಂದ ಸಮೀಪದ ಹಾಲಿವಾಣ ಗ್ರಾಮದಲ್ಲಿ ಏರ್ಪಡಿಸಿದ್ದ ಏಳೂರು ಕರಿಯಮ್ಮ ದೇವಿ ಜಾತ್ರೆಯಲ್ಲಿ ಕೋಣ ಬಲಿ ನಿಷೇಧ ಮಾಡಿದ್ದಾರೆ.

ಮಲೇಬೆನ್ನೂರು: ಪ್ರಾಣಿ ಕಲ್ಯಾಣ ಮಂಡಳಿ ಪ್ರಚಾರದಿಂದ ಸಮೀಪದ ಹಾಲಿವಾಣ ಗ್ರಾಮದಲ್ಲಿ ಏರ್ಪಡಿಸಿದ್ದ ಏಳೂರು ಕರಿಯಮ್ಮ ದೇವಿ ಜಾತ್ರೆಯಲ್ಲಿ ಕೋಣ ಬಲಿ ನಿಷೇಧ ಮಾಡಿದ್ದಾರೆ. ಈ ಕುರಿತು ಕಲ್ಯಾಣ ಮಂಡಳಿ ಅಧ್ಯಕ್ಷ ದಯಾನಂದ ಸ್ವಾಮೀಜಿ ವ್ಯಾಪ್ತಿಯ ಏಳೂರು ಗ್ರಾಮದ ಭಕ್ತರಿಗೆ ಪತ್ರಿಕಾ ಹೇಳಿಕೆಯಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ.

ಏಳೂರು ವ್ಯಾಪ್ತಿಯ ಹಾಲಿವಾಣ, ದಿಬ್ಬದಹಳ್ಳಿ, ಎರೆಹಳ್ಳಿ, ಹಾಲಿವಾಣ, ಕೊಪ್ಪ, ಚಿಕ್ಕಹಾಲಿವಾಣ, ತಿಮ್ಲಾಪುರ ಗ್ರಾಮಗಳಲ್ಲಿ ಪ್ರಾಣಿ, ಪಶು, ಪಕ್ಷಿ, ಕೋಳಿಗಳನ್ನು ಯಾವುದೇ ಜಾತ್ರೆಗಳಲ್ಲಿ ಬಲಿ ಕೊಡಬಾರದು ಈ ಬಗ್ಗೆ ರಾಜ್ಯದ ಶ್ರೇಷ್ಠ ನ್ಯಾಯಾಲಯಗಳು ಆದೇಶ ಮಾಡಿವೆ ಎಂದು ಧ್ವನಿವರ್ಧಕ ಮೂಲಕ ಪ್ರಚಾರ ಮಾಡಲಾಗಿತ್ತು. ಮಾ.18ರಿಂದ ೨೧ವರೆಗೆ ಒಂದು ಗುಂಪು ಏಳೂರು ಕರಿಯಮ್ಮ ದೇವಿ ಜಾತ್ರೆ ನಡೆಸಿತ್ತು. ಯಾವುದೇ ಪ್ರಾಣಿ, ಪಶು ಬಲಿ ನೀಡಿಲ್ಲ, ಮತ್ತೆ ಎರಡನೇ ಗಂಪು ಏ.1ರಿಂದ ೫ರವರೆಗೆ ಹಾಲಿವಾಣ ಗ್ರಾಮದಲ್ಲಿ ಹಮ್ಮಿಕೊಂಡ ಕರಿಯಮ್ಮ ದೇವಿ ಜಾತ್ರಯಲ್ಲಿಯೂ ಸಹ ಪೋಲೀಸ್ ಬಂದೋಬಸ್ತ್‌ನಲ್ಲಿ ಹಾಲಿವಾಣದ ಬೀದಿ ಬೀದಿಗಳಲ್ಲಿ ಪ್ರಚಾರ ಮಾಡಿ ಕರ ಪತ್ರಗಳನ್ನು ಹಂಚಿ ಕಾನೂನು ಬಗ್ಗೆ ತಿಳಿಸಿ ಜಾಗೃತಿ ಮೂಡಿಸಲಾಗಿತ್ತು. ಆ ಕಾರಣಕ್ಕೆ ದೇವಾಲಯದ ಆವರಣದಲ್ಲಿ ಯಾವುದೇ ಪ್ರಾಣಿ, ಕುರಿ, ಕೋಣ, ಮೇಕೆ, ಕೋಳಿ ಇತರೆ ಪ್ರಾಣಿಗಳ ಬಲಿ ತಡೆ ಸಂಪೂರ್ಣ ಯಶಸ್ವಿಯಾಗಿದೆ. ಕೋಣ ನಮ್ಮ ವಶದಲ್ಲಿದೆ ಎಂದು ದಯಾನಂದ ಸ್ವಾಮೀಜಿ ಹರ್ಷ ವ್ಯಕ್ತಪಡಿಸಿದ್ದಾರೆ.ಸಂದೇಶ ಯಾತ್ರೆಯ ಕಾರ್ಯಾಚರಣೆಗೆ ಸಹಕರಿಸಿದ ತಾಲೂಕು, ಜಿಲ್ಲಾಡಳಿತ, ಪೋಲೀಸ್ ಇಲಾಖೆಗೆ ಹಾಗೂ ಭಕ್ತರಿಗೆ ತಮ್ಮ ಅಭಿನಂದನೆ ಸಲ್ಲಿಸಿದ್ದಾರೆ.

ಭಾರತ ಸಂಪೂರ್ಣ ಮಾಂಸ ರಫ್ತು ಮುಕ್ತ ಹಾಗೂ ಸಂಪೂರ್ಣ ಗೋವಂಶ ಜಾನುವಾರು ಹತ್ಯೆ ಮುಕ್ತ ರಾಜ್ಯ ಘೋಷಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಸ್ವಾಮೀಜಿ ಆಗ್ರಹಿಸಿದ್ದಾರೆ.

ಕರ್ನಾಟಕ ಪ್ರಾಣಿ ಬಲಿಗಳ ಪ್ರತಿಬಂಧಕ ಅಧಿನಿಯಮ ೧೯೫೯, ನಿಯಮಗಳು, ೧೯೬೩ ತಿದ್ದುಪಡಿ ಕಾಯ್ದೆ, ೧೯೭೫ರಡಿ ಪೋಲಿಸ್ ಅಧಿಕಾರಿಗಳು, ಮಹಿಳಾ ಸಂಚಾಲಕಿ ಸುನಂದ ಮತ್ತು ಕಾರ್ಯಕರ್ತ ಶರಣಪ್ಪನವರ ಶ್ರಮ ಇದೆ ಎಂದು ಸ್ವಾಮೀಜಿ ಸ್ಮರಿಸಿದ್ದಾರೆ.